ಸೇಂದಿ ತಯಾರಿಸುತ್ತಿದ್ದ ಅಡ್ಡೆ ಮೇಲೆ ದಾಳಿ: ಓರ್ವ ಮಹಿಳೆ ಸೇರಿ ನಾಲ್ವರ ಬಂಧನ

| Updated By: ವಿವೇಕ ಬಿರಾದಾರ

Updated on: Dec 10, 2023 | 10:56 AM

ರಾಯಚೂರು ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಸೇಂದಿ ತಯಾರಿಸಿ ಮಾರಾಟ ಮಾಡುತ್ತಿದ್ದ ರಾಯಚೂರು ನಗರ ಮತ್ತು ತಾಲೂಕಿನ ಶಕ್ತಿನಗರದಲ್ಲಿ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.

ಸೇಂದಿ ತಯಾರಿಸುತ್ತಿದ್ದ ಅಡ್ಡೆ ಮೇಲೆ ದಾಳಿ: ಓರ್ವ ಮಹಿಳೆ ಸೇರಿ ನಾಲ್ವರ ಬಂಧನ
ಅಬಕಾರಿ ಇಲಾಖೆ ಅಧಿಕಾರಿಗಳ ಪರಿಶೀಲನೆ
Follow us on

ರಾಯಚೂರು, ಡಿಸೆಂಬರ್ 10​​​: ಸೇಂದಿ (Palm Toddy) ತಯಾರಿಸಿ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು (Excise Department officials) ದಾಳಿ ಮಾಡಿದ್ದಾರೆ. ರಾಯಚೂರು (Raichur) ನಗರ ಹಾಗೂ ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ಕಾರ್ಯಾಚರಣೆ ನಡೆದಿದೆ. ದಾಳಿ ವೇಳೆ ಅಧಿಕಾರಿಗಳು 35 ಕೆಜಿ ಸಿಹೆಚ್​ ಪೌಡರ್, ಸೆಕ್ರಿನ್ ಹಾಗೂ ವೈಟ್ ಪೇಸ್ಟ್ ಜಪ್ತಿ ಮಾಡಿಕೊಂಡಿದ್ದಾರೆ.

ಅಬಕಾರಿ ಇಲಾಖೆ ಅಧಿಕಾರಿಗಳು ಕಳೆದೊಂದು ವಾರದಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಮೊದಲು ಗ್ರಾಹಕರ ಸೋಗಿನಲ್ಲಿ ಪೌಡರ್​​ ತರಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ನಂತರ ಸೇಂದಿ ತಯಾರಿಕೆ ಮತ್ತು ಮಾರಾಟದಲ್ಲಿ ಭಾಗಿಯಾಗಿರುವ ರಾಯಚೂರು ತಾಲೂಕಿನ ಯಕ್ಲಾಸಪುರ ಗ್ರಾಮದ ಪ್ರೇಮಾ ಎಂಬುವರ ಮನೆ ಮೇಲೆ‌ ದಾಳಿ ಮಾಡಿ ಆಕೆ ವಶಕ್ಕೆ ಪಡೆದರು. ಬಳಿಕ ಆಕೆ ನೀಡಿದ ಮಾಹಿತಿ ಮೆರೆಗೆ ರಾಯಚೂರು ನಗರದಲ್ಲಿ ವಾಸು ಎಂಬುವರನ್ನು ಬಂಧಿಸಿದ್ದಾರೆ.

ನಂತರ ತೆಲಂಗಾಣದಿಂದ ರಾಯಚೂರಿಗೆ ಸಿಹೆಚ್ ಪೌಡರ್ ಸಪ್ಲೈ ಮಾಡುತ್ತಿದ್ದ ಅಶೋಕ್ ಹಾಗೂ ಲಿಂಗಪ್ಪ ಎಂಬುವರನ್ನು ಅರೆಸ್ಟ್​ ಮಾಡಿದ್ದಾರೆ. ಕಾರ್ಯಾಚರಣೆ ಮುಂದುವರೆದಿದ್ದು, ಈ ಸಂಬಂಧ ಅಬಕಾರಿ ಪೊಲೀಸರು ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ; ಆಹಾರ ಇಲಾಖೆಯ ಅಧಿಕಾರಿಗಳಿಂದ ದಾಳಿ

ಒಂದು ಕೆಜಿ ಸಿಹೆಚ್ ಪೌಡರ್​ನಿಂದ 4-5 ಬ್ಯಾರಲ್ ಸೇಂದಿ ತಯಾರಿಸುತ್ತಾರೆ. ಈ ಸೇಂದಿ ಸೇವನೆಯಿಂದ 20-30 ವರ್ಷದ ಯುವಕರಿಗೆ 50-60 ವರ್ಷದವರ ರೀತಿ ಬಲಹೀನತೆ, ನಿಶಕ್ತಿ ಉಲ್ಬಣಗೊಳ್ಳುತ್ತದೆ.

ಜೂಜಾಟದಲ್ಲಿ ತೊಡಗಿದ್ದ 9 ಜನರ ಬಂಧನ: 1 ಲಕ್ಷ ರೂ. ಜಪ್ತಿ

ತುಮಕೂರು: ವಡ್ಡರಹಳ್ಳಿ ಗ್ರಾಮದಲ್ಲಿ ಜೂಜಾಟದಲ್ಲಿ ತೊಡಗಿದ್ದ 9 ಜನರನ್ನು ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. 01,03,284 ರೂ. ಜಪ್ತಿ ಮಾಡಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿದ್ದ ಗೋಡೌನ್​ ಮೇಲೆ ಸಿಸಿಬಿ ದಾಳಿ

ಹುಬ್ಬಳ್ಳಿ: ಅಮರಗೋಳದ ಎಪಿಎಂಸಿ ಯಾರ್ಡ್​​ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 4.42 ಲಕ್ಷ ಮೌಲ್ಯದ ಸುಮಾರು 130 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ. ಪಡಿತರ ಅಕ್ಕಿಯನ್ನು ಹಣಕ್ಕೆ ಪಡೆದು ಸಂಗ್ರಹಿಸಿದ್ದ ಸಂದೀಪ್ ಜರತಾರಘರ ಮತ್ತು ಸಂದೀಪ್ ವಿರುದ್ಧ ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