Maha Shivaratri 2021 ಶಿವ ಶಿವ ಎಂದು ಪರಮೇಶ್ವರನ ದರ್ಶನಕ್ಕೆ ಮುಗಿಬಿದ್ದ ಭಕ್ತರು.. ದೇವಾಲಯಗಳಲ್ಲಿ ಶಿವರಾತ್ರಿ ಸಂಭ್ರಮ

ಇಂದು ನಾಡಿನಾದ್ಯಂತ ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಶಿವನ ಸನ್ನಿಧಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಕಾಡುಮಲ್ಲೇಶ್ವರ, ಗವಿಗಂಗಾಧರೇಶ್ವರ, ಸೋಮೇಶ್ವರ ದೇವಸ್ಥಾನಗಳಲ್ಲಿ ಮುಂಜಾನೆಯೆ ಪರಮೇಶ್ವರನಿಗೆ ರುದ್ರಾಭಿಷೇಕದ ಮಜ್ಜನ, ಜಲಾಭಿಷೇಕ, ಪಂಚಾಮೃತ ಅಭಿಷೇಕಗಳನ್ನು ಮಾಡಲಾಗುತ್ತಿದೆ.

Maha Shivaratri 2021 ಶಿವ ಶಿವ ಎಂದು ಪರಮೇಶ್ವರನ ದರ್ಶನಕ್ಕೆ ಮುಗಿಬಿದ್ದ ಭಕ್ತರು.. ದೇವಾಲಯಗಳಲ್ಲಿ ಶಿವರಾತ್ರಿ ಸಂಭ್ರಮ
ಕಾಡು ಮಲ್ಲೇಶ್ವರ ದೇವಾಲಯ
Follow us
ಆಯೇಷಾ ಬಾನು
|

Updated on:Mar 11, 2021 | 9:47 AM

ಬೆಂಗಳೂರು: ಶಿವ ಶಿವ ಎಂದರೆ ಭಯವಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ ಎಂದು ಹಾಡಿ ತನ್ನ ಭಕ್ತರನ್ನು ಎಂದೂ ಕೈಬಿಡದ ಮಹಾ ದೇವನ ಮಹಾ ಶಿವರಾತ್ರಿ ಇಂದು. ಎಲ್ಲೆಡೆ ಶಿವರಾತ್ರಿಯ ಸಂಭ್ರಮ, ಸಡಗರ ಮನೆ ಮಾಡಿದೆ. ಶಿವನ ದೇವಸ್ಥಾನಗಳಲ್ಲಿ ಮುಂಜಾನೆಯೇ ‘ಪರಮೇಶ್ವರ’ನಿಗೆ ವಿಶೇಷ ಅಭಿಷೇಕ, ಪಂಚಾಮೃತ, ಜಲಾಭಿಷೇಕ ಮಾಡಲಾಗುತ್ತಿದೆ. ಬಣ್ಣ ಬಣ್ಣದ ಹೂಗಳಿಂದ ಶಂಕರನಿಗೆ ಅಲಂಕಾರ ಮಾಡಿ ಕೈಲಾಸ ವಾಸಿ ಪರಶಿವನಿಗೆ ಭಕ್ತರು ಭಕ್ತಿಯಿಂದ ಪೂಜೆ ಮಾಡಿ ಉಪವಾಸ ಆಚರಿಸುತ್ತಿದ್ದಾರೆ. ಮಹಾದೇವನ ಭಕ್ತಿಯಲ್ಲಿ ಭಕ್ತರು ಮುಳುಗಿದ್ದಾರೆ.

ಇಂದು ನಾಡಿನಾದ್ಯಂತ ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಶಿವನ ಸನ್ನಿಧಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಕಾಡುಮಲ್ಲೇಶ್ವರ, ಗವಿಗಂಗಾಧರೇಶ್ವರ, ಸೋಮೇಶ್ವರ ದೇವಸ್ಥಾನಗಳಲ್ಲಿ ಮುಂಜಾನೆಯೆ ಪರಮೇಶ್ವರನಿಗೆ ರುದ್ರಾಭಿಷೇಕದ ಮಜ್ಜನ, ಜಲಾಭಿಷೇಕ, ಪಂಚಾಮೃತ ಅಭಿಷೇಕಗಳನ್ನು ಮಾಡಲಾಗುತ್ತಿದೆ. ಬೆಂಗಳೂರಿನ ಶಿವನ ದೇವಾಲಯಗಳು ವಿಶೇಷ ಅಲಂಕಾರಗಳಿಂದ ಕಂಗೊಳಿಸುತ್ತಿವೆ. ಇಡೀ ದೇವಾಲಯವನ್ನು ತಳಿರು ತೋರಣದಿಂದ ಸಿಂಗರಿಸಿ ಕಬ್ಬು, ಹೂವಿನಿಂದ ಅದ್ದೂರಿ ಅಲಂಕಾರ ಮಾಡಲಾಗಿದೆ. ರಾತ್ರಿ ಜಾಗರಣೆ‌ ಹಿನ್ನೆಲೆ, ನಾಳೆ ಬೆಳಗ್ಗೆಯವರೆಗೂ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.

