ಅನಿಲ್‌ಕುಮಾರ್ ಎತ್ತಂಗಡಿಗೆ ಒಂದೇ ಕಾರಣ ಇಲ್ವಂತೆ, ಹಾಗಿದ್ರೆ ಇನ್ನೆಷ್ಟು ಕಾರಣ?
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ವಿಪತ್ತು ಎದುರಿಸುವಲ್ಲಿ ಹೈಕೋರ್ಟ್‌ನಿಂದ ಮತ್ತು ಸಾರ್ವಜನಿಕರಿಂದ ತೀವ್ರ ಮುಜುಗರ ಅನುಭವಿಸಿದ ರಾಜ್ಯ ಸರ್ಕಾರ ಬಿಬಿಎಂಪಿ ಆಯುಕ್ತ ಅನಿಲ್‌ಕುಮಾರ್ ಅವರನ್ನು ಎತ್ತಂಗಡಿ ಮಾಡಿದೆ. ಆದ್ರೆ ರಾಜ್ಯ ಸರ್ಕಾರದ ಹಿರಿಯ ಸಚಿವ ಸುರೇಶ್‌ಕುಮಾರ್ ಮಾತ್ರ, ಅನಿಲ್‌ಕುಮಾರ್ ವರ್ಗಾವಣೆಗೆ ಅದೊಂದೆ ಕಾರಣವಲ್ಲ ಎನ್ನುವ ಮೂಲಕ ಕುತೂಹಲಕಾರಿ ಸ್ಟೇಟ್‌ಮೆಂಟ್ ನೀಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸುರೇಶ್‌ಕುಮಾರ್, ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ವರ್ಗಾವಣೆಗೆ ಕೇವಲ ಒಂದೇ ವಿಚಾರ ಇಲ್ಲ, ಹೈಕೋರ್ಟ್ ನಲ್ಲಿ ಬಿಬಿಎಂಪಿ ಬಗ್ಗೆ ಕೆಲವು […]
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ವಿಪತ್ತು ಎದುರಿಸುವಲ್ಲಿ ಹೈಕೋರ್ಟ್‌ನಿಂದ ಮತ್ತು ಸಾರ್ವಜನಿಕರಿಂದ ತೀವ್ರ ಮುಜುಗರ ಅನುಭವಿಸಿದ ರಾಜ್ಯ ಸರ್ಕಾರ ಬಿಬಿಎಂಪಿ ಆಯುಕ್ತ ಅನಿಲ್‌ಕುಮಾರ್ ಅವರನ್ನು ಎತ್ತಂಗಡಿ ಮಾಡಿದೆ. ಆದ್ರೆ ರಾಜ್ಯ ಸರ್ಕಾರದ ಹಿರಿಯ ಸಚಿವ ಸುರೇಶ್‌ಕುಮಾರ್ ಮಾತ್ರ, ಅನಿಲ್‌ಕುಮಾರ್ ವರ್ಗಾವಣೆಗೆ ಅದೊಂದೆ ಕಾರಣವಲ್ಲ ಎನ್ನುವ ಮೂಲಕ ಕುತೂಹಲಕಾರಿ ಸ್ಟೇಟ್‌ಮೆಂಟ್ ನೀಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸುರೇಶ್‌ಕುಮಾರ್, ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ವರ್ಗಾವಣೆಗೆ ಕೇವಲ ಒಂದೇ ವಿಚಾರ ಇಲ್ಲ, ಹೈಕೋರ್ಟ್ ನಲ್ಲಿ ಬಿಬಿಎಂಪಿ ಬಗ್ಗೆ ಕೆಲವು ಘಟನೆಗಳಾಗಿವೆ. ಜೊತೆಗೆ ಮಂಜುನಾಥ್ ಪ್ರಸಾದ್‌ಗೆ ಕೂಡಾ ಈ ಹಿಂದೆ ಆಯುಕ್ತರಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ, ಅಧಿಕಾರಿಗಳಿಗೆ ಯಾವುದೇ ಹುದ್ದೆ ಶಾಶ್ವತ ಅಲ್ಲ, ಯಾವ್ಯಾವ ಅಧಿಕಾರಿ ಎಲ್ಲಿ ಕೆಲಸ ಮಾಡಬೇಕು ಅನ್ನೋದು ಸಿಎಂ ವಿವೇಚನೆಗೆ ಬಿಟ್ಟ ನಿರ್ಧಾರ, ಇದು ಎಲ್ಲರ ಸಹಮತದ ಪ್ರಶ್ನೆ ಅಲ್ಲ ಎನ್ನುವ ಮೂಲಕ ಅದು ಕೇವಲ ಸಿಎಂ ಅವರ ನಿರ್ಧಾರ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.
ಕೋರ್ಟ್ ತೀರ್ಪು, ಕೋವಿಡ್ ಸ್ಥಿತಿ ಆಧರಿಸಿ ಸಿಎಂ ಆದೇಶ ಮಾಡಿದ್ದಾರೆ. ಅನಿಲ್ ಕುಮಾರ್ ಸಮರ್ಥ ಅಧಿಕಾರಿಯಾಗಿದ್ದರು ಹಾಗೇನೇ ಮಂಜುನಾಥ್ ಪ್ರಸಾದ್ ಕೂಡಾ ಸಮರ್ಥರಿದ್ದಾರೆ ಎಂದು ಅಡ್ಡಗೊಡೆ ಮೇಲೆ ದೀಪ ಇಟ್ಟಂತೆ ತಮಗೂ ವರ್ಗಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಸೂಚ್ಯವಾಗಿ ಹೊರಹಾಕಿದ್ದಾರೆ.