Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಮಗಳಂತೆ ಸಾಕಿದ್ದ ಮೇಕೆಗೆ ಸೀಮಂತ: ಪ್ರಾಣಿ ಪ್ರೀತಿ ಮೆರೆದ ಚಿತ್ರದುರ್ಗ ಕುಟುಂಬ

ಪ್ರಾಣಿ-ಪಕ್ಷಿಗಳಿಗೆ ಮನೆ ಸದಸ್ಯ ಸ್ಥಾನ ನೀಡಿ ಪ್ರೀತಿಯಿಂದ ಸಾಕಿ ಸಲುಹಿದ ಅನೇಕ ಉದಾಹರಣೆಗಳಿವೆ. ವಿವಿಧ ಆಚರಣೆಗಳ ಮೂಲಕ ನಾಡಿನ ಗಮನ ಸೆಳೆದ ಅನೇಕ ಪ್ರಾಣಿ ಪ್ರಿಯರೂ ಇದ್ದಾರೆ. ಆದರೆ ಕೋಟೆನಾಡು ಚಿತ್ರದುರ್ಗದಲ್ಲೊಂದು ಕುಟುಂಬ ಒಂದು ಹೆಜ್ಜೆ ಮುಂದೆಯಿಟ್ಟಿದೆ. ಮನೆ ಮಗಳಂತೆ ಸಾಕಿದ್ದ ಮೇಕೆಗೆ ಸಾಂಪ್ರದಾಯಿಕ ಸೀಮಂತ ಮಾಡಿ ಸಂಭ್ರಮಿಸುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ.

sandhya thejappa
|

Updated on:Mar 11, 2021 | 11:45 AM

ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ರಾಜು ಮತ್ತು ಗೀತಾ ದಂಪತಿಗೂ ಸಹ ಪ್ರಾಣಿಗಳನ್ನು ಕಂಡರೆ ಹೆತ್ತ ಮಕ್ಕಳನ್ನು ಕಂಡಷ್ಟೇ ಪ್ರೀತಿ. ಮನೆ ಮಗಳ ಸೀಮಂತ ಕಾರ್ಯದಂತೆಯೇ ಇಡೀ ಮನೆ ಅಲಂಕರಿಸಿದ್ದಾರೆ.

1 / 7
ಮನೆಯಲ್ಲಿ ಮೂರನೇ ಮಗಳಂತೆ ಸಾಕಿದ್ದ ಪದ್ದು ಎಂಬ ಹೆಸರಿನ ಮೇಕೆ ಗರ್ಭ ಧರಿಸಿದೆ. ಮೇಕೆಗೆ ಸೀಮಂತ ಕಾರ್ಯ ನೆರವೇರಿಸುವ ಮೂಲಕ ಮನೆ ಮಂದಿ ಸಂಭ್ರಮಿಸಿದ್ದಾರೆ.

2 / 7
ಕಾಡುಗೊಲ್ಲ ಮತ್ತು ಮ್ಯಾಸ ಬೇಡ ಸಮುದಾಯದ ನೆಲೆಬೀಡಾದ ಕೋಟೆನಾಡಿನಲ್ಲಿ ಜಾನುವಾರು ಸಾಕಣೆಯೇ ಮುಖ್ಯ ಕಸುಬಾಗಿದೆ. ಇದರಿಂದ ಸಹಜವಾಗಿಯೇ ಈ ಭಾಗದ ಜನರು ಪ್ರಾಣಿ-ಪಕ್ಷಿಗಳ ಮೇಲೆ ಹೆಚ್ಚಿನ ಪ್ರೀತಿಯನ್ನು ಹೊಂದಿದ್ದಾರೆ. ಮನೆ ಮಗಳಂತೆ ಸಾಕಿದ್ದ ಮೇಕೆಗೆ ಸಾಂಪ್ರದಾಯಿಕ ಸೀಮಂತ ಮಾಡಿ ಸಂಭ್ರಮಿಸುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ.

3 / 7
ಮನೆ ಮಗಳ ಸೀಮಂತ ಕಾರ್ಯದಂತೆಯೇ ಇಡೀ ಮನೆ ಅಲಂಕರಿಸಿದ್ದಾರೆ. ಮನೆಗೆ ತುಂಬ ಬಣ್ಣಬಣ್ಣದ ಬಲೂನ್, ಹೂವು, ತಳಿರು ತೋರಣದಿಂದ ಅಲಂಕಾರ ಮಾಡಿದ್ದಾರೆ. ಮೇಕೆಗೆ ಹೊಸ ಬಟ್ಟೆ ತೊಡಿಸಿ ಹೂವಿನ ಸಿಂಗಾರ ಮಾಡಿದ್ದಾರೆ. ತೊಟ್ಟಿಲು ತೂಗಿ ಯಾವ ಸೀಮಂತಕ್ಕೂ ಕಡಿಮೆ ಇಲ್ಲದಂತೆ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ.

4 / 7
ಕುರಿಗಾಹಿಗಳ ಮೂಲಕ ಸಿಕ್ಕಿದ್ದ ಜಿಂಕೆಯನ್ನು ಪ್ರೀತಿಯಿಂದ ಸಾಕಿದ್ದೆವು. ಕಾನೂನು ನಿರ್ಬಂಧವಿದ್ದ ಕಾರಣ ಜಿಂಕೆಯನ್ನು ಕಾಡಿಗೆ ಬಿಡಲಾಗಿತ್ತು. ಬಳಿಕ ಜಿಂಕೆ ಜಾಗಕ್ಕೆ ಈ ಮೇಕೆ ಬಂದಿದ್ದು, ನಮ್ಮ ಪಾಲಿನ ತಂಗಿಯಂತೆ ಸಾಕಿದ್ದೇವೆ. ಮೇಕೆ ಗರ್ಭ ಧರಿಸಿದ್ದು ಸೀಮಂತ ಕಾರ್ಯಕ್ರಮ ಮಾಡಿದ್ದೇವೆ. ಕುರಿ-ಮೇಕೆ ಕೇವಲ ಮಾಂಸಕ್ಕಾಗಿ ಮಾತ್ರವಲ್ಲ ಅವುಗಳಿಗೂ ಮನೆ ಸದಸ್ಯನ ಸ್ಥಾನ ನೀಡಬೇಕೆಂಬುದು ನಮ್ಮ ಆಶಯ ಎಂದು ರಂಜನಿ ಹೇಳಿದರು.

5 / 7
ತೊಟ್ಟಿಲು ತೂಗಿ ಯಾವ ಸೀಮಂತಕ್ಕೂ ಕಡಿಮೆ ಇಲ್ಲದಂತೆ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ. ಸಂಬಂಧಿಕರು, ಗ್ರಾಮಸ್ಥರು ಸೇರಿ ಒಟ್ಟು ಐವತ್ತು ಜನರನ್ನು ಕರೆದು ಸಿಹಿ ಊಟ ಹಾಕಿಸಿ ಸಂಭ್ರಮಿಸಿದ್ದಾರೆ.

6 / 7
ಮೇಕೆಯನ್ನು ತಂದು ಮನೆ ಮಗಳಂತೆ ಸಾಕಿದ್ದರು. ಮೇಕೆ ಗರ್ಭ ಧರಿಸಿದಾಗ ಸಂಭ್ರಮದಿಂದ ಸೀಮಂತ ಮಾಡುವ ಮೂಲಕ ಪ್ರಾಣಿ ಪ್ರೀತಿ ಮೆರೆದು ನಾಡಿನ ಗಮನ ಸೆಳೆದಿದ್ದಾರೆ.

7 / 7

Published On - 10:51 am, Thu, 11 March 21

Follow us