Maha Shivaratri 2021

ಭಕ್ತಿಯಲ್ಲಿ ಮಹಾದೇವನ ದರ್ಶನಕ್ಕೆ ಕಾಯುತ್ತಿರುವ ಭಕ್ತರು

ಇನ್ನು ಮೈಸೂರು ಅರಮನೆ ದೇಗುಲದಲ್ಲಿ ವಿಶೇಷ ಆಚರಣೆ ನಡೆಯುತ್ತಿದ್ದು ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಾಲಯದ ಶಿವಲಿಂಗಕ್ಕೆ ಚಿನ್ನದ ಕೊಳಗ (ಮುಖವಾಡ) ಧಾರಣೆ ಮಾಡಲಾಗಿದೆ. ಬರೋಬ್ಬರಿ 11 ಕೆಜಿ ತೂಕದ ಅಪರಂಜಿ ಚಿನ್ನದಿಂದ ಮಾಡಿರುವ ಕೊಳಗ ಇದಾಗಿದ್ದು ಶಿವರಾತ್ರಿ ದಿನದಂದು ಮಾತ್ರ ಶ್ರೀ ತ್ರೀನೇಶ್ವರ ದೇವಾಲಯದ ಶಿವಲಿಂಗಕ್ಕೆ ಧಾರಣೆ ಮಾಡಲಾಗುತ್ತೆ. ಇದನ್ನು ಮಹಾರಾಜ ಜಯ ಚಾಮರಾಜ ಒಡೆಯರ್ ಅವರು ನೀಡಿದ್ದ ಕೊಡುಗೆ. ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಜರುಗುತ್ತಿವೆ. ಚಿನ್ನದ ಮುಖವಾಡ ಧಾರಣೆ ಮಾಡಿದ ಶಿವಲಿಂಗ ನೋಡಲು ಭಕ್ತ ಸಾಗರವೇ ಹರಿದು ಬರುತ್ತಿದೆ.

Maha Shivaratri 2021

ಕಾಡು ಮಲ್ಲೇಶ್ವರ ದೇವಾಲಯದಲ್ಲಿ ಕಂಡು ಬಂದ ಶಿವರಾತ್ರಿ ಅಲಂಕಾರ

ಮುತ್ತಿನಿಂದ ಮಾಡಿದ 31 ಅಡಿ ಎತ್ತರದ ಶಿವಲಿಂಗ ಕಲಬುರಗಿ ನಗರದ ಹೊರವಲಯದಲ್ಲಿರುವ ಬ್ರಹ್ಮಕುಮಾರಿ ಆಶ್ರಮದಲ್ಲಿರುವ ಶಿವಲಿಂಗಕ್ಕೆ ಆಂಧ್ರಪ್ರದೇಶ, ತೆಲಂಗಾಣ, ಮತ್ತು ಮೌಂಟ್ ಅಬುದಿಂದ 1 ಲಕ್ಷ 20 ಸಾವಿರ ಮುತ್ತುಗಳಿಂದ ಶಿವಲಿಂಗಕ್ಕೆ ಅಲಂಕಾರ ಮಾಡಲಾಗಿದೆ. 31 ಅಡಿ ಎತ್ತರದ ಮುತ್ತಿನ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಮುತ್ತಿನ ವಿಶೇಷ ಶಿವಲಿಂಗ ನೋಡಲು ಭಕ್ತರು ಆಗಮಿಸುತ್ತಿದ್ದಾರೆ.

Maha Shivaratri

ಮುತ್ತಿನ ಹಾರಗಳಿಂದ ಅಲಂಕಾರಗೊಂಡ ಶಿವಲಿಂಗ

ಇದನ್ನೂ ಓದಿ: Maha Shivaratri 2021: ಮಹಾಶಿವರಾತ್ರಿಯಂದು ಉಪವಾಸ ಮಾಡುವುದು ಹೇಗೆ? ಇದರ ಹಿಂದಿರುವ ಕಾರಣವೇನು?

Published On - 8:13 am, Thu, 11 March 21