ಕಂತಿನ ಹಣ ಕಟ್ಟಲು ಲೇಟ್​ ಆಗಿದಕ್ಕೆ ನಿಯಮ ಗಾಳಿಗೆ ತೂರಿ ಈ ಫೈನಾನ್ಸ್ ಕಂಪನಿ ಮಾಡಿದ್ದೇನು? ರೈತನ ಬಾಳು ಈಗ ಬೀದಿಗೆ

| Updated By: ಆಯೇಷಾ ಬಾನು

Updated on: Sep 24, 2022 | 7:32 AM

ಅಯ್ಯಾಳಪ್ಪ ಮೊದಲೆರಡು ಕಂತುಗಳನ್ನ ಮಿಸ್​ ಮಾಡ್ದೇ ಕಟ್ಟಿದ್ದರು. ನಂತರ ಮೂರನೇ ಕಂತಿನ ಹಣ ಕಟ್ಟಿಲ್ಲ. ಇದೇ ಕಾರಣಕ್ಕೆ, ನೋಟಿಸ್ ನೀಡದೇ ಬಂದ ಫೈನಾನ್ಸ್​ ಕಂಪನಿಯವರು ಟ್ರಾಕ್ಟರ್​ನ್ನು ಸೀಜ್ ಮಾಡಿ ಮಾರಾಟ ಮಾಡಿದ್ದಾರೆ.

ಕಂತಿನ ಹಣ ಕಟ್ಟಲು ಲೇಟ್​ ಆಗಿದಕ್ಕೆ ನಿಯಮ ಗಾಳಿಗೆ ತೂರಿ ಈ ಫೈನಾನ್ಸ್ ಕಂಪನಿ ಮಾಡಿದ್ದೇನು? ರೈತನ ಬಾಳು ಈಗ ಬೀದಿಗೆ
ಫೈನಾನ್ಸ್ ಕಂಪನಿ ನಡೆಗೆ ರೈತರ ಆಕ್ರೋಶ
Follow us on

ರಾಯಚೂರು: ಕೃಷಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ರೈತನಿಗೆ(Farmer) ಫೈನಾನ್ಸ್ ಕಂಪನಿಯಿಂದ(Finance Company) ಸಂಕಷ್ಟ ಎದುರಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಫೈನಾನ್ಸ್ ಮೂಲಕ ಟ್ರಾಕ್ಟರ್ ಖರೀದಿಸಿದ್ದ ರೈತನ ಟ್ರಾಕ್ಟರ್ ಸೀಜ್ ಮಾಡಿ ಅದನ್ನು ಮಾರಾಟ ಮಾಡಲಾಗಿದ್ದ ರೈತನ ಬದುಕು ಬೀದಿಗೆ ಬಿದ್ದಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಕಳ್ಳಿ ಲಿಂಗಸುಗೂರು ಗ್ರಾಮದ ರೈತ ಅಯ್ಯಾಳಪ್ಪ, ಎಲ್​ ಅಂಡ್ ಟಿ ಅನ್ನೋ ಕಂಪೆನಿ ಮೂಲಕ ಟ್ರಾಕ್ಟರ್ ಖರೀದಿಸಿದ್ದರು. ಅಯ್ಯಾಳಪ್ಪ ಮೊದಲೆರಡು ಕಂತುಗಳನ್ನ ಮಿಸ್​ ಮಾಡ್ದೇ ಕಟ್ಟಿದ್ದರು. ನಂತರ ಮೂರನೇ ಕಂತಿನ ಹಣ ಕಟ್ಟಿಲ್ಲ. ಇದೇ ಕಾರಣಕ್ಕೆ, ನೋಟಿಸ್ ನೀಡದೇ ಬಂದ ಫೈನಾನ್ಸ್​ ಕಂಪನಿಯವರು ಟ್ರಾಕ್ಟರ್​ನ್ನು ಸೀಜ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸೀಜ್ ಮಾಡಿರೋ ಟ್ರಾಕ್ಟರ್​ನ್ನು ಮೂರೇ ದಿನದಲ್ಲಿ ಬೇರೊಬ್ಬರಿಗೆ ಮಾರಾಟ ಕೂಡ ಮಾಡಿದ್ದಾರಂತೆ.

