ಮಂಗಳೂರಿನ ಅಗ್ನಿಶಾಮಕ ಸಿಬ್ಬಂದಿಗಳಲ್ಲೂ ಕೊರೊನಾತಂಕ; ಕೊರೊನಾ ವಾರಿಯರ್ಸ್ಗೆ ಹೆಚ್ಚಿನ ಸೌಲಭ್ಯ ಒದಗಿಸುವಂತೆ ಆಗ್ರಹ
ಕದ್ರಿ ಅಗ್ನಿಶಾಮಕದಳ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನವೀನ್ ಆಂದ್ರೆ ಎಂಬ ಅಗ್ನಿಶಾಮಕ ಅಧಿಕಾರಿ ಕೊರೊನಾಗೆ ಬಲಿಯಾಗಿದ್ದಾರೆ. 54 ವರ್ಷದ ನವೀನ್ ಆಂದ್ರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 14 ದಿನ ಜೀವನ್ಮರಣದ ಮಧ್ಯೆ ಹೋರಾಡಿ ಪ್ರಾಣ ಬಿಟ್ಟಿದ್ದಾರೆ.
ದಕ್ಷಿಣ ಕನ್ನಡ: ಕೊರೊನಾ ಎರಡನೆ ಅಲೆ ಕರಾವಳಿಯನ್ನು ಹಲವು ಮಜಲುಗಳಲ್ಲಿ ಕಾಡುತ್ತಿದ್ದು, ಕೊರೊನಾದಿಂದ ಜನರು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ. ಕೊವಿಡ್ ಕೊರೊನಾ ವಾರಿಯರ್ಸ್ನ ಮೇಲೆ ತನ್ನ ಕದಂಬಬಾಹುವನ್ನು ಚಾಚಿದೆ. ಸದ್ಯ ಮಂಗಳೂರಿನಲ್ಲಿ ಅಗ್ನಿಶಾಮಕದಳದ ಸಿಬ್ಬಂದಿಗಳಿಗೆ ಕೊರೊನಾ ಕಾಟ ಶುರುವಾಗಿದ್ದು, ಇದರಿಂದಾಗಿ ಅಗ್ನಿ ಅವಘಡ ಮತ್ತು ನೀರಿನ ಅವಗಡ ಸಂಭವಿಸಿದಾಗ ಅಥವಾ ಇನ್ನಿತರ ತುರ್ತು ಪರಿಸ್ಥಿತಿ ಬಂದಾಗ ಜನರನ್ನು ರಕ್ಷಣೆ ಮಾಡಲು ಸಿಬ್ಬಂದಿಗಳ ಕೊರತೆ ಉಂಟಾಗಿದೆ.
ಕೊರೊನಾ ವಾರಿಯರ್ಸ್ಗೆ ಸರ್ಕಾರ ವಿವಿಧ ರೀತಿಯಲ್ಲಿ ಸೌಲಭ್ಯಗಳನ್ನು ನೀಡಿದೆ. ಆದರೂ ಕೂಡ ಕೊರೊನಾ ಸೋಂಕಿಗೆ ತುತ್ತಾಗುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಸದ್ಯ ಕದ್ರಿ ಅಗ್ನಿಶಾಮಕದಳ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನವೀನ್ ಆಂದ್ರೆ ಎಂಬ ಅಗ್ನಿಶಾಮಕ ಅಧಿಕಾರಿ ಕೊರೊನಾಗೆ ಬಲಿಯಾಗಿದ್ದಾರೆ. 54 ವರ್ಷದ ನವೀನ್ ಆಂದ್ರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 14 ದಿನ ಜೀವನ್ಮರಣದ ಮಧ್ಯೆ ಹೋರಾಡಿ ಪ್ರಾಣ ಬಿಟ್ಟಿದ್ದಾರೆ.
ಇನ್ನು ಇದೇ ಅಗ್ನಿಶಾಮಕ ಕಚೇರಿಯಲ್ಲಿ 6 ಜನ ಸಿಬ್ಬಂದಿಗಳು ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಷ್ಟೆ ಅಲ್ಲದೆ ಮಂಗಳೂರಿನಲ್ಲಿ ಇರುವ ವಿವಿಧ ಅಗ್ನಿಶಾಮಕದಳ ಕಚೇರಿಯ ಹಲವು ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಆಗಿದೆ. ತುರ್ತು ಸಂದರ್ಭದಲ್ಲಿ ಜನಜಂಗುಳಿ ಇರುವ ಕಡೆ ಕೆಲಸ ನಿರ್ವಹಿಸಿರುವ ಕಾರಣಕ್ಕೆ ಕೊರೊನಾ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ಅಗ್ನಿಶಾಮಕದಳ ಸಿಬ್ಬಂದಿಗಳು ಚಂಡಮಾರುತದ ಅವಘಡ ಸಂದರ್ಭದಲ್ಲೂ ಕೂಡ ವಿವಿಧ ಕಡೆ ಹೋಗಿ ಕೆಲಸ ಮಾಡುತ್ತಾರೆ. ಇನ್ನು ಯಾಸ್ ಚಂಡಮಾರುತದ ಸಂದರ್ಭದಲ್ಲಿ ಕೂಡ ಅಗ್ನಿಶಾಮಕ ದಳ ಕೆಲಸ ನಿರ್ವಹಿಸಬೇಕಾಗಿರುವುದರಿಂದ ಸರ್ಕಾರ ಈ ಬಗ್ಗೆ ಗಮನಹರಿಸಿ ಸಿಬ್ಬಂದಿಗಳ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ.
ಇದನ್ನೂ ಓದಿ:
ಕೊರೊನಾ ಸೋಂಕು ಕಾರಣ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣ ವಿಚಾರಣೆ: ಕರ್ನಾಟಕ ಹೈಕೋರ್ಟ್
‘ತೇರಿ ಮಿಟ್ಟೀ ಮೇ ಮಿಲ್ ಜಾವಾ’ ಹಾಡು ನುಡಿಸಿ ಕೊರೊನಾ ವಾರಿಯರ್ಸ್ಗೆ ಕೃತಜ್ಞತೆ ಸಲ್ಲಿಸಿದ ಐಟಿಬಿಪಿ ಕಾನ್ಸ್ಟೇಬಲ್