ಮಂಗಳೂರು, ಅಕ್ಟೋಬರ್ 06: ಮಧ್ಯ ಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷ ಹೆಚ್ಚುತ್ತಿದೆ. ಈ ಮಧ್ಯೆ ಮಂಗಳೂರಿನಲ್ಲಿ ಪ್ಯಾಲೆಸ್ತೀನ್ (Palestinian) ಪರ ಒಲವು ಹೆಚ್ಚಾಗಿದೆ. ಪ್ಯಾಲೆಸ್ತೀನ್ ಬೆಂಬಲಿಗರ ಆಕ್ರೋಶದ ಹಿನ್ನೆಲೆ ಮಂಗಳೂರಿನ ಖಾಸಗಿ ಬಸ್ ಮಾಲೀಕ ಇಸ್ರೇಲ್ ಟ್ರಾವೆಲ್ಸ್ ಎಂದು ತನ್ನ ಬಸ್ ಹೆಸರನ್ನೇ ಬದಲಿಸಿದ್ದಾರೆ.
ಇಸ್ರೇಲ್ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಬಸ್ ಮಾಲೀಕ ಲೆಸ್ಟರ್, ಕಳೆದ 12 ವರ್ಷಗಳಿಂದ ಇಸ್ರೇಲ್ನಲ್ಲಿ ಉದ್ಯೋಗ ನಿಮಿತ್ತ ಕುಟುಂಬದೊಂದಿಗೆ ನೆಲೆಸಿದ್ದಾರೆ. ಬಸ್ ಮಾಲೀಕನ ಇಸ್ರೇಲ್ ಅಭಿಮಾನಕ್ಕೆ ಪ್ಯಾಲೆಸ್ತೀನ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ರೀತಿ ಹೋಲುವ ಶಾಮಿಯಾನ
ಬಸ್ಗೆ ಇಸ್ರೇಲ್ ಹೆಸರು ಇಟ್ಟಿದ್ದನ್ನು ಸಹಿಸದ ಪ್ಯಾಲೆಸ್ತೀನ್ ಬೆಂಬಲಿಗರು. ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ಸಿನ ಹೆಸರು ಬದಲಿಸದಿದ್ದರೆ ಸೀಜ್ ಮಾಡಿಸುತ್ತೇವೆ ಎಂದು ಪೊಲೀಸರ ಬೆದರಿಕೆ ಆರೋಪ ಕೇಳಿಬಂದಿದ್ದು, ಇದರ ಬೆನ್ನಲ್ಲೇ ಇಸ್ರೇಲ್ ಹೆಸರು ಬದಲಿಸಿ ಜೆರುಸಲೇಂ ಟ್ರಾವೆಲ್ಸ್ ಎಂದು ಹೆಸರು ಬದಲಾಯಿಸಿದ್ದಾರೆ.
ಕೋಲಾರ: ಇತ್ತೀಚೆಗೆ ಕೋಲಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಈದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಕೆಲ ಯುವಕರ ಗುಂಪು ಬಾವುಟ ಪ್ರದರ್ಶನ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದ ಕೋಲಾರ ನಗರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದರು. ಕೋಲಾರ ನಗರದ ಆರೀಪ್ ಪಾಷಾ, ಸಯ್ಯದ್ ಸಾಭೀರ್, ಮೊಹಮದ್ ಸಾದ್, ಹಯಾಜ್ ಪಾಷಾ ಬಂಧಿತರು.
ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಬಾವುಟ ಪ್ರದರ್ಶನ ಮಾಡಿದ್ದ ಆರೋಪಿಗಳಾಗಿದ್ದು, ಘಟನೆ ನಂತರ ಬಾವುಟ ಸಮೇತ ನಾಪತ್ತೆಯಾಗಿದ್ದ ಆರೋಪಿಗಳನ್ನ ಬಂಧಿಸಲಾಗಿದೆ. ಇನ್ನೂ ಕೋಲಾರ ನಗರದ ಅಂಜುಮನ್ ಕಚೇರಿ ಬಳಿ ಈದ್ ಮಿಲಾದ್ ವೇಳೆ ಪ್ಲಾಗ್ ಪ್ರದರ್ಶನ ಮಾಡಿದ್ದ ಆರೋಪಿಗಳು ಪೊಲೀಸರ ಎಚ್ಚರಿಸಿದ ಬಳಿಕ ಬಾವುಟ ಸಮೇತ ಪರಾರಿಯಾಗಿದ್ದರು.
ಇದನ್ನೂ ಓದಿ: ಚಿಕ್ಕಮಗಳೂರು: ಪ್ಯಾಲೆಸ್ಟೈನ್ ಧ್ವಜ ಹಿಡಿದು ಬೈಕ್ನಲ್ಲಿ ಓಡಾಡಿದ ನಾಲ್ವರು ಅಪ್ರಾಪ್ತರು ವಶ
ಅದರಂತೆ ಕಾರ್ಯಚರಣೆ ನಡೆಸಿದ ಕೋಲಾರ ನಗರ ಠಾಣಾ ಪೊಲೀಸರು 4 ಜನರನ್ನ ಬಂಧಿಸಿದ್ದರು. ಅದರಂತೆ ಕೋಲಾರದಲ್ಲಿ ಹಿಂದು-ಮುಸ್ಲಿಂ ಅನೋನ್ಯವಾಗಿದ್ದು, ಇಂತಹ ಕೋಮುಗಲಭೆ ಸೃಷ್ಠಿಸುವಂತಹ ಪ್ರಕರಣಗಳು ನಡೆಯದಂತೆ ಎಸ್ಪಿ ಹಾಗೂ ಡಿಸಿ ಅವರು ಎಚ್ಚರ ವಹಿಸಬೇಕಿದೆ ಎಂದು ಕೋಲಾರ ಸಂಸದ ಮಲ್ಲೇಶ್ ಬಾಬು ಸಲಹೆ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.