ಬೆಳಗಾವಿ: ಕನ್ನಡ ಅಕ್ಷರಗಳಿಗೆ ಕಪ್ಪು ಮಸಿ ಬಳಿದು ಶಿವಸೇನೆ ಪುಂಡಾಟ

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನೆ ಪುಂಡಾಟಿಕೆ ಹೆಚ್ಚಾಗಿದ್ದು, ಮಳಿಗೆಗಳ ಮೇಲಿದ್ದ ಕನ್ನಡದ ಅಕ್ಷರಗಳಿಗೆ ಕಪ್ಪು ಮಸಿ ಬಡಿದಿದ್ದಾರೆ.

ಬೆಳಗಾವಿ: ಕನ್ನಡ ಅಕ್ಷರಗಳಿಗೆ ಕಪ್ಪು ಮಸಿ ಬಳಿದು ಶಿವಸೇನೆ ಪುಂಡಾಟ
ಕನ್ನಡ ಅಕ್ಷರಗಳಿಗೆ ಕಪ್ಪು ಮಸಿ ಬಳಿದು ಶಿವಸೇನೆ ಪುಂಡಾಟ
Follow us
shruti hegde
| Updated By: ಆಯೇಷಾ ಬಾನು

Updated on:Mar 14, 2021 | 11:14 AM

ಬೆಳಗಾವಿ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನೆ ಪುಂಡಾಟಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಕೆಲ ದಿನಗಳ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜ ತೆರವಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ರದ್ಧಾಂತ ಮಾಡಿದ್ದರು. ಮತ್ತೆ ಈಗ ಕೊಲ್ಹಾಪುರದಲ್ಲಿ ಮಳಿಗೆಗಳ ಮೇಲಿದ್ದ ಕನ್ನಡದ ಅಕ್ಷರಗಳಿಗೆ ಕಪ್ಪು ಮಸಿ ಬಳಿದು ದರ್ಪ ಪ್ರದರ್ಶಿಸಿದ್ದಾರೆ. ಮಹಾಲಕ್ಷ್ಮಿ ಯಾತ್ರಿ ನಿವಾಸದ ಕಟ್ಟಡ ಸೇರಿದಂತೆ ಮಳಿಗೆಗಳಲ್ಲಿ ಹಾಕಿದ್ದ ಕನ್ನಡ ಅಕ್ಷರಗಳಿರುವ ಬೋರ್ಡ್​ಗಳಿಗೆ ಕಪ್ಪು ಮಸಿ ಬಳಿದು ಮಳಿಗೆ ಮಾಲೀಕರಿಗೆ ಶಿವಸೇನೆ ಮುಖಂಡ ಸಂಜಯ್ ಪವಾರ್‌ ಬೆದರಿಕೆ ಒಡ್ಡಿದ್ದಾರೆ.  

ಕನ್ನಡ ಬೋರ್ಡ್ ಹಾಕಿದ್ರೆ ವ್ಯಾಪಾರ ಮಾಡಲು ಬಿಡಲ್ಲ ಎಂದು ಶಿವಸೇನೆ ಮುಖಂಡ ಸಂಜಯ್ ಪವಾರ್ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಕೊಲ್ಲಾಪುರದ ಐತಿಹಾಸಿಕ ಮಹಾಲಕ್ಷ್ಮಿ ಮಂದಿರ ಬಳಿಯ ಮಳಿಗೆಗಳ ಮಾಲೀಕರಿಗೂ ಬೆದರಿಕೆ ಹಾಕಿದ್ದಾರೆ.

ಐತಿಹಾಸಿಕ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಕರ್ನಾಟಕದ ಲಕ್ಷಾಂತರ ಭಕ್ತರು ಹೋಗುತ್ತಾರೆ. ದೇವಸ್ಥಾನದ ಬಳಿ ಬಹುತೇಕ ಮಳಿಗೆಗಳ ‌ಮೇಲೆ ಕನ್ನಡ ಅಕ್ಷರದ ಬೋರ್ಡ್ ಹಾಕಲಾಗಿದೆ. ಇಲ್ಲೂ ಕೂಡಾ ಪುಂಡರು ಪುಂಡಾಟ ಮೆರೆದಿದ್ದು, ಶಿವಸೇನೆ ಪುಂಡರ ಪುಂಡಾಟಿಕೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಶ್ರೀಗಂಧ ಕಲಾಕೃತಿ ರಚನೆ ಭಾರೀ ಪ್ರಮಾಣದಲ್ಲಿ ಇಳಿಕೆ: ಕಾರಣವೇನಿರಬಹುದು?

ಇದನ್ನೂ ಓದಿ: ನಿಜ ಜೀವನದ ‘ಸತ್ಯ’ ಪಾತ್ರಗಳ ಜೊತೆ ಮಹಿಳಾ ದಿನಾಚರಣೆ ಆಚರಿಸಿದ ಜೀ ಕನ್ನಡದ ‘ಸತ್ಯ’ ಗೌತಮಿ

Published On - 10:05 am, Thu, 11 March 21