ಸಿಎಂ ಯಡಿಯೂರಪ್ಪ ಎಚ್ಚರಿಕೆಗೆ ಮಣಿದ ವೈದ್ಯಕೀಯ ಕಾಲೇಜುಗಳು

|

Updated on: Jul 18, 2020 | 5:59 PM

ಕರ್ನಾಟಕ:ಮುಖ್ಯಮಂತ್ರಿ ಯಡಿಯೂರಪ್ಪ ಅವರ ಎಚ್ಚರಿಕೆಗೆ ಮಣಿದ ಖಾಸಗಿ ವೈದ್ಯಕೀಯ ಕಾಲೇಜುಗಳು ಶೇಕಡಾ 50ರಷ್ಟು ಬೆಡ್ ನೀಡಲು ಸಿಎಂ ಸಭೆಯಲ್ಲಿ ಒಪ್ಪಿಗೆ ಸೂಚಿಸಿವೆ. ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳ ಆಡಳಿತ ಮಂಡಳಿ ಜತೆ ನಡೆದ ಸಭೆಯಲ್ಲಿ ನಾಳೆಯಿಂದಲೇ ಶೇ. 50 ರಷ್ಟು ಬೆಡ್ ನೀಡಲು ಖಾಸಗಿ ವೈದ್ಯಕೀಯ ಕಾಲೇಜುಗಳು ಒಪ್ಪಿದ್ದಲ್ಲದೆ, ಕೆಲವು ಕಾಲೇಜುಗಳು ‌ಶೇ. 80ರಷ್ಟು ಬೆಡ್ ಕೊಡಲು ಸಹ ಒಪ್ಪಿಕೊಂಡಿವೆ ಎನ್ನಲಾಗಿದೆ. ಜೊತೆಗೆ ಎಲ್ಲಾ ವೈದ್ಯಕೀಯ ‌ಕಾಲೇಜುಗಳ‌ ಮೇಲೆ ನಿಗಾ ಇಡುವಂತೆ ಅಧಿಕಾರಿಗಳಿಗೆ ಸಿಎಂ […]

ಸಿಎಂ ಯಡಿಯೂರಪ್ಪ ಎಚ್ಚರಿಕೆಗೆ ಮಣಿದ ವೈದ್ಯಕೀಯ ಕಾಲೇಜುಗಳು
Follow us on

ಕರ್ನಾಟಕ:ಮುಖ್ಯಮಂತ್ರಿ ಯಡಿಯೂರಪ್ಪ ಅವರ ಎಚ್ಚರಿಕೆಗೆ ಮಣಿದ ಖಾಸಗಿ ವೈದ್ಯಕೀಯ ಕಾಲೇಜುಗಳು ಶೇಕಡಾ 50ರಷ್ಟು ಬೆಡ್ ನೀಡಲು ಸಿಎಂ ಸಭೆಯಲ್ಲಿ ಒಪ್ಪಿಗೆ ಸೂಚಿಸಿವೆ.

ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳ ಆಡಳಿತ ಮಂಡಳಿ ಜತೆ ನಡೆದ ಸಭೆಯಲ್ಲಿ ನಾಳೆಯಿಂದಲೇ ಶೇ. 50 ರಷ್ಟು ಬೆಡ್ ನೀಡಲು ಖಾಸಗಿ ವೈದ್ಯಕೀಯ ಕಾಲೇಜುಗಳು ಒಪ್ಪಿದ್ದಲ್ಲದೆ, ಕೆಲವು ಕಾಲೇಜುಗಳು ‌ಶೇ. 80ರಷ್ಟು ಬೆಡ್ ಕೊಡಲು ಸಹ ಒಪ್ಪಿಕೊಂಡಿವೆ ಎನ್ನಲಾಗಿದೆ.

ಜೊತೆಗೆ ಎಲ್ಲಾ ವೈದ್ಯಕೀಯ ‌ಕಾಲೇಜುಗಳ‌ ಮೇಲೆ ನಿಗಾ ಇಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದು, ಬೆಡ್ ವಿಚಾರದಲ್ಲಿ ಮುಚ್ಚುಮರೆ ಮಾಡಿದ್ರೆ‌ ಲೈಸೆನ್ಸ್ ರದ್ದು ಮಾಡುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.