ಬೆಂಗಳೂರು: ಸದ್ಯ, ಬೆಳಗ್ಗೆಯಿಂದ 75 ಬಸ್ಗಳು ಸಂಚಾರ ಆರಂಭಿಸಿವೆ ಎಂದು BMTC ಸಂಸ್ಥೆ ಮಾಹಿತಿ ನೀಡಿದೆ. BMTC ಸಾರಿಗೆ ನೌಕರರ ಧರಣಿ ನಡುವೆಯೂ 75 ಬಸ್ ಸಂಚಾರ ನಡೆಸುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಇತ್ತ, ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ಗೆ ಜಂಬೂಸವಾರಿ ದಿಣ್ಣೆಯಿಂದ 4ನೇ ಬಸ್ ಆಗಮಿಸಿತು. ಜೊತೆಗೆ, ಎಲ್ಲಾ ಡಿಪೋಗಳಿಂದ ಬಸ್ಗಳನ್ನ ಆಪರೇಟ್ ಮಾಡಲು ಡಿಪೋ ಮ್ಯಾನೇಜರ್ಗಳಿಗೆ ಸೂಚನೆ ನೀಡಲಾಗಿದೆ. ಆಯಾ ಡಿಪೋ ಮ್ಯಾನೇಜರ್ಗಳಿಂದ ಚಾಲಕ, ನಿರ್ವಾಹಕರಿಗೆ ಸೂಚನೆ ನೀಡಲಾಗಿದೆ. ಈ ನಡುವೆ, ಬಸ್ಗಳನ್ನ ಓಡಿಸಲು ಕೆಲ ಚಾಲಕರು ಹಾಗೂ ನಿರ್ವಾಹಕರು ಮುಂದಾದರು.
ಸದ್ಯ, ಪೊಲೀಸ್ ಭದ್ರತೆಯಲ್ಲಿ ಬಸ್ ಸಂಚಾರ ಆರಂಭವಾಗಿದ್ದು ದೀಪಾಂಜಲಿನಗರದಿಂದ ಸುಮನಹಳ್ಳಿಗೆ ಬಸ್ ಸೇವೆ ಶುರುಮಾಡಲಾಗಿದೆ. ಪ್ರತಿ ಬಸ್ನಲ್ಲಿ ಓರ್ವ ಪೊಲೀಸ್ ಸಿಬ್ಬಂದಿಯನ್ನು ಕೂರಿಸಿ ಭದ್ರತೆ ಒದಗಿಸಲಾಗಿದೆ.
‘ಮೆಕ್ಯಾನಿಕ್ಗಳು BMTC ಬಸ್ಗಳನ್ನು ಚಲಾಯಿಸುತ್ತಿದ್ದಾರೆ’
ಇತ್ತ, ಬಸ್ ಸಂಚಾರ ಆರಂಭವಾದ ಹಿನ್ನೆಲೆಯಲ್ಲಿ ಚಾಲಕರು ಯಾರೂ ಬಸ್ ಚಾಲನೆ ಮಾಡುತ್ತಿಲ್ಲ. ಮೆಕ್ಯಾನಿಕ್ಗಳು BMTC ಬಸ್ಗಳನ್ನು ಚಲಾಯಿಸುತ್ತಿದ್ದಾರೆ ಎಂದು ಪ್ರತಿಭಟನಾನಿರತ ಸಾರಿಗೆ ನೌಕರರು ಹೇಳಿದ್ದಾರೆ. ಜೊತೆಗೆ, ನಮ್ಮ ವಿರುದ್ಧ ಎಸ್ಮಾ ಜಾರಿ ಮಾಡಿದ್ರೂ ನಾವು ಎದುರಿಸ್ತೀವಿ. ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಡೆಸ್ತೀವಿ ಎಂದು ಸ್ಯಾಲರಿ ಸ್ಲಿಪ್ ಕೈಯಲ್ಲಿ ಹಿಡಿದು ಸಿಬ್ಬಂದಿ ಯಶವಂತಪುರ ಡಿಪೋ ಬಳಿ ಪ್ರತಿಭಟನೆ ಮುಂದುವರಿಸಿದರು.
ಸಾರಿಗೆ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರದ ಮಾಸ್ಟರ್ ಪ್ಲ್ಯಾನ್: ರೆಡಿಯಾಯ್ತು 2 ತಂತ್ರ
Published On - 9:47 am, Sat, 12 December 20