ಬುಡಕಟ್ಟು ಸಂಸ್ಕೃತಿಯ ಕೋಟೆನಾಡಿನಲ್ಲಿ ಮೇಕೆಗೂ ಸೀಮಂತ ಭಾಗ್ಯ..!

ಚಿತ್ರದುರ್ಗ ಜಿಲ್ಲೆ ಬುಡಕಟ್ಟು ಸಂಸ್ಕೃತಿಯ ತವರು ಎಂದೇ ಖ್ಯಾತಿ ಗಳಿಸಿದೆ. ಕಾಡುಗೊಲ್ಲ ಮತ್ತು ಮ್ಯಾಸ ಬೇಡ ಸಮುದಾಯದ ನೆಲೆಬೀಡಾದ ಕೋಟೆನಾಡಿನಲ್ಲಿ ಜಾನುವಾರು ಸಾಕಣೆಯೇ ಮುಖ್ಯ ಕಸುಬಾಗಿದೆ. ಇದರಿಂದ ಸಹಜವಾಗಿಯೇ ಈ ಭಾಗದ ಜನರು ಪ್ರಾಣಿ-ಪಕ್ಷಿಗಳ ಮೇಲೆ ಹೆಚ್ಚಿನ ಪ್ರೀತಿಯನ್ನು ಹೊಂದಿದ್ದಾರೆ.

ಬುಡಕಟ್ಟು ಸಂಸ್ಕೃತಿಯ ಕೋಟೆನಾಡಿನಲ್ಲಿ ಮೇಕೆಗೂ ಸೀಮಂತ ಭಾಗ್ಯ..!
ಮೇಕೆಗೆ ಸೀಮಂತ
Follow us
sandhya thejappa
|

Updated on:Mar 11, 2021 | 10:37 AM

ಚಿತ್ರದುರ್ಗ: ಪ್ರಾಣಿ-ಪಕ್ಷಿಗಳಿಗೆ ಮನೆ ಸದಸ್ಯ ಸ್ಥಾನ ನೀಡಿ ಪ್ರೀತಿಯಿಂದ ಸಾಕಿ ಸಲುಹಿದ ಅನೇಕ ಉದಾಹರಣೆಗಳಿವೆ. ವಿವಿಧ ಆಚರಣೆಗಳ ಮೂಲಕ ನಾಡಿನ ಗಮನ ಸೆಳೆದ ಅನೇಕ ಪ್ರಾಣಿ ಪ್ರಿಯರೂ ಇದ್ದಾರೆ. ಆದರೆ ಕೋಟೆನಾಡು ಚಿತ್ರದುರ್ಗದಲ್ಲೊಂದು ಕುಟುಂಬ ಒಂದು ಹೆಜ್ಜೆ ಮುಂದೆಯಿಟ್ಟಿದೆ. ಮನೆ ಮಗಳಂತೆ ಸಾಕಿದ್ದ ಮೇಕೆಗೆ ಸಾಂಪ್ರದಾಯಿಕ ಸೀಮಂತ ಮಾಡಿ ಸಂಭ್ರಮಿಸುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ.

ಚಿತ್ರದುರ್ಗ ಜಿಲ್ಲೆ ಬುಡಕಟ್ಟು ಸಂಸ್ಕೃತಿಯ ತವರು ಎಂದೇ ಖ್ಯಾತಿ ಗಳಿಸಿದೆ. ಕಾಡುಗೊಲ್ಲ ಮತ್ತು ಮ್ಯಾಸ ಬೇಡ ಸಮುದಾಯದ ನೆಲೆಬೀಡಾದ ಕೋಟೆನಾಡಿನಲ್ಲಿ ಜಾನುವಾರು ಸಾಕಣೆಯೇ ಮುಖ್ಯ ಕಸುಬಾಗಿದೆ. ಇದರಿಂದ ಸಹಜವಾಗಿಯೇ ಈ ಭಾಗದ ಜನರು ಪ್ರಾಣಿ-ಪಕ್ಷಿಗಳ ಮೇಲೆ ಹೆಚ್ಚಿನ ಪ್ರೀತಿಯನ್ನು ಹೊಂದಿದ್ದಾರೆ. ಅದರಂತೆ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ರಾಜು ಮತ್ತು ಗೀತಾ ದಂಪತಿಗೂ ಸಹ ಪ್ರಾಣಿಗಳನ್ನು ಕಂಡರೆ ಹೆತ್ತ ಮಕ್ಕಳನ್ನು ಕಂಡಷ್ಟೇ ಪ್ರೀತಿ.

