ಆರ್​ಟಿಪಿಎಸ್ ಘಟಕದಲ್ಲಿನ 7 ವಿದ್ಯುತ್ ಉತ್ಪಾದನೆ ಘಟಕ ಸ್ಥಗಿತ ; ಬೇಡಿಕೆ ಹೆಚ್ಚಾದರೂ ಪೂರೈಕೆಗೆ ಹಿಂದೇಟು

ಈಗಾಗಲೇ ವಿದ್ಯುತ್ ಬೇಡಿಕೆ ಬಂದಿದ್ದರಿಂದ ಒಂದೊಂದೆ ಘಟಕದಲ್ಲಿ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಇನ್ನೂ 4 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಸ್ಟಾಕ್ ಇದ್ದು, ಯಾವುದೇ ತೊಂದರೆ ಇಲ್ಲ ಎಂದು

ಆರ್​ಟಿಪಿಎಸ್ ಘಟಕದಲ್ಲಿನ 7 ವಿದ್ಯುತ್ ಉತ್ಪಾದನೆ ಘಟಕ ಸ್ಥಗಿತ ; ಬೇಡಿಕೆ ಹೆಚ್ಚಾದರೂ ಪೂರೈಕೆಗೆ ಹಿಂದೇಟು
RTPS ಘಟಕ
Edited By:

Updated on: Aug 06, 2021 | 10:16 AM

ರಾಯಚೂರು:  ಜಿಲ್ಲೆಯ ಶಕ್ತಿ ನಗರದಲ್ಲಿರುವ ಆರ್​ಟಿಪಿಎಸ್​ ಶಾಖೋತ್ಪನ್ನ ಕೇಂದ್ರದಲ್ಲಿರುವ 8 ವಿದ್ಯುತ್ ಘಟಕಗಳಲ್ಲಿ ಕೇವಲ ಒಂದು ಘಟಕದಲ್ಲಿ 210 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. 250 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ 8 ನೇ ಘಟಕ ಹಾಗೂ ತಲಾ 210 ಮೆಗ್ಯಾವ್ಯಾಟ್ ವಿದ್ಯುತ್ ಉತ್ಪಾದನ ಸಾಮರ್ಥ್ಯವಿರುವ 6ನೇ ಘಟಕಗಳಲ್ಲಿ ಇದುವರೆಗೂ ವಿದ್ಯುತ್ ಉತ್ಪಾದನೆ ಆರಂಭಿಸಲಾಗಿಲ್ಲ. ಹೀಗಾಗಿ ಒಟ್ಟು ಆರ್​ಟಿಪಿಎಸ್ (RTPS) ಘಟಕದಲ್ಲಿನ 7 ವಿದ್ಯುತ್ ಉತ್ಪಾದನೆ ಘಟಕಗಳು ಸ್ಥಗಿತವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ವಿದ್ಯುತ್ ಉತ್ಪಾದನೆ ಕಡಿಮೆಯಾಗಿದ್ದು, ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದೆ. ಆದರೂ ಕೂಡ ಕೆಪಿಸಿ ಅಧಿಕಾರಿಗಳು ವಿದ್ಯುತ್ ಉತ್ಪಾದನೆಯ ತ್ವರಿತ ಕ್ರಮ ಕೈಗೊಳ್ಳದೆ ಇರುವುದು ವಿದ್ಯುತ್ ಅಭಾವ ಸೃಷ್ಟಿಯಾಗುವ ಆತಂಕ ಮೂಡಿಸಿದೆ‌ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಬಗ್ಗೆ ಕಾರ್ಯ ನಿರ್ವಾಹಕ ಅಧಿಕಾರಿ ವೆಂಕಟಾಚಲಪತಿ ಅವರನ್ನು ಕೇಳಿದರೆ ಈಗಾಗಲೇ ವಿದ್ಯುತ್ ಬೇಡಿಕೆ ಬಂದಿದ್ದರಿಂದ ಒಂದೊಂದೆ ಘಟಕದಲ್ಲಿ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಇನ್ನೂ 4 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಸ್ಟಾಕ್ ಇದ್ದು, ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಜಲ ವಿದ್ಯುತ್ ಘಟಕಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ. ಆದರೆ ಈ ನಡುವೆ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಪರಿಸ್ಥಿತಿಯನ್ನು ಸುಧಾರಿಸಲು ವಿದ್ಯುತ್ ಉತ್ಪಾದನೆ ನಿಲ್ಲಿಸಿದ್ದ ರಾಜ್ಯದ ಕಲ್ಲಿದ್ದಲು ಆಧಾರಿತ ವಿದ್ಯುತ್ ಘಟಕಗಳಲ್ಲಿ ಮತ್ತೆ ವಿದ್ಯುತ್ ಉತ್ಪಾದನೆಗೆ ಕರ್ನಾಟಕ ವಿದ್ಯುತ್ ನಿಗಮ ಸಿದ್ಧತೆ ನಡೆಸಿದೆ‌ ಎಂದು ಟಿವಿ9 ಡಿಜಿಟಲ್​ಗೆ ಆರ್​ಟಿಪಿಎಸ್​ (RTPS) ಕಾರ್ಯ ನಿರ್ವಾಹಕ ಅಧಿಕಾರಿ ವೆಂಕಟಾಚಲಪತಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:
ಬೆಂಗಳೂರಿಗರೇ.. ಇಂದಿನಿಂದ ಜುಲೈ 31ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್​ ಕಡಿತ, ನಿಮ್ಮ ಏರಿಯಾದಲ್ಲೂ ಪವರ್​ ಕಟ್​ ಇದೆಯೇ?

ವಿದ್ಯುತ್ ವ್ಯವಸ್ಥೆ ಸುಧಾರಿಸುವ ಮಹತ್ವದ ಮಸೂದೆ: ವಿದ್ಯುತ್ ಪೂರೈಕೆದಾರರ ಆಯ್ಕೆ ಸ್ವಾತಂತ್ರ್ಯಕ್ಕೆ ಮುಂಗಾರು ಅಧಿವೇಶನದಲ್ಲಿ ಒಪ್ಪಿಗೆ ಸಾಧ್ಯತೆ