ಬೆಂಗಳೂರು: ಭಾರತ್ ಜೋಡೋ ಯಾತ್ರೆ (Bharat Jodo Yatra) ಪ್ರಯುಕ್ತ ಕರ್ನಾಟದಲ್ಲಿ ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರೊಂದಿಗೆ ಪುಷ್-ಅಪ್ ಚಾಲೆಂಜ್ (Push-Up Challenge) ಸ್ವೀಕರಿಸಿದರು. ಅಲ್ಲೇ ಇದ್ದ ಪುಟ್ಟ ಹುಡುಗ ಕೂಡ ಕರ್ನಾಟಕದ ರಸ್ತೆಯಲ್ಲಿ ರಾಹುಲ್ ಗಾಂಧಿ ಜೊತೆ ಪುಶ್-ಅಪ್ ಮಾಡಿದ್ದಾನೆ.
ಭಾರತ್ ಜೋಡೋ ಯಾತ್ರೆಯ ಪ್ರಯುಕ್ತ ಕರ್ನಾಟಕದಲ್ಲಿರುವ ರಾಹುಲ್ ಗಾಂಧಿಯವರ ವಿಡಿಯೋಗಳನ್ನು ಕಾಂಗ್ರೆಸ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ರಾಹುಲ್ ಗಾಂಧಿ ನಡೆದುಕೊಂಡು ಹೋಗುತ್ತಿರುವಾಗ ಹುಡುಗನೊಬ್ಬ ಅವರ ಜೊತೆ ಸೇರಿಕೊಂಡು ತನ್ನ ತೋಳಿನ ಬಲವನ್ನು ತೋರಿಸುತ್ತಾನೆ. ಇದನ್ನು ನೋಡಿ ನಕ್ಕ ರಾಹುಲ್ ಗಾಂಧಿ ಪುಷ್-ಅಪ್ ಚಾಲೆಂಜ್ ಸ್ವೀಕರಿಸಿದ್ದಾರೆ.
#BharatJodoYatra Push-Up Challenge! pic.twitter.com/SokyTW09uM
— Congress (@INCIndia) October 11, 2022
ಇದನ್ನೂ ಓದಿ: ಸಿದ್ದು ಕೈ ಹಿಡಿದು ಓಡಿದ ರಾಹುಲ್: ಯಾರಾದರೂ ತಡೆಯುವುದಿದ್ದರೆ ತಡೆಯಿರಿ ಎಂದ ರಾಹುಲ್ ಗಾಂಧಿ!
ತನ್ನೊಂದಿಗೆ ಪುಶ್-ಅಪ್ ಮಾಡಲು ಆ ಹುಡುಗನನ್ನು ಆಹ್ವಾನಿಸಿದ ರಾಹುಲ್ ಗಾಂಧಿ ನಡುರಸ್ತೆಯಲ್ಲೇ ಪುಶ್-ಅಪ್ ಮಾಡಲು ಶುರು ಮಾಡುತ್ತಾರೆ. ಆಗ ಕೆಸಿ ವೇಣುಗೋಪಾಲ್, ಡಿಕೆ ಶಿವಕುಮಾರ್ ಸಹ ಅವರ ಜೊತೆ ಸೇರುತ್ತಾರೆ. ಆದರೆ, ಡಿಕೆ ಶಿವಕುಮಾರ್ ಅವರಿಗೆ ಸುಸ್ತಾಗಿ ನನ್ನಿಂದ ಇದೆಲ್ಲ ಸಾಧ್ಯವಿಲ್ಲ ಎಂದು ಎದ್ದು ನಿಲ್ಲುತ್ತಾರೆ. ಬಾಲಕನ ಜೊತೆ ರಾಹುಲ್ ಗಾಂಧಿ ಪುಶ್-ಅಪ್ ಮಾಡಿ ಆತನನ್ನು ಖುಷಿಪಡಿಸುತ್ತಾರೆ.
The one full and two half pushups!
??????#BharatJodoYatra pic.twitter.com/y3C9ucNOU4— Randeep Singh Surjewala (@rssurjewala) October 11, 2022
ಪುಶ್-ಅಪ್ ಚಾಲೆಂಜ್ನ ಕೊನೆಯಲ್ಲಿ ರಾಹುಲ್ ಗಾಂಧಿ ಆ ಹುಡುಗನಿಗೆ ಕೈ ಕುಲುಕಿದ್ದಾರೆ. ರಾಹುಲ್ ಗಾಂಧಿ ಪುಶ್- ಅಪ್ ಚಾಲೆಂಜ್ ಅನ್ನು ಸಂತೋಷದಿಂದ ಸ್ವೀಕರಿಸುತ್ತಿರುವುದು ಇದೇ ಮೊದಲಲ್ಲ. 2021ರ ಅವರ ಹಿಂದಿನ ಪುಶ್-ಅಪ್ ವೀಡಿಯೊ ಕೂಡ ವೈರಲ್ ಆಗಿತ್ತು. ಆ ಸಮಯದಲ್ಲಿ, ಅವರು ತಮಿಳುನಾಡಿನ ಕಾಲೇಜಿನಲ್ಲಿದ್ದರು. ಅಲ್ಲಿನ ವಿದ್ಯಾರ್ಥಿಗಳ ಜೊತೆ ಅವರು ಪುಶ್-ಅಪ್ ಮಾಡಿದ್ದರು.