SSLC Toppers: ರಾಯಚೂರು ಶಾಸಕ ಶಿವರಾಜ್ ಪಾಟೀಲ್ ಪುತ್ರಿ ರಾಜ್ಯಕ್ಕೆ ಪ್ರಥಮ ಸ್ಥಾನ; ಇನ್ನೂ ಯಾರೆಲ್ಲ ಈ ಸಾಧನೆ ಮಾಡಿದ್ದಾರೆ?
ಈ ಬಾರಿ 145 ವಿದ್ಯಾರ್ಥಿಗಳು ಮೊದಲ ರ‍್ಯಾಂಕ್ನಲ್ಲಿ ತೇರ್ಗಡೆಗೊಂಡಿದ್ದಾರೆ. ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಪುತ್ರಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ರಾಯಚೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2021-2022ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶವನ್ನು ಇಂದು (ಮೇ 19ರಂದು) ಪ್ರಕಟಿಸಿದೆ. ಈ ಬಾರಿ 145 ವಿದ್ಯಾರ್ಥಿಗಳು ಮೊದಲ ರ‍್ಯಾಂಕ್ನಲ್ಲಿ ತೇರ್ಗಡೆಗೊಂಡಿದ್ದಾರೆ. ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಪುತ್ರಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಪೂರ್ಣ ಪ್ರಜ್ಞಾ ಪ್ರೌಢಶಾಲೆ ವಿದ್ಯಾರ್ಥಿನಿ ಸಾಕ್ಷಿ ಪಾಟೀಲ್ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು ತಂದೆ ಹಾಗೂ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಬೆಂಗಳೂರು ನಗರದ ಪೂರ್ಣ ಪ್ರಜ್ಞಾ ಶಾಲೆಯಲ್ಲಿ ಓದುತ್ತಿದ್ದ ಸಾಕ್ಷಿ ಪಾಟೀಲ್ ಇಂಥಗ ಸಾಧನೆ ಮಾಡಿದ್ದಾರೆ. ಎಲ್ಲಾ ಒಟ್ಟು 625 ಕ್ಕೆ 625 ಅಂಕಗಳನ್ನು ಪಡೆಯೋ ಮೂಲಕ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ. ಈ ಬಗ್ಗೆ ಶಾಸಕ ಡಾ.ಶಿವರಾಜ್ ಪಾಟೀಲ್ ಟಿವಿ9 ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಬಹಳ ಸಂತೋಷದ ವಿಷಯ. ಆಕೆಯೇ ಕರೆ ಮಾಡಿ,ರ್ಯಾಂಕ್ ಬಂದಿರೊ ವಿಚಾರ ಹೇಳಿದ್ಲು. ಈ ಸಾಧನೆಯಲ್ಲಿ ನನ್ನ ಪಾತ್ರವಿಲ್ಲ. ಆಕೆ ತಾಯಿ ಹಾಗೂ ಮಗಳ ಪಾತ್ರವೇ ಹೆಚ್ಚು. ಇಬ್ಬರು ಮಕ್ಕಳಿಗೆ ಸ್ವಾತಂತ್ರ್ಯ ಕೊಟ್ಟಿದಿನಿ. ಅವರ ತಾಯಿಯ ಕೊಡುಗೆಯಿಂದ ಇದೆಲ್ಲಾ ಸಾಧ್ಯವಾಗಿದೆ. ಇದರ ಶ್ರೇಯಸ್ಸು ಆಕೆ ತಾಯಿಗೆ ಸಲ್ಲಬೇಕು. ಓದಬೇಕಾದರೇ,ಅರ್ಥ ಮಾಡ್ಕೊಂಡು ಶಿಸ್ತಿನಿಂದ ಓದಿ ಅಂತಿದ್ದೆ. ರಾತ್ರಿಯೆಲ್ಲಾ ನಿದ್ದೆಗೆಟ್ಟು ಓದೋದ್ರಲ್ಲಿ ಪ್ರಯೋಜನವಿಲ್ಲ. ಹೀಗಂತ ಅಡ್ವೈಸ್ ಮಾಡ್ತಿದ್ದೆ ಎಂದು ಶಾಸಕ ಶಿವರಾಜ್ ಪಾಟೀಲ್ ತಿಳಿಸಿದ್ದಾರೆ. ಶಾಸಕರು ಮಗಳ ಸಾಧನೆಯಲ್ಲಿ ತಮ್ಮ ಪಾತ್ರವಿಲ್ಲ ತಮ್ಮ ಪತ್ನಿ ಪಾತ್ರವಿದೆ ಅಂತ ಪತ್ನಿಗೆ ಕ್ರೆಡಿಟ್ ಕೊಟ್ಟ ವೇಳೆ ಅವರ ಕಾರ್ಯಕರ್ತರು ಚಪ್ಪಾಳೆ ತಟ್ಟು ಅಭಿನಂದಿಸಿದ್ರು.
