ಬೆಂಗಳೂರು: ಅಪಾರ್ಟ್ಮೆಂಟ್ನಲ್ಲಿ ಒಮಿಕ್ರಾನ್ ಸ್ಟೋಟ; ಮದುವೆಗೆಂದು ದೆಹಲಿಗೆ ತೆರಳಿದ್ದ ತಾಯಿ, ಮಗನಲ್ಲಿ ಸೋಂಕು ದೃಢ
ಅಂತರಾಷ್ಟ್ರೀಯ ಪ್ರಯಾಣಿಕರಲ್ಲದ ಕಾರಣ ಕ್ವಾರಂಟೈನ್ ಆಗದೆ ನೇರವಾಗಿ ಮನೆಗೆ ಬಂದಿದ್ದರು. ಆದರೆ ದೆಹಲಿಯಲ್ಲಿ ಒಮಿಕ್ರಾನ್ ದೃಢಪಟ್ಟ ಸೋಂಕಿತನ ಪ್ರಾಥಮಿಕ ಸಂಪರ್ಕಿತರು ಎಂದು ಪರೀಕ್ಷೆ ಮಾಡಿದಾಗ ತಾಯಿ ಹಾಗೂ ಮಗನಿಗೂ ಸೋಂಕು ದೃಢವಾಗಿದೆ.
ಬೆಂಗಳೂರು: ಆದರ್ಶ ಫಾರ್ಮ್ ರೀಟ್ರೀಟ್ನಲ್ಲಿ ತಾಯಿ ಮತ್ತು ಮಗನಿಗೆ ಒಮಿಕ್ರಾನ್ ಸೋಂಕು ದೃಢವಾಗಿದೆ. ಬೆಂಗಳೂರಿನ ಮಹದೇವಪುರದ ಬೆಳ್ಳಂದೂರು ವಾರ್ಡ್ ವ್ಯಾಪ್ತಿಯ ರೀಟ್ರೀಟ್ ವಿಲ್ಲಾದಲ್ಲಿ 70 ವರ್ಷದ ತಾಯಿ ಮತ್ತು 36 ವರ್ಷದ ಮಗನಿಗೆ ಒಮಿಕ್ರಾನ್ (Omicron) ದೃಢಪಟ್ಟಿದೆ. ದೆಹಲಿಯಲ್ಲಿ ನಡೆದ ಮದುವೆಗೆ ತಾಯಿ ಹಾಗೂ ಮಗ ತೆರಳಿದ್ದರು. ನಂತರ ಡಿಸೆಂಬರ್ 3ರಂದು ದೆಹಲಿಯಿಂದ ಬೆಂಗಳೂರಿಗೆ ಹಿಂದಿರುಗಿದ್ದರು. ಅಂತರಾಷ್ಟ್ರೀಯ ಪ್ರಯಾಣಿಕರಲ್ಲದ ಕಾರಣ ಕ್ವಾರಂಟೈನ್ ಆಗದೆ ನೇರವಾಗಿ ಮನೆಗೆ ಬಂದಿದ್ದರು. ಆದರೆ ದೆಹಲಿಯಲ್ಲಿ ಒಮಿಕ್ರಾನ್ ದೃಢಪಟ್ಟ ಸೋಂಕಿತನ ಪ್ರಾಥಮಿಕ ಸಂಪರ್ಕಿತರು ಎಂದು ಪರೀಕ್ಷೆ ಮಾಡಿದಾಗ ತಾಯಿ ಹಾಗೂ ಮಗನಿಗೂ ಸೋಂಕು ದೃಢವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ದೇವರಬಿಸನಹಳ್ಳಿಯ ವಿಲ್ಲಾಗೆ ಆರೋಗ್ಯ ಅಧಿಕಾರಿಗಳು ಆಗಮಿಸಿದ್ದಾರೆ. ಒಮಿಕ್ರಾನ್ ಸೋಂಕಿತರ ಸಂಪರ್ಕಕ್ಕೆ ಬಂದವರಿಗೆ ಕೊವಿಡ್ ಟೆಸ್ಟ್ ಮಾಡುತ್ತಿದ್ದು, ಅಧಿಕಾರಿಗಳು ಸಾಮೂಹಿಕವಾಗಿ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಈ ವೇಳೆ ಇದೇ ಅಪಾರ್ಟ್ಮೆಂಟ್ನ ಕೆಲವರಿಗೆ ಕೊರೊನಾ ಸೋಂಕು ದೃಢವಾಗಿರುವುದು ಪತ್ತೆಯಾಗಿದೆ.
ದೇವನಹಳ್ಳಿ: ಒಮಿಕ್ರಾನ್ ಆತಂಕ ದಿನದಿಂದ ದಿನಕ್ಕೆ ವಿದೇಶದಿಂದ ಬರುತ್ತಿರುವವರಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಪತ್ತೆಯಾಗುತ್ತಿದೆ. ರಾಜ್ಯದಲ್ಲಿ ಡಿಸೆಂಬರ್ 16ರಂದು 5 ಜನರಿಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿತ್ತು. ಇದರ ನಡುವೆ ಇಂದು ಲಂಡನ್, ದುಬೈನಿಂದ ಬಂದ 6 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. KIABಯಲ್ಲಿ ಕೊವಿಡ್ ಟೆಸ್ಟ್ ವೇಳೆ 6 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಲಂಡನ್ ಮತ್ತು ದುಬೈನಿಂದ ಇಂದು ಬೆಳಗ್ಗೆ ಕೆಐಎಬಿಗೆ ಬಂದ ಪ್ರಯಾಣಿಕರ ಪೈಕಿ 7 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಲಂಡನ್ ನಿಂದ ಬಂದ ಓರ್ವ ಮತ್ತು ದುಬೈನಿಂದ ಬಂದ ಐವರಿಗೆ ಸೋಂಕು ದೃಢಪಟ್ಟಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರ್ಟಿಪಿಸಿಆರ್ ಟೆಸ್ಟಿಂಗ್ ಮಾಡಿದ ವೇಳೆ ಸೋಂಕು ದೃಢಪಟ್ಟಿದೆ. ಸದ್ಯ ಸೋಂಕಿತರಿಗೆ ಬೋರಿಂಗ್ ಆಸ್ಪತ್ರೆಯಲ್ಲಿ ಐಸೋಲೇಷನ್ ಮಾಡಲಾಗಿದೆ. ಸೋಂಕಿತರ ಸ್ಯಾಂಪಲ್ ಪಡೆದು ಜಿನೋಟಿಕ್ ಸೀಕ್ವೆನನ್ಸ್ಗೆ ಕಳಿಸಲಾಗಿದೆ.
ಇದನ್ನೂ ಓದಿ: Omicron: ಕರ್ನಾಟಕದ ಮತ್ತೆ ಐವರಲ್ಲಿ ಒಮಿಕ್ರಾನ್ ಸೋಂಕು: ಸೋಂಕಿತರ ಒಟ್ಟು ಸಂಖ್ಯೆ 8ಕ್ಕೆ ಏರಿಕೆ
Omicron: ಕರ್ನಾಟಕದಲ್ಲಿ ಮತ್ತೊಂದು ಒಮಿಕ್ರಾನ್ ಪ್ರಕರಣ ಪತ್ತೆ, ದಕ್ಷಿಣ ಆಫ್ರಿಕಾದಿಂದ ವಾಪಸಾಗಿದ್ದವರಲ್ಲಿ ಸೋಂಕು ದೃಢ
Published On - 10:58 am, Fri, 17 December 21