ಚಳಿಗೆ ಬೆಚ್ಚನೆಯ ಜಾಗ ಹುಡುಕಿ ಮನೆಯೊಳಕ್ಕೆ ಬಂದ 12 ಅಡಿ ಉದ್ದದ ಹೆಬ್ಬಾವು, ಥರಗುಟ್ಟಿದ ಗ್ರಾಮಸ್ಥರು!

| Updated By: ಆಯೇಷಾ ಬಾನು

Updated on: Dec 17, 2021 | 11:16 AM

ತುಮಕೂರು ತಾಲೂಕಿನ ದೇವರಹೊಸಹಳ್ಳಿ ಬಳಿಯ ಕಾಡುಗೆರೆಯ ಮನೆಯೊಂದರಲ್ಲಿ ಹೆಬ್ಬಾವು ಪ್ರತ್ಯಕ್ಷ್ಯವಾಗಿದೆ. ಗ್ರಾಮದ ಕುಮಾರ್ ಎಂಬುವರ ಮನೆಯಲ್ಲಿ ಸುಮಾರು 12 ಅಡಿ ಉದ್ದದ್ದ ಹೆಬ್ಬಾವು ಕಂಡು ಬಂದಿದ್ದು ಕುಟುಂಬಸ್ಥರು ಗಾಬರಿಗೊಂಡಿದ್ದಾರೆ.

ಚಳಿಗೆ ಬೆಚ್ಚನೆಯ ಜಾಗ ಹುಡುಕಿ ಮನೆಯೊಳಕ್ಕೆ ಬಂದ 12 ಅಡಿ ಉದ್ದದ ಹೆಬ್ಬಾವು, ಥರಗುಟ್ಟಿದ ಗ್ರಾಮಸ್ಥರು!
ಚಳಿಗೆ ಬೆಚ್ಚನೆಯ ಜಾಗ ಹುಡುಕಿ ಮನೆಯೊಳಕ್ಕೆ ಬಂದ 12 ಅಡಿ ಉದ್ದದ ಹೆಬ್ಬಾವು, ಥರಗುಟ್ಟಿದ ಗ್ರಾಮಸ್ಥರು!
Follow us on

ತುಮಕೂರು: ಧನುರ್ಮಾಸ ಶುರು ಆಯ್ತು ಚಳಿಯೂ ವಿಪರೀತವಾಗುತ್ತಿದೆ. ಈ ನಡುವೆ ಹೆಬ್ಬಾವೊಂದು ಚಳಿಗೆ ಬೆಚ್ಚನೆಯ ಜಾಗ ಹುಡುಕಿ ಮನೆಗೆ ನುಗ್ಗಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಹೆಬ್ಬಾವು ಕಂಡ ಕುಟುಂಬಸ್ಥರು, ಗ್ರಾಮಸ್ಥರು ಥರಗುಟ್ಟಿದ್ದಾರೆ.

