ಕ್ವಾಕ್​, ಕ್ವಾಕ್​.. ಮಂಡ್ಯದಲ್ಲಿ ನಕಲಿ ವೈದ್ಯನ ಇಂಜೆಕ್ಷನ್​ಗೆ ವ್ಯಕ್ತಿ ಬಲಿ!

|

Updated on: Nov 22, 2019 | 11:37 AM

ಮಂಡ್ಯ: ನಕಲಿ ವೈದ್ಯನಿಂದ ಇಂಜೆಕ್ಷನ್ ಪಡೆದಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಡಮಹಳ್ಳಿ ನಿವಾಸಿ 58 ವರ್ಷದ ಶಿವಲಿಂಗೇಗೌಡ ಮೃತ ವ್ಯಕ್ತಿ. ಕೃಷ್ಣಮೂರ್ತಿ ಮಂಗಳೂರು ಮೂಲದ ನಕಲಿ ವೈದ್ಯ. ಕಳೆದ 20 ವರ್ಷದಿಂದ ತೊರೆಕಾಡನಹಳ್ಳಿಯಲ್ಲಿ ಕ್ಲಿನಿಕ್ ನಡೆಸುತ್ತಿದ್ದಾರೆ. ಜ್ವರ ಹಿನ್ನೆಲೆ ಶಿವಲಿಂಗೇಗೌಡ ಸೋಮವಾರ ವೈದ್ಯ ಕೃಷ್ಣಮೂರ್ತಿ ಬಳಿ ಬಂದು ಚಿಕಿತ್ಸೆ ಪಡೆದು, ಇಂಜೆಕ್ಷನ್ ಹಾಕಿಸಿಕೊಂಡು ಹೋಗಿದ್ದರು. ಆದರೆ ಇಂಜೆಕ್ಷನ್ ಹಾಕಿದ ಬಳಿಕ ಸೊಂಟದಲ್ಲಿ ಊತ ಕಾಣಿಸಿಕೊಂಡಿದೆ. ಹೀಗಾಗಿ ಮನೆಯವರು ಶಿವಲಿಂಗೇಗೌಡ […]

ಕ್ವಾಕ್​, ಕ್ವಾಕ್​.. ಮಂಡ್ಯದಲ್ಲಿ ನಕಲಿ ವೈದ್ಯನ ಇಂಜೆಕ್ಷನ್​ಗೆ ವ್ಯಕ್ತಿ ಬಲಿ!
Follow us on

ಮಂಡ್ಯ: ನಕಲಿ ವೈದ್ಯನಿಂದ ಇಂಜೆಕ್ಷನ್ ಪಡೆದಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಡಮಹಳ್ಳಿ ನಿವಾಸಿ 58 ವರ್ಷದ ಶಿವಲಿಂಗೇಗೌಡ ಮೃತ ವ್ಯಕ್ತಿ. ಕೃಷ್ಣಮೂರ್ತಿ ಮಂಗಳೂರು ಮೂಲದ ನಕಲಿ ವೈದ್ಯ. ಕಳೆದ 20 ವರ್ಷದಿಂದ ತೊರೆಕಾಡನಹಳ್ಳಿಯಲ್ಲಿ ಕ್ಲಿನಿಕ್ ನಡೆಸುತ್ತಿದ್ದಾರೆ. ಜ್ವರ ಹಿನ್ನೆಲೆ ಶಿವಲಿಂಗೇಗೌಡ ಸೋಮವಾರ ವೈದ್ಯ ಕೃಷ್ಣಮೂರ್ತಿ ಬಳಿ ಬಂದು ಚಿಕಿತ್ಸೆ ಪಡೆದು, ಇಂಜೆಕ್ಷನ್ ಹಾಕಿಸಿಕೊಂಡು ಹೋಗಿದ್ದರು.

ಆದರೆ ಇಂಜೆಕ್ಷನ್ ಹಾಕಿದ ಬಳಿಕ ಸೊಂಟದಲ್ಲಿ ಊತ ಕಾಣಿಸಿಕೊಂಡಿದೆ. ಹೀಗಾಗಿ ಮನೆಯವರು ಶಿವಲಿಂಗೇಗೌಡ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಶಿವಲಿಂಗೇಗೌಡ ಮೃತಪಟ್ಟಿದ್ದಾರೆ. ಸಾವಿಗೆ ವೈದ್ಯ ಕೃಷ್ಣಮೂರ್ತಿಯೇ ಕಾರಣವೆಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.  ಪ್ರಕರಣ ಹಲಗೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Published On - 8:43 am, Fri, 22 November 19