ಬೆಳಗಾವಿ: ಪೋಷಣ ಅಭಿಯಾನದ ಹೆಸರೇಳಿ ಬಾಣಂತಿಯರ ಅಕೌಂಟ್‌ಗೆ ಕನ್ನ ಹಾಕುತ್ತಿರುವ ಸೈಬರ್ ಖದೀಮರು
ಕೇಂದ್ರ ಸರ್ಕಾರದ ಪೋಷಣ ಅಭಿಯಾನದ ಹೆಸರು ಹೇಳಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ವಂಚನೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಸೈಬರ್ ಕ್ರಿಮಿನಲ್‌ಗಳು ಯೋಜನೆಗಳ ಹೆಸರನ್ನೇ ಬಳಸಿಕೊಂಡು ವಂಚನೆ ಮಾಡುತ್ತಿದ್ದಾರೆ ಹೀಗಾಗಿ ಎಚ್ಚರಿಕೆಯಿಂದಿರಿ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ತಿಳಿಸಿದ್ದಾರೆ.
ಬೆಳಗಾವಿ, ಅ.06: ಕೇಂದ್ರ ಸರ್ಕಾರದ ಪೋಷಣ ಅಭಿಯಾನದ ಹೆಸರು ಹೇಳಿ ಬಾಣಂತಿಯರ ಅಕೌಂಟ್‌ಗೆ ಕನ್ನ ಹಾಕಲಾಗುತ್ತಿದೆ. ಅಧಿಕಾರಿಗಳ ಹೆಸರು ಹೇಳಿ ನಿಮ್ಮ ನಂಬರ್ಗೆ ಫೋನ್ ಬರುತ್ತೆ (Cyber Crime). ನಿಮ್ಮ ಹೆಸರು, ನಿಮ್ಮ ಏರಿಯಾ ಅಂಗನವಾಡಿ ಹೆಸರು ಹೇಳಿ. ಸರ್ಕಾರದಿಂದ ನಿಮ್ಮ ಅಕೌಂಟ್‌ಗೆ 7,500 ಹಣ ಜಮಾವಣೆ ಮಾಡಲಾಗುತ್ತೆ ಎಂದು ಗರ್ಭಿಣಿ ಮಹಿಳೆಯರನ್ನು ನಂಬಿಸಿ ಖದೀಮರು ಮೋಸ ಮಾಡುತ್ತಿದ್ದಾರೆ. ಘಟನೆ ಸಂಬಂಧ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಪ್ರತಿಕ್ರಿಯೆ ನೀಡಿದ್ದು ಯಾರು ಕೂಡ ಓಟಿಪಿ ಹೇಳಬೇಡಿ, ಲಿಂಕ್ ಓಪನ್ ಮಾಡಬೇಡಿ ಅಂತಾ ಮನವಿ ಮಾಡಿದ್ದಾರೆ.
ಸೈಬರ್ ಖದೀಮರು, ಫೋನ್ ಫೇ ಅಥವಾ ಗೂಗಲ್ ಫೇ ಓಪನ್ ಮಾಡಿಸಿ ಲಿಂಕ್ ಕಳುಹಿಸುತ್ತಾರೆ. ಹೀಗೆ ಕಳುಹಿಸಿದ ಲಿಂಕ್ ಓಪನ್ ಮಾಡಿಸಿ ನಿಮ್ಮ ಅಕೌಂಟ್ ನಲ್ಲಿರುವ ಎಲ್ಲಾ ಹಣ ಎಗರಿಸುತ್ತಾರೆ. ಸೈಬರ್ ವಂಚಕರಿಂದ ಹೊಸ ಮಾದರಿಯಲ್ಲಿ ವಂಚನೆ ಮಾಡ್ತಿರುವುದು ಬೆಳಕಿಗೆ ಬಂದಿದೆ. ಬೆಳಗಾವಿ ನಗರದಲ್ಲಿ ಎರಡೇ ದಿನದಲ್ಲಿ ಐದು ಜನ ಬಾಣಂತಿಯರಿಗೆ ವಂಚನೆ ಆಗಿದೆ. ಸುಮಾರು 84ಸಾವಿರಕ್ಕೂ ಅಧಿಕ ಹಣ ವಂಚನೆ ಮಾಡಲಾಗಿದೆ.
