ಕೊರೊನಾಗೆ ಬೆಚ್ಚಿಬಿದ್ದ ಬೆಸ್ಕಾಂ ಸಿಬ್ಬಂದಿ, ಇಂದು 6 ಮಂದಿಗೆ ಪಾಸಿಟಿವ್
ಬೆಂಗಳೂರು: ಬೆಸ್ಕಾಂ ಹೆಲ್ಪ್ ಲೈನ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಪೈಕಿ ಇಂದು 6 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಕಚೇರಿಯಲ್ಲಿ ನಾವು ಕೆಲಸ ಮಾಡಲ್ಲ ಎಂದು ಸಿಬ್ಬಂದಿ ವರ್ಗದವರು ಪ್ರತಿಭಟನೆ ಮಾಡಿದ ಘಟನೆ ಬೆಸ್ಕಾಂ ಹೆಲ್ಪ್ ಲೈನ್ ಕಚೇರಿಯಲ್ಲಿ ನಡೆದಿದೆ. ಮೊದಲು ಒಂದು ಪಾಸಿಟಿವ್ ಕೇಸ್ ಬಂದಾಗ ಕಂಟ್ರೋಲ್ ರೂಮ್ ವಿಭಾಗವನ್ನ ಸ್ಯಾನಿಟೈಸ್ ಮಾಡದೆ ಮೇಲಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ. ಆದರೆ ಈಗ ಒಂದೇ ದಿನ 6 ಮಂದಿಗೆ ಕೊರೋನಾ ಪಾಸಿಟಿವ್ ಬಂದಿರುವುದು ಸಿಬ್ಬಂದಿ ವರ್ಗದವರಲ್ಲಿ ಆತಂಕವನ್ನುಂಟು […]
ಬೆಂಗಳೂರು: ಬೆಸ್ಕಾಂ ಹೆಲ್ಪ್ ಲೈನ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಪೈಕಿ ಇಂದು 6 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಕಚೇರಿಯಲ್ಲಿ ನಾವು ಕೆಲಸ ಮಾಡಲ್ಲ ಎಂದು ಸಿಬ್ಬಂದಿ ವರ್ಗದವರು ಪ್ರತಿಭಟನೆ ಮಾಡಿದ ಘಟನೆ ಬೆಸ್ಕಾಂ ಹೆಲ್ಪ್ ಲೈನ್ ಕಚೇರಿಯಲ್ಲಿ ನಡೆದಿದೆ.
ಮೊದಲು ಒಂದು ಪಾಸಿಟಿವ್ ಕೇಸ್ ಬಂದಾಗ ಕಂಟ್ರೋಲ್ ರೂಮ್ ವಿಭಾಗವನ್ನ ಸ್ಯಾನಿಟೈಸ್ ಮಾಡದೆ ಮೇಲಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ. ಆದರೆ ಈಗ ಒಂದೇ ದಿನ 6 ಮಂದಿಗೆ ಕೊರೋನಾ ಪಾಸಿಟಿವ್ ಬಂದಿರುವುದು ಸಿಬ್ಬಂದಿ ವರ್ಗದವರಲ್ಲಿ ಆತಂಕವನ್ನುಂಟು ಮಾಡಿದೆ. ಜೊತೆಗೆ ನಮಗೆ ರೋಗ ಬಂದ್ರೆ ಆಡಳಿತ ಮಂಡಳಿ ಚಿಕಿತ್ಸೆ ಕೊಡಿಸುವ ಭರವಸೆಯನ್ನು ಸಹ ನೀಡ್ತಿಲ್ಲ ಅಂತಾ ಸಿಬ್ಬಂದಿ ವರ್ಗದವರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.