ರಾಯಚೂರು: ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಪಾದಯಾತ್ರೆ ಮೂಲಕ ಕಾಲೇಜಿಗೆ ಹೊರಟಿದ್ದಾರೆ. ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಹರವಿ ಗ್ರಾಮದ ವಿದ್ಯಾರ್ಥಿಗಳಿಂದ ಈ ಪ್ರತಿಭಟನಾರ್ಥ ಪಾದಯಾತ್ರೆ ನಡೆಸಿದ್ದಾರೆ. ಕಾಲೇಜ್ ಸಮಯಕ್ಕೆ ಸಮರ್ಪಕ ಬಸ್ ಬಾರದ ಹಿನ್ನೆಲೆ ವಿದ್ಯಾರ್ಥಿಗಳು ಮಾನ್ವಿ ಪಟ್ಟಣಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ಕಳೆದ ಮೂರು ತಿಂಗಳಿಂದ ವಿದ್ಯಾರ್ಥಿಗಳಿಗೆ ಇದೇ ಬಸ್ ಸಮಸ್ಯೆಯಿದೆ.
ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರೂ ಅಧಿಕಾರಿಗಳು ಕ್ಯಾರೇ ಅಂದಿಲ್ಲ. ಇಂದು ಬಸ್ ಬಾರದ ಹಿನ್ನೆಲೆಯಲ್ಲಿ ಹರವಿ ಇಂದ ಮಾನ್ವಿ ಪಟ್ಟಣಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದಾರೆ. ವಿದ್ಯಾರ್ಥಿಗಳು ಮಾನ್ವಿ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಭಾಲ್ಕಿ ತಾಲೂಕಿನಲ್ಲಿಯೂ ಸಮಸ್ಯೆ ಇದೇ:
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಕಟಕಚಿಂಚೊಳ್ಳಿ, ಚಳಕಾಪುರ, ಚಳಕಾಪುರ ವಾಡಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಕೊವೀಡ್ ನಂತರ ಬಸ್ ಬಂದ್ ಆಗಿವೆ. ಹೀಗಾಗಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಡೆದುಕೊಂಡು ಶಾಲೆ, ಕಾಲೇಜಿಗೆ ಹೋಗಬೇಕಾದ ಸ್ಥಿತಿಯಿಲ್ಲಿ ಎದುರಾಗಿದೆ. ಇನ್ನೂ ಇಲ್ಲಿ ಟಂಟಂಗಳು ಕೂಡಾ ಸಮಯಕ್ಕೆ ಸರಿಯಾಗಿ ಬರೋದಿಲ್ಲ. ಹೀಗಾಗಿ ಶಾಲೆ ಕಾಲೇಜಿ ಹೋಗಲು ತಡವಾಗುತ್ತದೆಂದು ವಿದ್ಯಾರ್ಥಿಗಳು ನಡೆದುಕೊಂಡೇ ಹೋಗಿ ಶಿಕ್ಷಣ ಕಲಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೊವೀಡ್ ಮಹಾಮಾರಿಯಿಂದದ ಬಂದ್ ಆಗಿದ್ದ ಎಲ್ಲಾ ಮಾದರಿಯ ಶಾಲೆಗಳು ಈಗ ಆರಂಭವಾಗಿವೆ. ಕೂಡಲೇ ಬಸ್ ಬಿಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ವಿದ್ಯಾರ್ಥಿಗಳು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ, ಸಾರಿಗೆ ಸಚಿವರಿಗೆ ಮನವಿ ಮಾಡಿದ್ದಾರೆ.
ಜಮಖಂಡಿಯಲ್ಲಿಯೂ ವಿದ್ಯಾರ್ಥಿಗಳಿಂದ ಪ್ರತಿಭಟನೆ:
ಮಹಾಲಿಂಗಪುರದಿಂದ ವಿವಿಧ ಕೋರ್ಸ್ ಗಳಿಗೆ ರಬಕವಿ-ಬನಹಟ್ಟಿ, ಜಮಖಂಡಿಗೆ ತೆರಳುವ ವಿದ್ಯಾರ್ಥಿಗಳು ಸರಿಯಾಗಿ ಬಸ್ ವ್ಯಸವ್ಥೆ ಇಲ್ಲದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರೂ ಕೇವಲ ಒಂದು ಬಸ್ ಮಾತ್ರ ಓಡಿಸಲಾಗುತ್ತಿದೆ. ಆ ಬಸ್ ಸಹ ನಿಗದಿತ ಸಮಯಕ್ಕೆ ಬಾರದೇ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಹೆಚ್ಚುವರಿ ಬಸ್ ಬಿಡಲು ಆಗ್ರಹಿಸಿದ್ದಾರೆ. ಸಾರಿಗೆ ಘಟಕದ ಅಧಿಕಾರಿಗೆ ಅನೇಕ ಸಲ ಮನವಿ ಪತ್ರ ಸಲ್ಲಿಸಿದ್ರು ಪ್ರಯೋಜನ ಆಗಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
(bus inconvenience manvi college student walk up to college as protest)
Published On - 9:20 am, Wed, 17 November 21