ವಿಜಯಪುರ ಜಿಲ್ಲೆಯಲ್ಲಿ ಆರು ವಿದ್ಯಾರ್ಥಿಗಳು ಟಾಪರ್ 625ಕ್ಕೆ 625 ಅಂಕ ಪಡೆಯುವ ಮೂಲಕ 6 ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ವಿಜಯಪುರ ತಾಲೂಕಿನ ಜುಮನಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಕನ್ನಡ ಮಾಧ್ಯಮದ ಅಮಿತ್ ಮಾದರ, ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಇಂಗ್ಲೀಷ್ ಮಾಧ್ಯಮದ ಐಶ್ವರ್ಯ ಈರಣ್ಣ ಕನಸೆ, ಸಿಂದಗಿ ತಾಲೂಕಿನ ವಿಭೂತಿಹಾಳ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಸ್ವಾತಿ ಗೌಡಪ್ಪ ಮಲ್ಲೇದ. ವಿಜಯಪುರ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಇಂಗ್ಲಿಷ್ ಮಾಧ್ಯಮ ಪ್ರೌಢ ಶಾಲೆಯ ರಕ್ಷಿತಾ ಸುರೇಶ ಚಿನಿವಾರ, ತಾಳಿಕೋಟೆ ಪಟ್ಟಣದ ಸರ್ವಜ್ಞ ವಿದ್ಯಾಪೀಠ ಇಂಗ್ಲಿಷ್ ಮಾಧ್ಯಮ ಪ್ರೌಢ ಶಾಲೆಯ ಶ್ರೇಯಾ ದೇಸಾಯಿ, ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ಆಕ್ಸಫರ್ಡ್ ಇಂಗ್ಲಿಷ್ ಮಾಧ್ಯಮ ಪ್ರೌಢ ಶಾಲೆಯ ಯಲ್ಲಾಲಿಂಗ ಬಸಪ್ಪ ಸುಳಿಭಾವಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: KSEEB Result 2022: ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದ ಸಂಪೂರ್ಣ ವಿವರ
ಬಾಗಲಕೋಟೆ ಜಿಲ್ಲೆಯಲ್ಲಿ7 ವಿದ್ಯಾರ್ಥಿಗಳು 625 ಕ್ಕೆ 624 ಅಂಕ ಬಾಗಲಕೋಟೆ ಜಿಲ್ಲೆಯಲ್ಲಿ ಶೇ.84.71 ರಷ್ಟು ಫಲಿತಾಂಶ ಬಂದಿದೆ. ಬಾಗಲಕೋಟೆ ಜಿಲ್ಲೆ ಎ ಶ್ರೇಣಿ ಪಡೆದಿದೆ. ಬಿ ಗ್ರೇಡ್ ನಿಂದ ಎ ಗ್ರೇಡ್ ಗೆ ಏರಿದೆ. ಜಿಲ್ಲೆಯಲ್ಲಿ7 ವಿದ್ಯಾರ್ಥಿಗಳು 625 ಕ್ಕೆ 624 ಅಂಕ ಪಡೆದಿದ್ದಾರೆ. ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ರಾಂಪುರ ಗ್ರಾಮದ ಸೌಮ್ಯಾ ಅಮಲಜರಿ ವಿದ್ಯಾರ್ಥಿನಿ 625 ಕ್ಕೆ 624 ಅಂಕ ಗಳಿಸಿದ್ದು 99.84 ಪ್ರತಿಶತ ಅಂಕ ಪಡೆದು ಸಾಧನೆ ಮಾಡಿದ್ದಾರೆ. ಬನಹಟ್ಟಿ ನಗರದ ಪೂರ್ಣಪ್ರಜ್ಞಾ ಆಂಗ್ಲ ಮಾದ್ಯಮ ಹೈಸ್ಕೂಲ್ ವಿದ್ಯಾರ್ಥಿನಿಯ ಸಾಧನೆಗೆ ಶಾಲೆ ಸಂತಸ ವ್ಯಕ್ತಪಡಿಸಿದ್ದು ಪೋಷಕರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ವಿಜಯನಗರದಲ್ಲಿ ಮೂರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ 625 ಅಂಕಕ್ಕೆ 625 ಅಂಕಗಳನ್ನ ಪಡೆದು ವಿಜಯನಗರದ ಮೂರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯ ಎಮ್.ಎಮ್.ಪಾಟೀಲ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ ಅಮೃತಾ, ವಿಜಯನಗರ ಜಿಲ್ಲೆಯ ಕೊಟ್ಟೂರು ಗುರುದೇವ ಇಂಗ್ಲಿಷ್ ಮೀಡಿಯಂ ಶಾಲೆಯ ಕವನಾ ಹಾಗೂ ವಿಧ್ಯಾಶ್ರೀ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಸಕ್ಕರೆ ನಗರಿಯಲ್ಲಿ ಮೂವರು ವಿದ್ಯಾರ್ಥಿಗಳು ಟಾಪರ್ಸ್ ಅಪೂರ್ವ ಹೆಚ್.ಎಸ್, ಗಗನ್ ಕೆ.ಎನ್ ಹಾಗೂ ಸೂರಜ್ ಗೌಡ 625ಕ್ಕೆ 625 ಅಂಕ ಪಡೆದು ಮಂಡ್ಯಕ್ಕೆ ಟಾಪರ್ಸ್ ಆಗಿದ್ದಾರೆ.
ರಾಯಚೂರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಬಸವಲೀಲಾ ಇನ್ನು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಒಳಬಳ್ಳಾರಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಬಸವಲೀಲಾ ರಾಯಚೂರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. 625 ಕ್ಕೆ 624 ಅಂಕ ಪಡೆದಿದ್ದು ವಿಜ್ಞಾನ ವಿಷಯದಲ್ಲಿ ಮಾತ್ರ 99 ಅಂಕ ಗಳಿಸುವ ಮೂಲಕ ಒಂದೇ ಒಂದು ಅಂಕ ಕೈತಪ್ಪಿದೆ. ಉಳಿದ ಎಲ್ಲಾ ವಿಷಯಗಳಲ್ಲಿ 100 ಕ್ಕೆ 100 ಅಂಕ ಪಡೆದಿದ್ದಾರೆ. ಇದನ್ನೂ ಓದಿ: Karnataka SSLC Result 2022: ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ: Karresults.nic.in ವೆಬ್ಸೈಟ್ನಲ್ಲಿ ಲಭ್ಯ
ಚಳ್ಳಕೆರೆ ಟಾಪರ್ ಯಾರು ಗೊತ್ತಾ? ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದಲ್ಲಿರುವ ವಾಸವಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಭುವನ್ 625ಕ್ಕೆ 625 ಅಂಕ ಗಳಿಸಿದ್ದಾರೆ. ವಿದ್ಯಾರ್ಥಿ ಭುವನ್ ಸಾಧನೆಗೆ ಪೋಷಕರು, ಶಾಲಾ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಚಿತ್ರದುರ್ಗದ ವಿದ್ಯಾವಿಕಾಸ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ರಕ್ಷಾ.ಬಿ.ಎಮ್ 625ಕ್ಕೆ 625 ಅಂಕ ಗಳಿಸಿದ್ದಾರೆ. ರಕ್ಷಾ ಸಾಧನೆಗೆ ಪೋಷಕರು, ಸಂಬಂಧಿಕರು ಸಂತಸ ವ್ಯಕ್ತಪಡಿಸಿದ್ದು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಎಸ್.ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಗೆ ಫುಲ್ ಮಾರ್ಕ್ಸ್ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಪಟ್ಟಣದಲ್ಲಿರುವ ಎಸ್.ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಯುಕ್ತ.ಬಿ 625ಕ್ಕೆ 625 ಅಂಕ ಗಳಿಸಿದ್ದಾರೆ. ಮಗಳ ಸಾಧನೆಗೆ ಪೋಷಕರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಮತ್ತಷ್ಟು ಎಸ್ಎಸ್ಎಲ್ಸಿ ಬಗೆಗಿನ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಬೆಂಗಳೂರಿನಲ್ಲಿ 625ಕ್ಕೆ 625 ಅಂಕ ಪಡೆದು ಟಾಪರ್ ಆದ ಮೋನಿಶ್ಗೌಡ ಇನ್ನು SSLC ಪರೀಕ್ಷೆಯಲ್ಲಿ ಮೋನಿಶ್ಗೌಡ 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ. ಬೆಂಗಳೂರಿನ ಮೂಡಲಪಾಳ್ಯದ ನಿವಾಸಿ ಮೋನಿಶ್ಗೌಡ, ಕಾರ್ಡಿಯಲ್ ಹೈಸ್ಕೂಲ್ ವಿದ್ಯಾರ್ಥಿ.
