ಖಾಸಗಿ ಆಸ್ಪತ್ರೆಗಳಲ್ಲಿವೆ 10,500 ಬೆಡ್‌ಗಳು, ಆದರೆ ಅಲ್ಲಿ ಸಮಸ್ಯೆಗಳೂ ಇವೆ..

|

Updated on: Jul 15, 2020 | 5:45 PM

ಕರ್ನಾಟಕ: ರಾಜ್ಯದಲ್ಲಿ ಲಾಕ್‌ಡೌನ್‌ನಿಂದಾಗಿ ಇಗಾಗಲೆ 58 ಖಾಸಗಿ ಆಸ್ಪತ್ರೆಗಳು ಮುಚ್ಚಿವೆ.  ಅಲ್ಲದೆ ಶೇಕಡಾ 20ರಷ್ಟು ಸಿಬ್ಬಂದಿ ಕೆಲಸ ಮಾಡಲು ಬರುತ್ತಿಲ್ಲ. ಇದರಿಂದ ಖಾಸಗಿ ಆಸ್ಪತ್ರೆಗಳಲ್ಲಿ 10,500 ಬೆಡ್‌ಗಳು ಖಾಲಿ ಇದ್ದರೂ ಸಹ ಸಿಬ್ಬಂದಿ ಕೊರತೆಯಿಂದಾಗಿ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿ ಮಾಡಿದಷ್ಟು ಬೇಡ್ ಗಳನ್ನ ನಿಡಲಾಗುತ್ತಿಲ್ಲವೆಂದು ಫನಾ ಅಸೋಸಿಯೇಷನ್ ಅಧ್ಯಕ್ಷ ಡಾ. ರವೀಂದ್ರ ತಮ್ಮ ಅಳಲು ತೊಡಿಕೊಂಡಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ ಸಮಸ್ಯೆ ಮತ್ತು ಆಸ್ಪತ್ರೆಗೆ ರೋಗಿಗಳ ಅಲೆದಾಟ ತಪ್ಪಿಸಲು ಮ್ಯಾನ್ ಪವರ್ ಬೇಕೇಬೇಕು. ಆದರೆ ಖಾಸಗಿ […]

ಖಾಸಗಿ ಆಸ್ಪತ್ರೆಗಳಲ್ಲಿವೆ 10,500 ಬೆಡ್‌ಗಳು, ಆದರೆ ಅಲ್ಲಿ ಸಮಸ್ಯೆಗಳೂ ಇವೆ..
Follow us on

ಕರ್ನಾಟಕ: ರಾಜ್ಯದಲ್ಲಿ ಲಾಕ್‌ಡೌನ್‌ನಿಂದಾಗಿ ಇಗಾಗಲೆ 58 ಖಾಸಗಿ ಆಸ್ಪತ್ರೆಗಳು ಮುಚ್ಚಿವೆ.  ಅಲ್ಲದೆ ಶೇಕಡಾ 20ರಷ್ಟು ಸಿಬ್ಬಂದಿ ಕೆಲಸ ಮಾಡಲು ಬರುತ್ತಿಲ್ಲ. ಇದರಿಂದ ಖಾಸಗಿ ಆಸ್ಪತ್ರೆಗಳಲ್ಲಿ 10,500 ಬೆಡ್‌ಗಳು ಖಾಲಿ ಇದ್ದರೂ ಸಹ ಸಿಬ್ಬಂದಿ ಕೊರತೆಯಿಂದಾಗಿ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿ ಮಾಡಿದಷ್ಟು ಬೇಡ್ ಗಳನ್ನ ನಿಡಲಾಗುತ್ತಿಲ್ಲವೆಂದು ಫನಾ ಅಸೋಸಿಯೇಷನ್ ಅಧ್ಯಕ್ಷ ಡಾ. ರವೀಂದ್ರ ತಮ್ಮ ಅಳಲು ತೊಡಿಕೊಂಡಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ ಸಮಸ್ಯೆ ಮತ್ತು ಆಸ್ಪತ್ರೆಗೆ ರೋಗಿಗಳ ಅಲೆದಾಟ ತಪ್ಪಿಸಲು ಮ್ಯಾನ್ ಪವರ್ ಬೇಕೇಬೇಕು. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 20ರಷ್ಟು ಸಿಬ್ಬಂದಿ ಕೆಲಸ ಮಾಡಲು ಬರುತ್ತಿಲ್ಲ. ಜೊತೆಗೆ ವೈದ್ಯರೂ ಸಹ ಕೆಲಸ ಮಾಡಲು ಮುಂದೆ ಬರುತ್ತಿಲ್ಲ ಹಾಗಾಗಿ ಸರ್ಕಾರ ಶೇ. 50ರಷ್ಟು ಬೆಡ್‌ ಕೇಳಿದ್ರೆ ನಮ್ಮ ಬಳಿ ಇಲ್ಲ.

ನಮ್ಮ ಬಳಿ ಸಲಕರಣೆ ಇದೆ, ಆದ್ರೆ ಮ್ಯಾನ್‌ ಪವರ್ ಇಲ್ಲ. ಪ್ರಮುಖವಾಗಿ ಆಯಾ ವಾರ್ಡ್‌ ಬಾಯ್‌ಗಳೂ ಸಹ ಕೆಲಸಕ್ಕೆ ಬರುತ್ತಿಲ್ಲ. ಆದುದರಿಂದ ಸರ್ಕಾರ ಏನಾದ್ರು ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗೆ ಹೆಲ್ತ್ ಇನ್ಸ್ಶೂರೆನ್ಸ್ ನೀಡಿದ್ರೆ ಸರ್ಕಾರ ಬೇಡಿಕೆ ಇಟ್ಟಿರುವಷ್ಟು ಬೆಡ್‌ ಸೇವೆ ನೀಡಬಹುದಾಗಿ ತಿಳಿಸಿದ್ದಾರೆ.