ರಂಗಭೂಮಿ ಕಲಾವಿದರು ರಾಜು ಮತ್ತು ಗೀತಾ ರಂಗಭೂಮಿ ಕಲಾವಿದರಾಗಿದ್ದಾರೆ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳಾದ ರಂಜಿತಾ ಮತ್ತು ರಂಜನಿ ಯನ್ನು ಅತಿ ಪ್ರೀತಿಯಿಂದಲೇ ಸಾಕಿದ್ದರು. ಆದರೆ ಹಿರಿಯ ಮಗಳು ರಂಜಿತಾ ಪ್ರೀತಿಸಿ ಮದುವೆ ಆಗಿದ್ದು, ಒಂದು ಗಂಡು ಮಗುವಿನ ತಾಯಿಯೂ ಆಗಿದ್ದಾಳೆ. ಕಾರಣಾಂತರದಿಂದ ತಾಯಿ ಗೀತಾಗೆ ಮಗಳಿಗೆ ಸೀಮಂತ ಮಾಡುವ ಆಸೆ ಈಡೇರದಂತಾಗಿ ನಿರಾಸೆಗೆ ಒಳಗಾಗಿದ್ದಾರೆ. ಇದೇ ಸಂದರ್ಭದಲ್ಲಿ ಮನೆಯಲ್ಲಿ ಮೂರನೇ ಮಗಳಂತೆ ಸಾಕಿದ್ದ ಪದ್ದು ಎಂಬ ಹೆಸರಿನ ಮೇಕೆ ಗರ್ಭ ಧರಿಸಿದೆ. ಮೇಕೆಗೆ ಸೀಮಂತ ಕಾರ್ಯ ನೆರವೇರಿಸುವ ಮೂಲಕ ಮನೆ ಮಂದಿ ಸಂಭ್ರಮಿಸಿದ್ದಾರೆ.

ಗರ್ಭ ಧರಿಸಿದ ಮೇಕೆಗೆ ಸೀಮಂತ ಮಾಡಿದ ಚಿತ್ರದುರ್ಗದ ದಂಪತಿ

ಮನೆ ಮಗಳ ಸೀಮಂತ ಕಾರ್ಯದಂತೆಯೇ ಇಡೀ ಮನೆ ಅಲಂಕರಿಸಿದ್ದಾರೆ. ಮನೆಗೆ ತುಂಬ ಬಣ್ಣಬಣ್ಣದ ಬಲೂನ್, ಹೂವು, ತಳಿರು ತೋರಣದಿಂದ ಅಲಂಕಾರ ಮಾಡಿದ್ದಾರೆ. ಮೇಕೆಗೆ ಹೊಸ ಬಟ್ಟೆ ತೊಡಿಸಿ ಹೂವಿನ ಸಿಂಗಾರ ಮಾಡಿದ್ದಾರೆ. ತೊಟ್ಟಿಲು ತೂಗಿ ಯಾವ ಸೀಮಂತಕ್ಕೂ ಕಡಿಮೆ ಇಲ್ಲದಂತೆ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ. ಸಂಬಂಧಿಕರು, ಗ್ರಾಮಸ್ಥರು ಸೇರಿ ಒಟ್ಟು ಐವತ್ತು ಜನರನ್ನು ಕರೆದು ಸಿಹಿ ಊಟ ಹಾಕಿಸಿ ಸಂಭ್ರಮಿಸಿದ್ದಾರೆ.

