ತಮ್ಮ ನಾಯಕರ ಪರ ವಕಾಲತ್ತು: ರಾಯಚೂರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​ ಕಾರ್ಯಕರ್ತರ ನಡುವೆ ಗಲಾಟೆ: 3 ಬೆರಳು ಕಟ್​

ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಬೆಂಬಲಿಗರು ಮಾತಿನ ಚಕಮಕಿಗೆ ಇಳಿದು ಕೊನೆಗೆ ಬಡದಾಡಿಕೊಂಡಿರುವ ಘಟನೆ ರಾಯಚೂರು ನಗರದ ಅಂದ್ರೂನ್ ಖಿಲ್ಲಾ‌ ಏರಿಯಾದಲ್ಲಿ ನಡೆದಿದೆ.

ತಮ್ಮ ನಾಯಕರ ಪರ ವಕಾಲತ್ತು: ರಾಯಚೂರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​ ಕಾರ್ಯಕರ್ತರ ನಡುವೆ ಗಲಾಟೆ: 3 ಬೆರಳು ಕಟ್​
ಗಲಾಟೆ ನಡೆದ ದೃಶ್ಯಾವಳಿ
Follow us
ವಿವೇಕ ಬಿರಾದಾರ
|

Updated on:Apr 10, 2023 | 11:34 AM

ರಾಯಚೂರು: ತಮ್ಮ ತಮ್ಮ ರಾಜಕೀಯ ನಾಯಕರ ಪರ ವಾದ ಮಂಡಿಸುತ್ತಾ ಕಾರ್ಯಕರ್ತರು ವಾಗ್ಯುದ್ದಕ್ಕೆ ಇಳಿದು, ಕೊನೆಗೆ ಮುಷ್ಟಿCrime, Raichuru, BJP, Congress, Activists, Clash, Kannada News, ಅಪರಾಧ, ರಾಯಚೂರು, ಬಿಜೆಪಿ, ಕಾಂಗ್ರೆಸ್​, ಗಲಾಟೆ, ಕನ್ನಡ ಸುದ್ದಿ ಯುದ್ಧಕ್ಕೆ ಸಾಕ್ಷಿಯಾಗುತ್ತಾರೆ. ಅದರಂತೆ ಬಿಜೆಪಿ (BJP) ಹಾಗೂ ಕಾಂಗ್ರೆಸ್ (Congress) ನಾಯಕರ ಬೆಂಬಲಿಗರು ಮಾತಿನ ಚಕಮಕಿಗೆ ಇಳಿದು ಕೊನೆಗೆ ಬಡದಾಡಿಕೊಂಡಿರುವ ಘಟನೆ ರಾಯಚೂರು (Raichuru) ನಗರದ ಅಂದ್ರೂನ್ ಖಿಲ್ಲಾ‌ ಏರಿಯಾದಲ್ಲಿ ನಡೆದಿದೆ. ಆರಿಫ್ ಹಾಗೂ ಮೊಹಮ್ಮದ್ ವಾಸಿಮ್ ಗಲಾಟೆ ಮಾಡಿದ ಕಾರ್ಯಕರ್ತರು. ಘಟನೆಯಲ್ಲಿ ಇಬ್ಬರಿಗೂ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ: ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ವಿರುದ್ಧ ದೂರು ನೀಡಿದ ಜೆಡಿಎಸ್

ಆರಿಫ್​ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಬೆಂಬಲಿಗರಾಗಿದ್ದು, ಮೊಹಮ್ಮದ್ ವಾಸಿಮ್ ಕಾಂಗ್ರೆಸ್ ಕೌನ್ಸಿಲರ್​ ತಿಮ್ಮಾ ರೆಡ್ಡಿ ಆಪ್ತರಾಗಿದ್ದಾರೆ. ನಿನ್ನೆ (ಏ.09) ತಡರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪಕ್ಷಗಳ ಕುರಿತು ವೈರಲ್ ಆದ ಸುದ್ದಿ ಬಗ್ಗೆ ಚರ್ಚೆಗೆ ಇಳಿದಿದ್ದಾರೆ. ಪರ ವಿರೋಧ ಹೇಳಿಕೆಗಳಿಂದ ಕೋಪಿತರಾಗಿ ಇಬ್ಬರು ಪರಸ್ಪರ ಕೈಕೈ ಮಿಲಾಯಿಸಿದ್ದಾರೆ.

ಗಲಾಟೆ ತೀರ್ವ ಸ್ವರೂಪ ಪಡೆದಿದ್ದು, ಪರಸ್ಪರ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಆರಿಫ್​ನ ಮೂರು ಬೆರಳುಗಳು ತುಂಡಾಗಿವೆ. ಇನ್ನು ಮೊಹಮ್ಮದ್ ವಾಸಿಮ್​ಗೂ ಗಾಯಗಳಾಗಿದ್ದು, ಇಬ್ಬರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:26 am, Mon, 10 April 23