ಲವ್ ಜಿಹಾದ್ ಬದಲಿಗೆ ಲವ್ ಕೇಸರಿ ಹೇಳಿಕೆ; ಶ್ರೀರಾಮಸೇನೆಯ ಇಬ್ಬರ ವಿರುದ್ಧ ಎಫ್ಐಆರ್, ಹೇಳಿಕೆ ಬಳಿಕ ಕೇಸರಿ ಪಡೆ ಸೈಲೆಂಟ್

ಏಪ್ರಿಲ್ 10ರಂದು ರಾಯಚೂರು ನಗರದಲ್ಲಿ ನಡೆದಿದ್ದ ಶ್ರೀರಾಮಸೇನೆ ಆಯೋಜಿಸಿದ್ದ ಶ್ರೀ ರಾಮನವಮಿ ಕಾರ್ಯಕ್ರಮದಲ್ಲಿ ಅನ್ಯ ಧರ್ಮದ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಲಾಗಿತ್ತು. ಈ ಹಿನ್ನೆಲೆ ಶ್ರೀರಾಮಸೇನೆ ಸಂಚಾಲಕ ರಾಜಾಚಂದ್ರ ರಾಮನಗೌಡ, ಶ್ರೀರಾಮಸೇನೆ ರಾಯಚೂರು ಜಿಲ್ಲಾಧ್ಯಕ್ಷ ಮಂಜುನಾಥ್ ವಿರುದ್ಧ FIR ದಾಖಲಾಗಿದೆ.

ಲವ್ ಜಿಹಾದ್ ಬದಲಿಗೆ ಲವ್ ಕೇಸರಿ ಹೇಳಿಕೆ; ಶ್ರೀರಾಮಸೇನೆಯ ಇಬ್ಬರ ವಿರುದ್ಧ ಎಫ್ಐಆರ್, ಹೇಳಿಕೆ ಬಳಿಕ ಕೇಸರಿ ಪಡೆ ಸೈಲೆಂಟ್
FIR
Follow us
TV9 Web
| Updated By: ಆಯೇಷಾ ಬಾನು

Updated on: Apr 12, 2022 | 7:15 AM

ರಾಯಚೂರು: ಶ್ರೀ ರಾಮನವಮಿ(Rama Navami) ವೇಳೆ ಲವ್ ಜಿಹಾದ್(Love Jihad) ಬದಲಿಗೆ ಲವ್ ಕೇಸರಿ(Love Kesari) ಎಂಬ ಪ್ರಚೋದನಕಾರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಶ್ರೀರಾಮಸೇನೆ ಸಂಚಾಲಕ ರಾಜಾಚಂದ್ರ ರಾಮನಗೌಡ, ಶ್ರೀರಾಮಸೇನೆ ರಾಯಚೂರು ಜಿಲ್ಲಾಧ್ಯಕ್ಷ ಮಂಜುನಾಥ್ ವಿರುದ್ಧ FIR ದಾಖಲಾಗಿದೆ. ಐಪಿಸಿ ಸೆಕ್ಷನ್‌ 153, 153(A), 295(A)ರಡಿ ಎಫ್‌ಐಆರ್‌ ದಾಖಲಾಗಿದೆ.

153-ಗಲಭೆ ಸೃಷ್ಟಿಗೆ ಪ್ರಚೋದನೆ, 153(A)-ಕೋಮುಗಳ ನಡುವೆ ವೈರತ್ವ ಮೂಡಿಸುವಂತಹ ಪ್ರಚಾರ, 295-ಉದ್ದೇಶ ಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು ಎಂದು ಎಫ್‌ಐಆರ್‌ ದಾಖಲಾಗಿದೆ. ಇದೇ ಏಪ್ರಿಲ್ 10ರಂದು ರಾಯಚೂರು ನಗರದಲ್ಲಿ ನಡೆದಿದ್ದ ಶ್ರೀರಾಮಸೇನೆ ಆಯೋಜಿಸಿದ್ದ ಶ್ರೀ ರಾಮನವಮಿ ಕಾರ್ಯಕ್ರಮದಲ್ಲಿ ಅನ್ಯ ಧರ್ಮದ ವಿರುದ್ಧ ಪ್ರಚೋದನಕಾರಿ ಹೇಳಿಕೆ ಆರೋಪ. ರಾಜಾಚಂದ್ರ ರಾಮನಗೌಡರಿಂದ ಗಲಭೆ ಉಂಟಾಗುವ ರೀತಿ ಭಾಷಣ ನಡೆದಿದೆ. ಮುಸ್ಲಿಂ ಯುವಕರು, ಹಿಂದೂ ಯುವತಿರನ್ನು ಮದುವೆಯಾಗ್ತಾರೆ. ಅದೇ ರೀತಿ ಹಿಂದೂಗಳು ಮುಸ್ಲಿಂ ಯುವತಿಯರನ್ನು ಮದುವೆಯಾಗಿ ಪ್ರತಿಕಾರ ತೀರಿಸಿಕೊಳ್ಳಬೇಕು ಎಂಬ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಘಿಸಲಾಗಿದೆ.

