ರಾಯಚೂರು ಜಿಲ್ಲೆ 3 ದಿನಗಳ ಕಾಲ ಸಂಪೂರ್ಣ ಬಂದ್; ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಕ್ರಮ
ಮೂರು ದಿನಗಳ ಕಾಲ, ಅಂದರೆ ಮೇ 16, 17 ಮತ್ತು 18ರಂದು ಆಸ್ಪತ್ರೆ, ಮೆಡಿಕಲ್ಸ್, ಪೆಟ್ರೋಲ್ ಬಂಕ್ಗಳು ಮಾತ್ರ ಓಪನ್ ಇರಲಿವೆ. ಈ ಅವಧಿಯಲ್ಲಿ ಹಣ್ಣು, ತರಕಾರಿ ಸೇರಿ ಅಗತ್ಯ ವಸ್ತುಗಳ ಮಾರಾಟಕ್ಕೂ ತಡೆ ಹೇರಲಾಗಿದೆ.
ರಾಯಚೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 3 ದಿನಗಳ ಕಾಲ ಸಂಪೂರ್ಣ ಬಂದ್ ನಡೆಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ಮೇ 16, 17 ಮತ್ತು 18ರಂದು ಇಡೀ ಜಿಲ್ಲೆ ಸಂಪೂರ್ಣ ಬಂದ್ ಮಾಡುವಂತೆ ಸೂಚಿಸಲಾಗಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಡಿಸಿ ತಿಳಿಸಿದ್ದಾರೆ.
ಮೂರು ದಿನಗಳ ಕಾಲ, ಅಂದರೆ ಮೇ 16, 17 ಮತ್ತು 18ರಂದು ಆಸ್ಪತ್ರೆ, ಮೆಡಿಕಲ್ಸ್, ಪೆಟ್ರೋಲ್ ಬಂಕ್ಗಳು ಮಾತ್ರ ಓಪನ್ ಇರಲಿವೆ. ಈ ಅವಧಿಯಲ್ಲಿ ಹಣ್ಣು, ತರಕಾರಿ ಸೇರಿ ಅಗತ್ಯ ವಸ್ತುಗಳ ಮಾರಾಟಕ್ಕೂ ತಡೆ ಹೇರಲಾಗಿದೆ. ಈ ಬಗ್ಗೆ ರಾಯಚೂರು ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಆದೇಶ ನೀಡಿದ್ದಾರೆ.
ರಾಜ್ಯದ ಕೊವಿಡ್ ಪ್ರಕರಣಗಳ ವಿವರ ಕಳೆದ 24 ಗಂಟೆಗಳಲ್ಲಿ ಕರ್ನಾಟಕ ರಾಜ್ಯದಲ್ಲಿ 41,779 ಜನರಿಗೆ ಕೊವಿಡ್ ಸೋಂಕು ಖಚಿತಪಟ್ಟಿದೆ. ಇದೇ ಅವಧಿಯಲ್ಲಿ ರಾಜ್ಯದಲ್ಲಿ ಕೊರೊನಾದಿಂದ 373 ಜನರು ನಿಧನರಾಗಿದ್ದಾರೆ.ಬೆಂಗಳೂರು ನಗರ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 14,316 ಜನರಿಗೆ ಸೋಂಕು ತಗುಲಿದ್ದು ಖಚಿತಪಟ್ಟಿದ್ದು, 121 ಜನರು ಅಸು ನೀಗಿದ್ದಾರೆ. ಇಂದಿನ ಸೋಂಕಿತರ ಮೂಲಕ ರಾಜ್ಯದಲ್ಲಿ ಈವರೆಗೆ ಕೊರೊನಾಕ್ಕೆ ತುತ್ತಾದವರ ಸಂಖ್ಯೆ 21,30,267ಕ್ಕೆ ಏರಿಕೆಯಾಗಿದೆ. ಜತೆಗೆ ಈವರೆಗೆ 15,10,557 ಜನರು ಗುಣಮುಖರಾಗಿದ್ದಾರೆ. 5,98,605 ಸೋಂಕಿತರಿಗೆ ರಾಜ್ಯದ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಎಲ್ಲದರ ಜತೆಗೆ ಪ್ರಮುಖವಾಗಿ ಹೇಳಲೇಬೇಕಾದ ಅಂಶವೆಂದರೆ ಕಳೆದ 24 ಗಂಟೆಗಳಲ್ಲಿ 35,879 ಜನರು ಕೊವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ.
ಜಿಲ್ಲಾವಾರು ಸೋಂಕಿತರ ವಿವರ ಬೆಂಗಳೂರು ನಗರ ಜಿಲ್ಲೆ 14,316, ತುಮಕೂರು 2,668, ಬಳ್ಳಾರಿ 2,421, ಮೈಸೂರು 2,340, ಬೆಳಗಾವಿ 1,592, ಮಂಡ್ಯ 1,385, ಹಾಸನ 1,339, ಉಡುಪಿ 1,219, ದಕ್ಷಿಣ ಕನ್ನಡ 1,215, ರಾಯಚೂರು 1,063, ಕಲಬುರಗಿ 929, ಧಾರವಾಡ 829, ಚಿಕ್ಕಮಗಳೂರು 835, ಉತ್ತರ ಕನ್ನಡ 78, ಬಾಗಲಕೋಟೆ 773, ಚಾಮರಾಜನಗರ ಜಿಲ್ಲೆ 713, ಬೆಂಗಳೂರು ಗ್ರಾಮಾಂತರ 707, ಯಾದಗಿರಿ 68, ಚಿಕ್ಕಬಳ್ಳಾಪುರ 676, ಗದಗ 591, ದಾವಣಗೆರೆ 581, ಕೊಡಗು 539, ಕೊಪ್ಪಳ 495, ರಾಮನಗರ 459, ಶಿವಮೊಗ್ಗ 459, ವಿಜಯಪುರ 444, ಚಿತ್ರದುರ್ಗ 314, ಕೋಲಾರ 306, ಹಾವೇರಿ 292, ಬೀದರ್ 223 ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಲಾಕ್ಡೌನ್ ಮುಂದುವರೆಸುವಂತೆ ಮುಖ್ಯಮಂತ್ರಿಗೆ ಸಲಹೆ ನೀಡಿದ ಸಚಿವರು
Published On - 10:25 pm, Fri, 14 May 21