ತುಮಕೂರು ತಾಲೂಕಿನ ದೇವರಹೊಸಹಳ್ಳಿ ಬಳಿಯ ಕಾಡುಗೆರೆಯ ಮನೆಯೊಂದರಲ್ಲಿ ಹೆಬ್ಬಾವು ಪ್ರತ್ಯಕ್ಷ್ಯವಾಗಿದೆ. ಗ್ರಾಮದ ಕುಮಾರ್ ಎಂಬುವರ ಮನೆಯಲ್ಲಿ ಸುಮಾರು 12 ಅಡಿ ಉದ್ದದ್ದ ಹೆಬ್ಬಾವು ಕಂಡು ಬಂದಿದ್ದು ಕುಟುಂಬಸ್ಥರು ಗಾಬರಿಗೊಂಡಿದ್ದಾರೆ. ಸದ್ಯ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಹೆಬ್ಬಾವು ರಕ್ಷಣೆ ಮಾಡಿದ್ದಾರೆ. ಹೆಬ್ಬಾವನ್ನು ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಬಸವನ ಬೆಟ್ಟದಲ್ಲಿ ಎರಡು ಚಿರತೆಗಳು ಪ್ರತ್ಯಕ್ಷ
ತುಮಕೂರು ಜಿಲ್ಲೆಯ ಮಧುಗಿರಿಯ‌ ಬಸವನ ಬೆಟ್ಟದಲ್ಲಿ ಎರಡು ಚಿರತೆಗಳು ಪ್ರತ್ಯಕ್ಷವಾಗಿವೆ. ಬೆಟ್ಟದ ತಪ್ಪಲಿನಲ್ಲಿ ವಾಸವಿರುವ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಬಂಡೆ ಮೇಲೆ ಕುಳಿತು ವಿಹರಿಸುತ್ತಿರುವ ಎರಡು ಚಿರತೆಗಳನ್ನು ನೋಡಿ ಬೆಟ್ಟದ ತಪ್ಪಲಿನಲ್ಲಿ ವಾಸವಿರುವ ಜನರು ಭಯ ಭೀತರಾಗಿದ್ದಾರೆ.

ರಾತ್ರಿ ವೇಳೆ ಓಡಾಡಲು ಮಧುಗಿರಿ ಜನತೆ ಚಿಂತಿಸುವಂತಾಗಿದೆ. ಕಳೆದ ಎರಡು ದಿನಗಳಿಂದ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು ಇವುಗಳನ್ನು ನೋಡಲು ಜನರು ರಸ್ತೆಯಲ್ಲಿ ನಿಂತಿದ್ದಾರೆ. ವಲಯ ಅರಣ್ಯಧಿಕಾರಿ ಸಿ.ರವಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸಾರ್ವಜನಿಕರು ಚಿರತೆಗಳ ಸಮೀಪ ಹೋಗಬಾರದು ಹಾಗೂ ಯಾವುದೇ ರೀತಿ ತೊಂದರೆ‌ ನೀಡಬಾರದು ಎಂದು ಮನವಿ ಮಾಡಿದ್ದಾರೆ.

ಚಿರತೆಗಳನ್ನು ನೋಡಲು ರಸ್ತೆಯಲ್ಲಿ ನಿಂತಿರುವ ಜನ

ಪೆಟ್ಟಿಗೆ ಅಂಗಡಿಯಲ್ಲಿ ಅಡಗಿ ಕುಳಿತಿದ್ದ ಹಾವು ರಕ್ಷಣೆ
ಪೆಟ್ಟಿಗೆ ಅಂಗಡಿಯಲ್ಲಿ ಅಡಗಿಕೊಂಡಿದ್ದ ಮಂಡಲದ ಹಾವನ್ನು ರಕ್ಷಣೆ ಮಾಡಿರುವ ಘಟನೆ ಮೈಸೂರಿನ ಗೋಕುಲಂ ಬಡಾವಣೆಯಲ್ಲಿ ನಡೆದಿದೆ. ಅತಿ ಹೆಚ್ಚು ವಿಷಕಾರಿಯಾಗಿರುವ ಮಂಡಲದ ಹಾವೊಂದು ಪೆಟ್ಟಿಗೆ ಅಂಗಡಿಯೊಳಗೆ ಅಡಗಿ ಕುಳಿತಿತ್ತು. ಸದ್ಯ ಸ್ನೇಕ್ ಶ್ಯಾಮ್ ಹಾವನ್ನು ರಕ್ಷಿಸಿ ಸುರಕ್ಷಿತ ಪ್ರದೇಶದಲ್ಲಿ ಬಿಟ್ಟಿದ್ದಾರೆ.

ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಗೆ ಮತ್ತೊಂದು ಶಾಕ್ ನೀಡಲು ಮುಂದಾದ ಬಿಸಿಸಿಐ?: ಏನು ಗೊತ್ತೇ?

Published On - 10:38 am, Fri, 17 December 21