Ragging in Mangalore: ಮಂಗಳೂರಿನಲ್ಲಿ ಮತ್ತೆ ರ್ಯಾಗಿಂಗ್ ಪಿಡುಗು; ಕೇರಳ ಮೂಲದ 6 ನರ್ಸಿಂಗ್ ವಿದ್ಯಾರ್ಥಿಗಳು ಅರೆಸ್ಟ್

| Updated By: ಸಾಧು ಶ್ರೀನಾಥ್​

Updated on: Jul 17, 2021 | 3:33 PM

Pandeshwar police: ಮಂಗಳೂರಿನಲ್ಲಿ ರ್ಯಾಂಗಿಗ್ ಪಿಡುಗು ಮತ್ತೆ ಕಾಣಿಸಿಕೊಂಡಿದೆ. ಜೂನಿಯರ್​ ವಿದ್ಯಾರ್ಥಿಗಳಿಗೆ ಸೀನಿಯರ್ಸ್ ರ್ಯಾಗಿಂಗ್ ಮಾಡಿರುವ ಪ್ರಕರಣ ಬೆಳಿಕಗೆ ಬಂದಿದೆ. ರ್ಯಾಗಿಂಗ್ ಮಾಡಿದ ಆರು ಜನ ವಿದ್ಯಾರ್ಥಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

Ragging in Mangalore: ಮಂಗಳೂರಿನಲ್ಲಿ ಮತ್ತೆ ರ್ಯಾಗಿಂಗ್ ಪಿಡುಗು; ಕೇರಳ ಮೂಲದ 6 ನರ್ಸಿಂಗ್ ವಿದ್ಯಾರ್ಥಿಗಳು ಅರೆಸ್ಟ್
ಸಾಂದರ್ಭಿಕ ಚಿತ್ರ
Follow us on

ಮಂಗಳೂರು: ಮಂಗಳೂರಿನಲ್ಲಿ ರ್ಯಾಂಗಿಗ್ (Ragging) ಪಿಡುಗು ಮತ್ತೆ ಕಾಣಿಸಿಕೊಂಡಿದೆ. ಜೂನಿಯರ್​ ವಿದ್ಯಾರ್ಥಿಗಳಿಗೆ ಸೀನಿಯರ್ಸ್ ರ್ಯಾಗಿಂಗ್ ಮಾಡಿರುವ ಪ್ರಕರಣ ಬೆಳಿಕಗೆ ಬಂದಿದೆ. ರ್ಯಾಗಿಂಗ್ ಮಾಡಿದ ಆರು ಜನ ವಿದ್ಯಾರ್ಥಿಗಳನ್ನು ಮಂಗಳೂರು ನಗರ ಪೊಲೀಸರು (Mangaluru City Police) ಬಂಧಿಸಿದ್ದಾರೆ.

ನಗರದ ಖಾಸಗಿ ಕಾಲೇಜಿನ (Indira College of Nursing, Falnir Road) ಮೂರನೇ ವರ್ಷದ ವಿದ್ಯಾರ್ಥಿಗಳು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೇರಳ ಮೂಲದ ವಿದ್ಯಾರ್ಥಿ ಮ್ಯಾನುಯಲ್ ಬಾಬು ಎಂಬಾತ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದ. ಬಂಧಿತರೆಲ್ಲಾ ಕೇರಳ ಮೂಲದ ವಿದ್ಯಾರ್ಥಿಗಳು.

ಶ್ರೀಲಾಲ್, ಶಾಹಿದ್, ಅಮ್ಜದ್, ಜುರೈಜ್, ಹುಸೈನ್ ಮತ್ತು ಲಿಮ್ಸ್ ಬಂಧಿತ ವಿದ್ಯಾರ್ಥಿಗಳು. ಈ ಆರೂ ಮಂದಿ ಸೀನಿಯರ್ ವಿದ್ಯಾರ್ಥಿಗಳು ಜೂನಿಯರ್ಸ್ ವಾಸವಿದ್ದ ಅಪಾರ್ಟ್ಮೆಂಟ್ ಗೆ ನುಗ್ಗಿ ರ್ಯಾಗಿಂಗ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಒಳ ಚಡ್ಡಿಯಲ್ಲಿ ನಿಲ್ಲಿಸಿ, ದೈಹಿಕವಾಗಿಯೂ ಹಲ್ಲೆ ಮಾಡಲಾಗಿದೆ. ಸೀನಿಯರ್ಸ್ ಬರೋವಾಗ ತಲೆ ಕೆಳಗೆ ಹಾಕಿಕೊಂಡು ಹೋಗಬೇಕೆಂದು ರ್ಯಾಗಿಂಗ್ (giving respect to seniors) ಮಾಡಿದ್ದರು. ನಾವು ಬರೋವಾಗ ಎದ್ದು ನಿಂತು ರೆಸ್ಪೆಕ್ಟ್ ಕೊಡಬೇಕು ಎಂದು ಹೇಳಿ ಹಲ್ಲೆ ಮಾಡಿದ್ದರು. ಇದೀಗ, ಮಂಗಳೂರು ದಕ್ಷಿಣ ವಿಭಾಗದ ಪಾಂಡೇಶ್ವರ ಪೊಲೀಸರಿಂದ (Pandeshwar – Mangaluru South Police) ಆ ಆರೂ ವಿದ್ಯಾರ್ಥಿಗಳ ಬಂಧನವಾಗಿದೆ.

(Ragging Mangaluru students from kerala arrested by pandeshwar police)

Published On - 3:32 pm, Sat, 17 July 21