ರಾಯಚೂರು: ಊಬರ್ (Uber) , ಓಲಾ (Ola) ಆಟೋಗಳಿಂದ ಹೆಚ್ಚು ಹಣ ವಸೂಲಿ ವಿಚಾರವಾಗಿ ಊಬರ್, ಓಲಾ ಕಂಪನಿಯವರನ್ನು ಕರೆದು ಸಭೆ ಮಾಡುತ್ತೇವೆ. ತಪ್ಪು ಇದ್ದರೆ ಸರಿ ಮಾಡಿಕೊಳ್ಳಲು ಸೂಚನೆ ನೀಡುತ್ತೇವೆ. ಊಬರ್, ಓಲಾ ಆಟೋಗಳಿಗೆ ಯಾವುದೇ ಅನುಮತಿ ನೀಡಿಲ್ಲ. ಆದರೆ ಕಾರ್-ಟ್ಯಾಕ್ಸಿಗಳಿಗೆ ಅನುಮತಿ ನೀಡಲಾಗಿದೆ ಎಂದು ಮಂತ್ರಾಲಯದಲ್ಲಿ ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu) ಹೇಳಿದ್ದಾರೆ. ಊಬರ್, ಓಲಾ ಆಟೋಗಳಿಂದ ಹೆಚ್ಚು ಹಣ ವಸೂಲಿ ಬಗ್ಗೆ ದೂರು ಬಂದಿವೆ. ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗಬಾರದು. ಸಾಮಾನ್ಯ ಆಟೋಗಳ ಮಾದರಿಯಲ್ಲೇ ಹಣ ಪಡೆಯಬೇಕು. ಇದು ಮತ್ತೆ ಪುನರಾವರ್ತನೆಯಾದರೆ ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಓಲಾ, ಊಬರ್ ಆಟೋ ಚಾಲಕರು ಒಂದು ಕಿಮೀಗೆ 300, 400, 500 ರೂ, ಎರಡು ಕಿಮೀ ಗೆ 700 ರೂ. ಬಾಡಿಗೆ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಓಲಾ, ಊಬರ್ ಅಸೊಶಿಯೇಶನ್ ನಲ್ಲಿದ್ದೋರು, ಅದರಲ್ಲಿ ಎಂಪ್ಲಾಯ್ಮೆಂಟ್ ಆದೋರು ಬೇರೆ. ಸಾಮಾನ್ಯ ಆಟೋಗಳಲ್ಲಿ ಸಮಸ್ಯೆಯಿಲ್ಲ, ಆದರೆ
ಓಲಾ, ಊಬರ್ ಆಟೋಗಳದ್ದು ಮಾತ್ರ ಸಮಸ್ಯೆ ಇದೆ ಎಂದರು.
ಕಾರ್ ಪರ್ಷಿಷನ್ ತಗೊಂಡು, ಆಟೋ ಹೇಗೆ ಓಡಿಸುತ್ತಿದ್ದಾರೆ. ಓಲಾ, ಊಬರ್ ಸಂಸ್ಥೆಗಳು ಕಾರ್ ಮಾತ್ರ ಓಡಾಡಿಸಬೇಕು. ಆಟೋ ಓಡಿಸಿ ಹೆಚ್ಚಿನ ದರ ಒಪ್ಪಲ್ಲ. ಮಾಮೂಲು ಆಟೋಗಳಂತೆ ಚಾರ್ಜ್ ಮಾಡಬೇಕು. ಏರ್ಪೋರ್ಟ್ ನಿಂದ ಸಿಟಿಗೆ ಹೋಗೊಕೆ 700 ರೂ ಬಾಡಿಗೆ ತೆಗೆದುಕೊಳ್ಳುತ್ತಾರೆ. ಓಲಾ, ಊಬರ್ ಆಟೋ ಬಂದ್ ಆದರೆ, ಸಾಮಾನ್ಯ ಆಟೋಗಳು ಬಂದ್ ಆಗುತ್ತವೆ ಅಂತ ಇತರೇ ಸಾಮಾನ್ಯ ಆಟೋದವರು ಅಂದುಕೊಂಡಿದ್ದಾರೆ. ಹಾಗೇನಿಲ್ಲ, ಕಡಿಮೆ ರೇಟ್ ನಲ್ಲಿ ಓಡಿಸಿ ಎಂದು ಸೂಚಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:54 pm, Tue, 11 October 22