ಲವ್ ಕೇಸರಿ ಹೇಳಿಕೆ ಬಳಿಕ ಸೈಲೆಂಟ್ ಆದ ಕೇಸರಿ ಪಡೆ ಇನ್ನು ಈ ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಖಾಕಿ ಪಡೆ ಅಲರ್ಟ್ ಆಗಿದೆ. ರಾಯಚೂರು ಜಿಲ್ಲೆಯಲ್ಲಿ ಲವ್ ಕೇಸರಿ ಕ್ಯಾಂಪೆನ್ ಬಗ್ಗೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಸಮುದಾಯದ ಮುಖಂಡರ ಹೇಳಿಕೆಗಳ ಮೇಲೆ ಖಾಕಿ ನಿಗಾ ಇಟ್ಟಿದೆ. ಮತ್ತೊಂದೆಡೆ ಲವ್ ಕೇಸರಿ ಹೇಳಿಕೆ ಬಳಿಕ ಕೇಸರಿ ಪಡೆ ಸೈಲೆಂಟ್ ಆದಂತಿದೆ. ಪ್ರಕರಣ ದಾಖಲಾದ ಬೆನ್ನಲ್ಲೆ ಸದ್ಯ ಯಾವ ಪ್ರತಿಕ್ರಿಯೆ ನೀಡಿಲ್ಲ.

ಲವ್ ಕೇಸರಿ ಅಸ್ತ್ರದ ಕುರಿತು ವಿವಾದ ಸೃಷ್ಟಿಯಾದ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಲು ಮುಸ್ಲಿಂ ಮುಖಂಡರು ನಿರಾಕರಿಸಿದ್ದಾರೆ. ಇತ್ತ ಲವ್ ಕೇಸರಿ ಕ್ಯಾಂಪೆನ್ ನ ಮುಂದಿನ ನಡೆ ಕುರಿತು ಕೇಸರಿ ಪಡೆ ಬಾಯ್ಬಿಟ್ಟಿಲ್ಲ. ಈ ಬಗ್ಗೆ ಯಾರಾದರೂ ಪ್ರತಿಕ್ರಿಯಿಸಿದರೇ ವಿವಾವ ಬುಗಿಲೇಳೋ ಸಾಧ್ಯತೆ ಇದೆ. ಸದ್ಯ ಲವ್ ಕೇಸರಿ ವಿವಾದ ಬೂದಿಮುಚ್ಚಿದ ಕೆಂಡದಂತಿದೆ. ಏಪ್ರಿಲ್ 10 ರಂದು ಲವ್ ಜಿಹಾದ್ ಬದಲು ಲವ್ ಕೇಸರಿ ಕ್ಯಾಂಪೆನ್ ಗೆ ಕರೆ ನೀಡಿದ್ದರು. ಅದೇ ದಿನ ಹಿಂದೂ-ಮುಸ್ಲಿಂ ಯುವಕರು ಭಾವೈಕ್ಯತೆ ಮೆರೆದಿದ್ದರು. ಶ್ರೀ ರಾಮನವಮಿ ಶೋಭಾಯಾತ್ರಿಕರಿಗೆ ಮುಸ್ಲಿಂ ಯುವಕರು ಸತ್ಕಾರ ಮಾಡಿದ್ದರು. ಅದರಂತೆ ರಂಜಾನ್ ರೋಜಾ ಬಿಡುವ ವೇಳೆ ಹಿಂದೂ ಯುವಕರಿಂದಲೂ ಸತ್ಕಾರ ನಡೆದಿತ್ತು. ಅದೇ ದಿನ ಬೇರೆ ಕಾರ್ಯಕ್ರಮದಲ್ಲಿ ಲವ್ ಕೇಸರಿ‌ ವಿಚಾರ ಪ್ರಸ್ತಾಪವಾಗಿದೆ.