ಈ ಮೊದಲು ನನ್ನಿವಾಳ ಬೆಟ್ಟದಲ್ಲಿ ಕುರಿ-ಮೇಕೆ ಕಾಯಲು ತೆರಳಿದವರಿಗೆ ಜಿಂಕೆ ಮರಿಯೊಂದು ಸಿಕ್ಕಿತ್ತಂತೆ. ಆ ಜಿಂಕೆಯನ್ನು ರಾಜು-ಗೀತಾ ದಂಪತಿ ಕೆಲ ದಿನಕಾಲ ಇಟ್ಟುಕೊಂಡು ಜೋಪಾನ ಮಾಡಿದ್ದರಂತೆ. ವನ್ಯಜೀವಿ ಸಾಕಣೆ ನಿರ್ಬಂಧ ಕಾರಣ ಕಾಡಿಗೆ ಬಿಟ್ಟಿದ್ದರಂತೆ. ಪ್ರೀತಿಯ ಜಿಂಕೆಯ ಬದಲಿಗೆ ಈ ಮೇಕೆಯನ್ನು ತಂದು ಮನೆ ಮಗಳಂತೆ ಸಾಕಿದ್ದರು. ಮೇಕೆ ಗರ್ಭ ಧರಿಸಿದಾಗ ಸಂಭ್ರಮದಿಂದ ಸೀಮಂತ ಮಾಡುವ ಮೂಲಕ ಪ್ರಾಣಿ ಪ್ರೀತಿ ಮೆರೆದು ನಾಡಿನ ಗಮನ ಸೆಳೆದಿದ್ದಾರೆ.

ಕುರಿಗಾಹಿಗಳ ಮೂಲಕ ಸಿಕ್ಕಿದ್ದ ಜಿಂಕೆಯನ್ನು ಪ್ರೀತಿಯಿಂದ ಸಾಕಿದ್ದೆವು. ಕಾನೂನು ನಿರ್ಬಂಧವಿದ್ದ ಕಾರಣ ಜಿಂಕೆಯನ್ನು ಕಾಡಿಗೆ ಬಿಡಲಾಗಿತ್ತು. ಬಳಿಕ ಜಿಂಕೆ ಜಾಗಕ್ಕೆ ಈ ಮೇಕೆ ಬಂದಿದ್ದು, ನಮ್ಮ ಪಾಲಿನ ತಂಗಿಯಂತೆ ಸಾಕಿದ್ದೇವೆ. ಮೇಕೆ ಗರ್ಭ ಧರಿಸಿದ್ದು ಸೀಮಂತ ಕಾರ್ಯಕ್ರಮ ಮಾಡಿದ್ದೇವೆ. ಕುರಿ-ಮೇಕೆ ಕೇವಲ ಮಾಂಸಕ್ಕಾಗಿ ಮಾತ್ರವಲ್ಲ ಅವುಗಳಿಗೂ ಮನೆ ಸದಸ್ಯನ ಸ್ಥಾನ ನೀಡಬೇಕೆಂಬುದು ನಮ್ಮ ಆಶಯ ಎಂದು ರಂಜನಿ ಹೇಳಿದರು.

ಹಿರಿ ಮಗಳು ರಂಜಿತಾ ಪ್ರೀತಿಸಿ ಮದುವೆಯಾಗಿ ಹೋದಳು. ಅವಳಿಗೆ ಸೀಮಂತ ಮಾಡುವ ಆಸೆಯಿದ್ದರೂ ಅದೂ ಕಾರಣಾಂತರದಿಂದ ಕೈಗೂಡಲಿಲ್ಲ. ಮೂರನೇ ಮಗಳಂತೆ ಸಾಕಿದ ಪದ್ದು ಎಂಬ ಮೇಕೆ ಗರ್ಭ ಧರಿಸಿದ್ದು ಮಗಳಂತೆಯೇ ಸೀಮಂತ ಕಾರ್ಯ ಮಾಡಿದ್ದೇವೆ. ಪ್ರಾಣಿಯನ್ನೂ ನಮ್ಮಂತೆಯೇ ಪ್ರೀತಿಸಬೇಕು. ಪ್ರಾಣಿ ಹಿಂಸೆ ಮಾಡಬಾರದು ಎಂಬುದು ನಮ್ಮ ಆಶಯ ಎಂದು ಕಣ್ಣೀರು ಹಾಕುತ್ತಾರೆ ಗೀತಾ.

ಇದನ್ನೂ ಓದಿ

ಮೈಸೂರಿನ ಪಾರ್ಕ್​ನಲ್ಲಿಯೇ ಮಗುವಿಗೆ ಜನ್ಮ ನೀಡಿದ ತಾಯಿ

Karnataka Budget 2021 Highlights: ಜಿಲ್ಲೆಗೊಂದು ಗೋಶಾಲೆ, ಮೇಕೆ-ಕುರಿ-ಕೋಳಿ ತಳಿ ಸಂವರ್ಧನೆಗೆ ಹೊಸ ಯೋಜನೆ

Published On - 10:34 am, Thu, 11 March 21

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್