ಸಿಂಧನೂರಿನ ಎಲ್ ಅಂಡ್ ಟಿ ಫೈನಾನ್ಸ್ ಕಂಪನಿ ರೂಲ್ಸ್ ಗಾಳಿಗೆ ತೂರಿರೋ ಆರೋಪ ಕೇಳಿಬಂದಿದೆ. ರೈತ ಅಯ್ಯಾಳಪ್ಪ 2021 ರ ಜೂನ್ ತಿಂಗಳಿನಲ್ಲಿ ಟ್ರ್ಯಾಕ್ಟರ್ ಖರೀದಿಸಿ ಎರಡು ಕಂತುಗಳನ್ನ ನಿರ್ಧಿಷ್ಟ ಸಮಯದಲ್ಲೇ ಪಾವತಿಸಿದ್ದು ಮೂರನೇ ಕಂತು ವಿಳಂಬವಾಗಿದೆ. ಹೀಗಾದಾಗ ಮೊದಲು ನೋಟಿಸ್ ನೀಡಿ, ಕಾಲಾವಕಾಶದ ಜೊತೆ ದಂಡ ಬೇಕಿದ್ರೆ ವಿಧಿಸಬಹುದಾಗಿತ್ತು. ಅದನ್ನ ಬಿಟ್ಟು ರೈತನಿಗೆ ನೋಟಿಸ್ ನೀಡದೇ ಏಕಾಏಕಿ ಟ್ರಾಕ್ಟರ್ ಸೀಜ್ ಮಾಡಿ, ಬೇರೊಬ್ಬರಿಗೆ ಮಾರಾಟ ಮಾಡಿದ್ದಾರೆ. ಈಗ ಕಂತು ವಿಳಂಬವಾದ ಹಿನ್ನೆಲೆ ಕಂತಿನ ಜೊತೆ ದಂಡ ಕೂಡ ಪಾವತಿಸ್ತಿನಿ ಅಂತ ರೈತ 85 ಸಾವಿರ ರೂಪಾಯಿ ಕೊಡೋಕೆ ಹೋದ್ರು, ಎಲ್​ಆಂಡ್​ಟಿ ಕಂಪನಿ ಕ್ಯಾರೆ ಎನ್ನುತ್ತಿಲ್ಲ. ಟ್ರಾಕ್ಟರ್ ಬೇರೊಬ್ಬರಿಗೆ ಮಾರಾಟ ಮಾಡಲಾಗಿದೆ ಅಂತ ಉಡಾಫೆ ಉತ್ತರ ನೀಡ್ತಿದ್ದಾರಂತೆ. ಇದನ್ನೂ ಓದಿ: Crime News: ರಸ್ತೆ ಕಾಮಗಾರಿ ವೇಳೆ ಶ್ರೀಗಂಧ ಮರಗಳ ಹನನ; ಗುತ್ತಿಗೆದಾರನ ವಿರುದ್ಧ ದೂರು ದಾಖಲು

ಸಾಲ ಸೋಲ ಮಾಡಿ ಟ್ರ್ಯಾಕ್ಟರ್ ಖರೀದಿಸಿದ್ದ ರೈತ ಅಯ್ಯಾಳಪ್ಪನ ಬಾಳು ಬೀದಿಗೆ ಬಿದ್ದಂತಾಗಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಬಗ್ಗೆ ಕ್ರಮಕೈಗೊಳ್ಳಬೇಕಿದೆ.

ವರದಿ: ಭೀಮೇಶ್ ಪೂಜಾರ್, ಟಿವಿ9 ರಾಯಚೂರು

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:31 am, Sat, 24 September 22