ಧಾರವಾಡ: ಸರ್ಕಾರ ನಮ್ಮ ಮೇಲೆ ಗುಂಡು ಹಾರಿಸಿದ್ರೂ ನಾವು ಹೆದರಲ್ಲ. ಕರಾಳ ಕೃಷಿ ಕಾನೂನು ಹಿಂಪಡೆಯೋವರೆಗೂ ವಿರಮಿಸಲ್ಲ ಎಂದು ನಗರದಲ್ಲಿ ಸರ್ಕಾರಕ್ಕೆ ರಾಷ್ಟ್ರೀಯ ರೈತ ಹೋರಾಟಗಾರ ರಾಕೇಶ್ ಟಿಕಾಯತ್ ಎಚ್ಚರಿಕೆ ಕೊಟ್ಟಿದ್ದಾರೆ. ರೈತರ ಸಭೆ ನಡೆಸಲು ಸರ್ಕಾರದಿಂದ ಪರವಾನಗಿ ಪಡೆಯಲ್ಲ. ಸಭೆಯ ಮಾಹಿತಿಯನ್ನು ಅಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.
ಜೊತೆಗೆ, ಕೇಂದ್ರ ಸರ್ಕಾರದಿಂದ ಸಾರ್ವಜನಿಕ ವಲಯದಲ್ಲಿ ಖಾಸಗೀಕರಣ ಮಾಡಲಾಗುತ್ತಿದೆ. ರಾಜ್ಯಸಭೆಯಲ್ಲಿಯೂ ವ್ಯಾಪಾರಿಗಳು ಎಂಟ್ರಿಯಾಗುತ್ತಿದ್ದಾರೆ. ಮುಂದೆ ಸಂಸತ್ ಖಾಸಗೀಕರಣವಾದರೂ ಆಶ್ಚರ್ಯವಿಲ್ಲ ಎಂದು ಟಿಕಾಯತ್ ಹೇಳಿದ್ದಾರೆ. ಮೊದಲು ರೈತ ದೇಶದ ಮಾಲೀಕನಾಗಿದ್ದ. ಅದರೆ, ಈಗ ಉದ್ಯಮಿಗಳು ನಮ್ಮ ದೇಶದ ಮಾಲೀಕರಾಗಿದ್ದಾರೆ ಅಂತಾ ಸರ್ಕಾರದ ವಿರುದ್ಧ ಟಿಕಾಯತ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ‘ಆರೋಪಿ ಬೀದಿ ಗೂಳಿಯಂತೆ ಓಡಾಡಿಕೊಂಡಿದ್ದಾನೆ.. ಇಷ್ಟಾದ್ರೂ ಅವರನ್ನು ಬಂಧಿಸದಂತೆ ಯಾವ ಶಕ್ತಿ ತಡೆಯುತ್ತಿದೆ?’