ಬೆಂಗಳೂರು ಮಲ್ಲೇಶ್ವರಂನ ವಿದ್ಯಾಮಂದಿರ ಶಾಲೆಯ ಅನೀಶ್ 625ಕ್ಕೆ 625 ಅಂಕ ಪಡೆದಿದ್ದಾರೆ. ಈ ವೇಳೆ ಮಾತನಾಡಿದ ಅವರು, ಟಾಪರ್ ಆಗಿದ್ದು ತುಂಬಾ ಸಂತೋಷವಾಗಿದೆ. ನಾನು 620 ಅಂಕ ಬರಬಹುದು ಅಂದುಕೊಂಡಿದ್ದೆ. ಆದ್ರೆ ಟಾಪ್ ಅಂಕ ಬಂದಿದೆ ಖುಷಿ ಆಯ್ತು. ಟೀಚರ್ ತುಂಬಾ ಸಹಾಯ ಮಾಡಿದ್ದಾರೆ. ನೈಟ್ ಕಾಲ್ ಮಾಡಿ ಡೌಟ್ ಕೇಳಿದ್ರು ಟೀಚರ್ ಹೇಳಿ ಕೊಂಡ್ತಾ ಇದ್ರು. ನನ್ನ ಶ್ರಮ 40 % ನಮ್ಮ ಶಾಲೆಯ ಶಿಕ್ಷಕರ ಶ್ರಮ 60 % ಇದೆ. ಹೆಚ್ಚು ಅಂಕಗೊಳಿಸುವುದು ಚಾಲೇಂಜ್ ಅನ್ನಿಸಿಲ್ಲ. ವಿಷಯಗಳನ್ನ ಅರ್ಥಮಾಡಿಕೊಂಡು ಇಷ್ಟಪಟ್ಟು ಓದಬೇಕು. ವಿಷಯಗಳನ್ನ ಇಷ್ಟ ಪಟ್ಟು ಓದಿದ್ರೆ ಹೆಚ್ಚು ಅಂಕ ಪಡೆಯಬಹುದು. ನಾನು ನೀಟ್ ಬರೆದು ಡಾಕ್ಟರ್ ಆಗುವ ಕನಸಿದೆ. ಶಿಕ್ಷಕರು ಹಾಗೂ ವಿಷಯಗಳನ್ನ ಗೌರವದಿಂದ ಪ್ರೀತಿಸಿದ್ರೆ ಹಚ್ಚು ಅಂಕ ಪಡೆಯಬಹದು ಎಂದು sslc ಟಾಪರ್ ಅನೀಶ್ ಟಿವಿ9 ಜೊತೆ ಸಂತೋಷ ಹಂಚಿಕೊಂಡಿದ್ದಾರೆ.
ಶೈಕ್ಷಣಿಕ ಜಿಲ್ಲೆ ಶಿರಸಿಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಪಡೆದ ಅಂಕಗಳ ವಿವರ 625 ಕ್ಕೆ 625 ಪಡೆದ ವಿದ್ಯಾರ್ಥಿಗಳ ಸಂಖ್ಯೆ -4 625 ಕ್ಕೆ 624 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ -11 625 -ಕ್ಕೆ 623 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ -12 625 ಕ್ಕೆ 622ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ -18 625 ಕ್ಕೆ 621 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ -17 625 ಕ್ಕೆ 620 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ -17 619 ರಿಂದ 616 ರವರೆಗೆ 83 ವಿದ್ಯಾರ್ಥಿಗಳು ಅಂಕ ಗಳಿಸಿದ್ದಾರೆ. ಹಾಗೂ ಒಟ್ಟು ಟಾಪ್ 10 ಪಡೆದ ಮಕ್ಕಳ ಸಂಖ್ಯೆ -162 ಎಂದು ಶಿರಸಿ ಡಿಡಿಪಿಐ ದಿವಾಕರ್ ಮಾಹಿತಿ ನೀಡಿದ್ದಾರೆ.
ಶಿರಸಿಯ ಮುಸ್ಲಿಂ ವಿದ್ಯಾರ್ಥಿನಿ ಶರ್ಮೀನ್ ಶೇಖ್ 625 ಅಂಕ ಪಡೆದು ಸಾಧನೆ ಶಿರಸಿ ಸ್ಟಾರ್ ಲೈನ್ ಕಾಂಪ್ಲೆಕ್ಸ್ ಹುಬ್ಬಳ್ಳಿ ರೋಡ್‌ನ ನಿವಾಸಿಯಾಗಿರುವ ಶರ್ಮೀನ್ ಶೇಖ್, ಮುಖ್ತಾರ್ ಎಂ. ಶೇಖ್ ಹಾಗೂ ಶಂಶಾದ್ ಎಂ. ಶೇಖ್ ದಂಪತಿಯ ಪುತ್ರಿ. ಡಾನ್ ಬಾಸ್ಕೋ ಹೈಸ್ಕೂಲ್ ವಿದ್ಯಾರ್ಥಿನಿಯಾಗಿರುವ ಶರ್ಮೀನ್ 625 ಕ್ಕೆ 625 ಅಂಕ ಪಡೆದಿದ್ದಾರೆ. ಮಗಳ ಸಾಧನೆಗೆ ಪೋಷಕರು ಹಾಗೂ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.
Published On - 3:39 pm, Thu, 19 May 22