
ರಾಯುಚೂರು, (ನವೆಂಬರ್ 30): ಮಾಂಗಲ್ಯ ಧಾರಣೆಗೆ (wedding) ಕೆಲವೇ ಗಂಟೆಗಳಿರುವಾಗ ವರನ ತಂದೆ ಹೃದಯಾಘಾತದಿಂದ (heart attack ) ನಿಧನರಾಗಿರುವ ಘಟನೆ ರಾಯಚೂರಿನ (Raichur) ಸಿಂಧನೂರಿನಲ್ಲಿ ನಡೆದಿದೆ. ಸಿಂಧನೂರಿನ (Sindhanur) ಗಂಗಾನಗರದ 55 ವರ್ಷದ ಶರಣಯ್ಯಸ್ವಾಮಿ, ಲವಲವಿಕೆಯಿಂದ ಓಡಾಡಿ ಎಲ್ಲಾ ಓಡಾಡಿ ಮದ್ವೆ ಕಾರ್ಯಗಳನ್ನ ಮಾಡಿ ಮುಗಿಸಿದ್ದರು. ಇನ್ನೇನು ವರ (ಪುತ್ರ) ತಾಳಿ ಕಟ್ಟುವ ಎರಡು ಗಂಟೆಗಳ ಹಿಂದೆಯೇ ಶರಣಯ್ಯಸ್ವಾಮಿ ಮೃತಪಟ್ಟಿದ್ದಾರೆ. ಇದರೊಂದಿಗೆ ಮಗನ ಮದುವೆಯನ್ನು ಕಣ್ತುಂಬಿಕೊಳ್ಳುವ ಆಸೆ ಈಡೇರದೆಯೇ ಶರಣಯ್ಯಸ್ವಾಮಿ ಇಹಲೋಕ ತ್ಯಜಿಸಿದ್ದು, ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ಮೃತ ಶರಣಯ್ಯಸ್ವಾಮಿ ಪುತ್ರನ ಮದುವೆಯನ್ನು ಸಿಂಧನೂರು ನಗರದ ಜೈನ್ ಕಲ್ಯಾಣ ಮಂಟಪದಲ್ಲಿ ಮದುವೆ ನಿಯೋಜಿಸಿದ್ದರು. ಅದರಂತೆ ಶರಣಯ್ಯಸ್ವಾಮಿ ಲವಲವಿಕೆಯಿಂದ ಓಡಾಡಿ ಮದುವೆ ಕಾರ್ಯಕಗಳನ್ನು ಮಾಡಿ ಮುಗಿಸಿದ್ದ. ಇಂದು (ನವೆಂಬರ್ 30) ಬೆಳಗ್ಗೆ 5 ಗಂಟೆಗೆ ಮಾಂಗಲ್ಯ ಧಾರಣೆ ಮುಹೂರ್ತ ಫಿಕ್ಸ್ ಆಗಿತ್ತು. ಆದ್ರೆ, ದುರ್ವೈವ ಮಾಂಗಲ್ಯ ಧಾರಣೆಗೆ ಎರಡು ಗಂಟೆ ಬಾಕಿ ಇರುವಾಗಲೇ ಶರಣಯ್ಯಸ್ವಾಮಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಒಂದೆಡೆ ಮದುವೆಯ ಸಂಭ್ರಮದ ಸಡಗರ, ಮತ್ತೊಂದೆಡೆ ಮನೆಯ ಯಜಮಾನನ ಅಕಾಲಿಕ ಸಾವು ಈ ಪರಿಸ್ಥಿತಿಯನ್ನು ಎದುರಿಸಲಾಗದೆ ಕುಟುಂಬ ಸದಸ್ಯರು ಆಘಾತಕ್ಕೆ ಒಳಗಾಗಿದೆ. ಬಳಿಕ ಜೈನ್ ಕಲ್ಯಾಣ ಮಂಟಪದಲ್ಲಿ ನೆರವೇರಬೇಕಿದ್ದ ಮದುವೆಯನ್ನೇ ರದ್ದುಗೊಳಿಸಿದ್ದು,. ಮದುವೆ ಸಂಭ್ರಮದಲ್ಲಿ ಮದುವೆ ಮನೆಯಲ್ಲಿ ಸೂತಕ ಛಾಯೆ ಆವರಿಸಿದೆ.
ಇನ್ನು ಇಂದು (ನವೆಂಬರ್ 3) ಸಂಜೆ ಸಿಂಧನೂರಿನ ವೀರಶೈವ ರುದ್ರಭೂಮಿಯಲ್ಲಿ ಶರಣಯ್ಯಸ್ವಾಮಿ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು. ಮದುವೆಗೆಂದು ಬಂದಿದ್ದ ಬಂಧು ಬಳಗ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವಂತಾಯ್ತು.
Published On - 8:10 pm, Sun, 30 November 25