ಭಕ್ತರಿಗೆ ಹಂಚಿ ಉಳಿದ ಆಹಾರವನ್ನು ನದಿಗೆ ಸುರಿದ ಸಿಬ್ಬಂದಿ; ಸಾರ್ವಜನಿಕರ ಆಕ್ರೋಶ

ಹೇಮಾವತಿ ನದಿಯ ದಡದಲ್ಲಿರುವ ದೇವಸ್ಥಾನದಲ್ಲಿ ಮಿಕ್ಕಿರುವ ಅನ್ನ, ಸಾಂಬಾರ್ ಇನ್ನಿತರ ತ್ಯಾಜ್ಯವನ್ನ ನದಿಗೆ ಹಾಕಲಾಗುತ್ತಿದೆ. ಇದು ಇಲ್ಲಿನ ಸುತ್ತಮುತ್ತ ವಾತಾವರಣವನ್ನು ಹಾಳು ಮಾಡುತ್ತಿದ್ದು, ದೇವಾಲಯದ ಆಡಳಿತ ಮಂಡಳಿ ಶೀಘ್ರವೇ ಈ ಬಗ್ಗೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಭಕ್ತರಿಗೆ ಹಂಚಿ ಉಳಿದ ಆಹಾರವನ್ನು ನದಿಗೆ ಸುರಿದ ಸಿಬ್ಬಂದಿ; ಸಾರ್ವಜನಿಕರ ಆಕ್ರೋಶ
ಉಳಿದ ಆಹಾರವನ್ನು ನದಿಗೆ ಹಾಕುತ್ತಿರುವ ದೃಶ್ಯ
Edited By:

Updated on: Mar 21, 2021 | 1:41 PM

ಮಂಡ್ಯ: ಭಕ್ತರಿಗೆ ಹಂಚಿ ಉಳಿದ ಆಹಾರವನ್ನು ನದಿಗೆ ಸುರಿದ ಸಿಬ್ಬಂದಿಯ ವಿರುದ್ಧ ಆಕ್ರೋಶ ಕೇಳಿ ಬರುತ್ತಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕಲ್ಲಹಳ್ಳಿಯ ಭೂ ವರಹನಾಥಸ್ವಾಮಿ ದೇಗುಲ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕೆಆರ್‌ಎಸ್ ಹಿನ್ನೀರು, ಹೇಮಾವತಿ ನದಿಗೆ ತ್ಯಾಜ್ಯ ಸುರಿಯುತ್ತಿದ್ದಾರೆ. ಇದರಿಂದ ಮಾಲಿನ್ಯ ಹೆಚ್ಚಾಗುತ್ತಿದೆ. ಹೀಗಾಗಿ ದೇವಸ್ಥಾನದ ಆಡಳಿತ ಮಂಡಳಿಗೆ ನದಿಗೆ ತ್ಯಾಜ್ಯ ಸುರಿದು ಮಾಲಿನ್ಯ ಮಾಡದಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಹೇಮಾವತಿ ನದಿಯ ದಡದಲ್ಲಿರುವ ದೇವಸ್ಥಾನದಲ್ಲಿ ಮಿಕ್ಕಿರುವ ಅನ್ನ, ಸಾಂಬಾರ್ ಇನ್ನಿತರ ತ್ಯಾಜ್ಯವನ್ನ ನದಿಗೆ ಹಾಕಲಾಗುತ್ತಿದೆ. ಇದು ಇಲ್ಲಿನ ಸುತ್ತಮುತ್ತ ವಾತಾವರಣವನ್ನು ಹಾಳು ಮಾಡುತ್ತಿದ್ದು, ದೇವಾಲಯದ ಆಡಳಿತ ಮಂಡಳಿ ಶೀಘ್ರವೇ ಈ ಬಗ್ಗೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ದೇವಾಲಯದಂತಹ ಪವಿತ್ರವಾದ ಸ್ಥಳಗಳಲ್ಲಿಯೇ ಈ ರೀತಿ ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡದೇ ಇರುವುದು ನಿಜಕ್ಕೂ ಸಮಂಜಸವಾದ ಕಾರ್ಯವಲ್ಲ. ಅದರಲ್ಲೂ ನೀರಿನ ವಿಷಯಕ್ಕೆ ಬಂದರೆ ಶುದ್ಧತೆಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಭಕ್ತಾದಿಗಳಿಗೆ ನೀಡುವ ಪ್ರಸಾದ ಇನ್ನಿತರ ಆಹಾರಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವುದು ಸಾಮಾಜಿಕ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಭೂ ವರಹನಾಥಸ್ವಾಮಿ ದೇಗುಲದ ಆಡಳಿತ ಮಂಡಳಿ ಸ್ವಚ್ಛತೆಯ ಬಗ್ಗೆ ಗಮನ ಹರಿಸಲಿ ಎಂಬುವುದು ಸ್ಥಳೀಯರ ಕಾಳಜಿಯಾಗಿದೆ.

ಹೇಮಾವತಿಯ ನದಿಯ ಚಿತ್ರಣ

ಇದನ್ನೂ ಓದಿ:

Maha Shivaratri 2021 ಶಿವ ಶಿವ ಎಂದು ಪರಮೇಶ್ವರನ ದರ್ಶನಕ್ಕೆ ಮುಗಿಬಿದ್ದ ಭಕ್ತರು.. ದೇವಾಲಯಗಳಲ್ಲಿ ಶಿವರಾತ್ರಿ ಸಂಭ್ರಮ

Temple Hundi | ದೇವಾಲಯದ ಹುಂಡಿ ಎಣಿಕೆ: ಒಂದೇ ತಿಂಗಳಲ್ಲಿ‌ ಕೋಟ್ಯಾಧೀಶ್ವರನಾದ ನಂಜುಂಡೇಶ್ವರ, ಮಲೆ ಮಹದೇಶ್ವರ