ಪ್ರೀತಿಸಿ ಮದುವೆಯಾಗಿ ಪತ್ನಿ ಬಿಟ್ಟ ನಾಪತ್ತೆಯಾದ CRPF ಕಾನ್ಸ್‌ಟೇಬಲ್.. ಪತಿ ಬೇಕು ಎಂದು ಹೆಂಡತಿ ಕಣ್ಣೀರು

ಹೊಸಕೋಟೆ ತಾಲೂಕಿನ ಎತ್ತಿನೊಡೆಯಪುರದ ಯುವಕ ಪ್ರಮೋದ್‌ ಮತ್ತು ಯುವತಿ ಅನುಜಾ ಒಂದೇ ಗ್ರಾಮದವರಾಗಿದ್ದರು. ಇವರಿಬ್ಬರಿಗೆ ಪ್ರೇಮಾಂಕುರವಾಗಿತ್ತು. ಎರಡು ತಿಂಗಳ ಹಿಂದೆ ಪ್ರಮೋದ್ ಯಲಹಂಕದ CRPF ಕ್ಯಾಂಪ್​ನಲ್ಲಿ ಅನುಜಾಳನ್ನು ವಿವಾಹವಾಗಿದ್ದ. ಆದ್ರೆ ವಿವಾಹವಾದ ನಂತರ ಇದೀಗ ಯುವತಿಯನ್ನ ಬಿಟ್ಟು ಪರಾರಿಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಪ್ರೀತಿಸಿ ಮದುವೆಯಾಗಿ ಪತ್ನಿ ಬಿಟ್ಟ ನಾಪತ್ತೆಯಾದ CRPF ಕಾನ್ಸ್‌ಟೇಬಲ್.. ಪತಿ ಬೇಕು ಎಂದು ಹೆಂಡತಿ ಕಣ್ಣೀರು
CRPF ಕ್ಯಾಂಪ್​ನಲ್ಲಿ ಅನುಜಾಳನ್ನು ವಿವಾಹವಾಗಿದ್ದ ಪ್ರಮೋದ್
Follow us
ಆಯೇಷಾ ಬಾನು
| Updated By: Digi Tech Desk

Updated on:Mar 07, 2023 | 11:23 AM

ದೇವನಹಳ್ಳಿ: ಪ್ರೀತಿಸಿ ವಿವಾಹವಾದ ಪತಿಯಿಂದ ವಂಚನೆ ಆರೋಪ ಕೇಳಿ ಬಂದಿದೆ. CRPF ಕಾನ್ಸ್‌ಟೇಬಲ್ ಪ್ರಮೋದ್‌ ತನ್ನ ಪತ್ನಿಯನ್ನು ನಂಬಿಸಿ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ‌ ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್ ಠಾಣೆ ಮುಂದೆ ನೊಂದ ಮಹಿಳೆ ತನ್ನ ಪತಿಯನ್ನು ಹುಡುಕಿಕೊಡುವಂತೆ ಕಣ್ಣೀರು ಹಾಕಿದ್ದಾಳೆ.

ಹೊಸಕೋಟೆ ತಾಲೂಕಿನ ಎತ್ತಿನೊಡೆಯಪುರದ ಯುವಕ ಪ್ರಮೋದ್‌ ಮತ್ತು ಯುವತಿ ಅನುಜಾ ಒಂದೇ ಗ್ರಾಮದವರಾಗಿದ್ದರು. ಇವರಿಬ್ಬರಿಗೆ ಪ್ರೇಮಾಂಕುರವಾಗಿತ್ತು. ಎರಡು ತಿಂಗಳ ಹಿಂದೆ ಪ್ರಮೋದ್ ಯಲಹಂಕದ CRPF ಕ್ಯಾಂಪ್​ನಲ್ಲಿ ಅನುಜಾಳನ್ನು ವಿವಾಹವಾಗಿದ್ದ. ಆದ್ರೆ ವಿವಾಹವಾದ ನಂತರ ಇದೀಗ ಯುವತಿಯನ್ನ ಬಿಟ್ಟು ಪರಾರಿಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ವಂಚಿಸಿ ನಾಪತ್ತೆಯಾಗಿರುವ ಪತಿಗಾಗಿ ಕಳೆದ ರಾತ್ರಿ ನಂದಗುಡಿ ಠಾಣೆ ಎದುರು ಪತ್ನಿ ಮತ್ತು ಪೋಷಕರು ಧರಣಿ ನಡೆಸಿದ್ದಾರೆ. ಇನ್ನು ಮದುವೆ ಬಳಿಕ ಪತ್ನಿ ಬಿಟ್ಟು ಬೇರೆ ಯುವತಿ ಜತೆ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ ಎಂದು ಪತ್ನಿ ಅನುಜಾ ಆರೋಪಸಿದ್ದು ನ್ಯಾಯ ಕೊಡಿಸುವಂತೆ ಪ್ರತಿಭಟನೆ ನಡೆಸಿದ್ದಾಳೆ. ಇನ್ನು ದೂರು ನೀಡಿ ಎರಡು ತಿಂಗಳಾಗುತ್ತಿದ್ರು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಅಂತ ಅನುಜಾ ಆರೋಪಿಸಿದ್ದು ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಪ್ರತಿಭಟನೆ ನಡೆಸುತ್ತಿದ್ದ ಅನುಜಾ ಮತ್ತು ಕುಟುಂಬದವರನ್ನು ಪೊಲೀಸರು ಸಮಾಧಾನಪಡಿಸಿ ಪ್ರಮೋದ್​ನನ್ನು ಹುಡುಕಿಕೊಡೋದಾಗಿ‌ ಭರವಸೆ ನೀಡಿ ಮನೆಗೆ ಕಳಿಸಲಾಗಿದೆ.

Published On - 9:22 am, Thu, 11 March 21