ಗರ್ಭಿಣಿಯರು, ಬಾಣಂತಿಯರು, ಆರು ವರ್ಷದ ಒಳಗಿನ ಮಕ್ಕಳ ದಾಖಲೆ ಇರುವ ಪೋಷಣ ಟ್ರ್ಯಾಕರ್ ಆ್ಯಪ್ ಹ್ಯಾಕ್ ಮಾಡಿ ಡಾಟಾ ಕಲೆಕ್ಟ್ ಮಾಡ್ತಿದ್ದಾರೆ. ಕೇಂದ್ರ ಸರ್ಕಾರದ ಪೋಷಣ ಅಭಿಯಾನದ ಆ್ಯಪ್ನಲ್ಲಿ ಗರ್ಭಿಣಿ, ಬಾಣಂತಿಯರ ಹೆಸರು, ವಿಳಾಸ, ಊರು ಮತ್ತು ಫೋನ್ ನಂಬರ್ ಇರುತ್ತೆ. ಇದರಲ್ಲಿ ಡಾಟಾ ಕಲೆಕ್ಟ್ ಮಾಡಿ ವಂಚನೆ ಸೈಬರ್ ವಂಚಕರು ವಂಚನೆ ಮಾಡ್ತಿದ್ದಾರೆ. ಹಣ ಕಳೆದುಕೊಂಡು ಕಂಗಾಲಾದ ಬಾಣಂತಿ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಘಟನೆ ಸಂಬಂಧ ಅಂಗನವಾಡಿ ಶಿಕ್ಷಕಿಯರು ಗರ್ಭಿಣಿ ಹಾಗೂ ಬಾಣಂತಿಯರು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಮನೆ ಮನೆಗೆ ಹೋಗಿ ಹಾಗೂ ವಾಟ್ಸಪ್ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಈ ಕುರಿತು ಬೆಳಗಾವಿ ನಗರ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 90 ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ
ಘಟನೆ ಸಂಬಂಧ ಮಾತನಾಡಿದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಪೋಷಣ ಯೋಜನೆ ಹೆಸರು ಹೇಳಿ ಅಧಿಕಾರಿಗಳು ಎಂದು ಕರೆ ಮಾಡುತ್ತಾರೆ. ನಿಮ್ಮ ಅಕೌಂಟ್ ಗೆ 7,500 ಹಣ ಹೋಗುತ್ತೆ ಅಂತಾ ಹೇಳ್ತಾರೆ. ಬಾಣಂತಿಯರಿಗೆ ಹಣ ಬಂದಿದೆ ಎಂದು ನಂಬಿಸುತ್ತಾರೆ. ಗೂಗಲ್ ಪೇ ಓಪನ್ ಮಾಡಿ ಎಂದು ಹೇಳಿ. ಒಂದು ಲಿಂಕ್ ಕಳುಹಿಸುತ್ತೇನೆ ಅದನ್ನ ಓಪನ್ ಮಾಡಿ ಅಂತಾರೆ.
ಲಿಂಕ್ ಕ್ಲಿಕ್ ಮಾಡಿದ್ರೇ ಎಲ್ಲಾ ದುಡ್ಡು ಅವರ ಅಕೌಂಟ್‌ಗೆ ಹೋಗುತ್ತೆ. ಹೀಗೆ ಐದು ಜನ ಬಾಣಂತಿಯರಿಗೆ ಮೋಸ ಆಗಿದೆ. 82 ಸಾವಿರ ಹಣ ಬಾಣಂತಿಯರು ಕಳೆದುಕೊಂಡಿದ್ದಾರೆ. ಈ ಕುರಿತು ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆನ್ ಲೈನ್ ವಂಚಕರಿಗೆ ನಂಬರ್ ಗಳು ಹೇಗೆ ಸಿಕ್ಕಿವೆ. ಡಾಟಾ ಎಲ್ಲಿಂದ ಕಲೆಕ್ಟ್ ಮಾಡಿದ್ದಾರೆ ಅಂತಾ ತನಿಖೆ ಮಾಡ್ತಿದ್ದೇವೆ. ವಂಚನೆ ಮಾಡಿದವರ ವಿರುದ್ಧ ತನಿಖೆ ಶುರು ಮಾಡಿದ್ದು ಆರೋಪಿಗಳ ಮಾಹಿತಿ ಕಲೆ ಹಾಕ್ತಿದ್ದೇವೆ. ಯಾರಿಗೆ ಕರೆ ಮಾಡಿ ಹಣ ಹಾಕುತ್ತೇವೆ ಲಿಂಕ್ ಓಪನ್ ಮಾಡಿ ಅಂದ್ರೆ ಮಾಡಬೇಡಿ. ಯಾರು ಕೂಡ ಓಟಿಪಿ ಹೇಳಬೇಡಿ, ಲಿಂಕ್ ಓಪನ್ ಮಾಡಬೇಡಿ ಅಂತಾ ಮನವಿ ಮಾಡಿದ್ದಾರೆ. ಸಾರ್ವಜನಿಕರಿಗೆ ಹಾಗೂ ಬಾಣಂತಿಯರು, ಗರ್ಭಿಣಿಯರಿಗೆ ಯಡಾ ಮಾರ್ಟಿನ್ ಮನವಿ ಮಾಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