ಶ್ರೀರಾಮ ಸೇನೆ 4 ಕಾರ್ಯಕರ್ತರ ಬಂಧನಕ್ಕೆ ಆಕ್ರೋಶ ಧಾರವಾಡದ ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ವ್ಯಾಪಾರ ಸಂಘರ್ಷ ಶುರುವಾಗಿದೆ. ಶ್ರೀರಾಮ ಸೇನೆ 4 ಕಾರ್ಯಕರ್ತರ ಬಂಧನಕ್ಕೆ ಆಕ್ರೋಶ ಕೇಳಿ ಬರುತ್ತಿದೆ. ಜಾಮೀನುರಹಿತ ಕೇಸು ದಾಖಲಿಸಿದ್ದಕ್ಕೆ ಆಕ್ರೋಶ ಕೇಳಿ ಬಂದಿದೆ. ಎಲ್ಲಿಯೂ ತನಗೆ ಜೀವ ಬೆದರಿಕೆ ಹಾಕಿದ ಬಗ್ಗೆ ಕಲ್ಲಂಗಡಿ ಹಣ್ಣಿನ ವ್ಯಾಪಾರಿ ನಬೀಸಾಬ್ ಹೇಳಿಕೆ ನೀಡಿಲ್ಲ. ಆದರೂ IPC 506 ಜೀವ ಬೆದರಿಕೆ‌ ಕೇಸು ದಾಖಲಾಗಿದೆ. ಇದನ್ನು ವಿರೋಧಿಸಿ ಹಿಂದೂಪರ ಸಂಘಟಕರಿಂದ ಧಾರವಾಡ ಗ್ರಾಮೀಣ ಠಾಣೆಗೆ ಮುತ್ತಿಗೆ ಯತ್ನ ನಡೆದಿದೆ.

ಈ ವೇಳೆ ಕಾರ್ಯಕರ್ತರನ್ನು ಗೇಟ್ ಬಳಿ ಪೊಲೀಸರು ತಡೆದಿದ್ದಾರೆ. 20 ಕ್ಕೂ ಹೆಚ್ಚು ಕಾರ್ಯಕರ್ತರಿಂದ ಮುತ್ತಿಗೆ ಯತ್ನ ನಡೆದಿದೆ. ಪೊಲೀಸರು ಮತ್ತು ಕಾರ್ಯಕರ್ತರ ಮಧ್ಯೆ ವಾಗ್ವಾದ ಕೂಡ ನಡೆದಿದ್ದು ಪೊಲೀಸರ ನಡೆ ವಿರುದ್ಧ ಕಾರ್ಯಕರ್ತರ ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಮತ್ತೊಂದೆಡೆ ಹಿಂದೂ ಸಂಘಟನೆಗಳು ನುಗ್ಗಿಕೇರಿ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂದೂಯೇತರರಿಗೆ ಅಂಗಡಿ‌ ಬೇಡ ಎಂದು ಆಗ್ರಹಿಸಿದ್ದಾರೆ. ಯಾವುದೇ ಕಾರಣಕ್ಕೂ ಅಂಗಡಿ ನೀಡಬೇಡಿ ಎಂದು ಆಗ್ರಹ.

ಇದನ್ನೂ ಓದಿ: ತಮ್ಮನ್ನು ಸುಳ್ಳುಗಾರ ಎಂದಿರುವ ಸರ್ಕಾರದ ಪ್ರತಿನಿಧಿಗಳ ಬಗ್ಗೆ ಒಂದೂ ಮಾತಾಡಲಿಲ್ಲ ಬೆಂಗಳೂರು ಪೊಲೀಸ್ ಕಮೀಷನರ್!