Crime Updates: ಸೈನಿಕನ ತಾಯಿ ಕೊಲೆ ಪ್ರಕರಣದಲ್ಲಿ 18 ಜನರ ವಿರುದ್ಧ ಎಫ್​ಐಆರ್, ಬೆಂಗಳೂರಿನಲ್ಲಿ ಬ್ಯಾಟರಿ ಕದಿಯುತ್ತಿದ್ದ ದಂಪತಿ ಬಂಧನ

TV9 Digital Desk

| Edited By: ganapathi bhat

Updated on: Feb 15, 2022 | 3:40 PM

ಬಿಜೆಪಿ ಮುಖಂಡ ಶರಣಪ್ಪ ಗೌಡ ಸೇರಿ 18 ಜನರ ವಿರುದ್ಧ FIR ದಾಖಲಾಗಿದೆ. ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆಂದು ಆರೋಪ ಕೇಳಿಬಂದಿದೆ. ಬಿಜೆಪಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ವಿರುದ್ಧ ಆರೋಪ ಕೇಳಿಬಂದಿದೆ.

Crime Updates: ಸೈನಿಕನ ತಾಯಿ ಕೊಲೆ ಪ್ರಕರಣದಲ್ಲಿ 18 ಜನರ ವಿರುದ್ಧ ಎಫ್​ಐಆರ್, ಬೆಂಗಳೂರಿನಲ್ಲಿ ಬ್ಯಾಟರಿ ಕದಿಯುತ್ತಿದ್ದ ದಂಪತಿ ಬಂಧನ
ಸಾಂಕೇತಿಕ ಚಿತ್ರ

ರಾಯಚೂರು: ಸೈನಿಕನ ತಾಯಿ ಕೊಲೆ ಪ್ರಕರಣದಲ್ಲಿ 18 ಜನರ ವಿರುದ್ಧ ಎಫ್​ಐಆರ್ ದಾಖಲು ಮಾಡಲಾಗಿದೆ. ರಾಯಚೂರು ಜಿಲ್ಲೆ ಹಟ್ಟಿ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ. ಬಿಜೆಪಿ ಮುಖಂಡ ಶರಣಪ್ಪ ಗೌಡ ಸೇರಿ 18 ಜನರ ವಿರುದ್ಧ FIR ದಾಖಲಾಗಿದೆ. ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆಂದು ಆರೋಪ ಕೇಳಿಬಂದಿದೆ. ಬಿಜೆಪಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ವಿರುದ್ಧ ಆರೋಪ ಕೇಳಿಬಂದಿದೆ.

ಬೆಂಗಳೂರು ಟ್ರಾಫಿಕ್ ಸಿಗ್ನಲ್​​ಗಳಲ್ಲಿ ಬ್ಯಾಟರಿ ಕಳವು ಮಾಡುತ್ತಿದ್ದ ಕಳ್ಳ ದಂಪತಿ ಬಂಧನ ಮಾಡಲಾಗಿದೆ. ಅಶೋಕನಗರ ಪೊಲೀಸರಿಂದ ಸಿಖಂದರ್, ನಜ್ಮಾ ಬಂಧನ ಮಾಡಲಾಗಿದೆ. ಬಂಧಿತರಿಂದ 20 ಲಕ್ಷ ರೂ. ಮೌಲ್ಯದ ಒಟ್ಟು 230 ಬ್ಯಾಟರಿಗಳನ್ನು ವಶಕ್ಕೆ ಪಡೆಯಲಾಗಿದೆ. ಕಳವು ಮಾಲು ಖರೀದಿ ಮಾಡಿದ ಆರೋಪದಲ್ಲಿ ಧನಶೇಖರ್ ಎಂಬಾತ ಸಹ‌ ಬಂಧನವಾಗಿದೆ.

ತರಕಾರಿ ಮಾರಾಟ ಮಾಡುವವರ ಸೋಗಿನಲ್ಲಿ ಓಡಾಡ್ತಿದ್ದ ದಂಪತಿ, ಬೈಕ್ ಗೆ ನಂಬರ್ ಪ್ಲೇಟ್ ಇಲ್ಲದೆ, ಮೊಬೈಲ್ ಬಳಸದೇ ಸುತ್ತಾಡ್ತಿದ್ರು. ಒಂದೊಂದು ದಿನ ಒಂದೊಂದು ಡಿವಿಷನ್ ಗಳಲ್ಲಿ ಬ್ಯಾಟರಿ ಕಳವು ಮಾಡ್ತಿದ್ರು. ಜೆ.ಪಿ.ನಗರ ಬಳಿ ಸಿಕ್ಕ ಸಿಸಿಟಿವಿ ಆಧಾರದ ಮೇಲೆ ಶೋಧ ನಡೆಸಿದ್ದ ಪೊಲೀಸರು, ಗೊರಗುಂಟೆಪಾಳ್ಯದ ಪೆಟ್ರೋಲ್ ಬಂಕ್ ಬಳಿ ಆರೋಪಿಗಳ ಬಂಧನ ಮಾಡಿದ್ದಾರೆ.

ಬೆಳಗ್ಗೆ 3 ರಿಂದ 5 ಗಂಟೆಯ ಅವಧಿಯಲ್ಲಿ ಮಾತ್ರ ಕಳ್ಳತನ ಮಾಡುತ್ತಿದ್ದ ಆರೋಪಿಗಳು, TVS N-Torque ಸ್ಕೂಟರ್ ಹೊಂದಿದ್ದರು. ಸಿಸಿಟಿವಿ ಯಾಮಾರಿಸಲು ಸ್ಕೂಟರಿನ ಟೇಲ್ ಲೈಟ್ ತೆಗೆಸಿದ್ದರು. ಆರ್‌ಟಿ‌ಓದಿಂದ ನಗರದಲ್ಲಿರುವ 4 ಸಾವಿರ TVS N-Torque ಸ್ಕೂಟರ್ ಮಾಹಿತಿ ಸಂಗ್ರಹಿಸಿದ್ದ ಪೊಲೀಸರು. ಗೊರಗುಂಟೆಪಾಳ್ಯ ಅಕ್ಕಪಕ್ಕದಲ್ಲಿ ನೊಂದಣಿಯಾಗಿರುವ 300ಕ್ಕೂ ಅಧಿಕ ಸ್ಕೂಟರುಗಳ ಮೇಲೆ ನಿಗಾವಹಿಸಿದ್ದರು. ಅಂತಿಮವಾಗಿ ಆರೋಪಿ ದಂಪತಿಯನ್ನ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ 68 ಪ್ರಕರಣಗಳು ಬಯಲಾಗಿವೆ.

ಇತರ ಅಪರಾಧ ಸುದ್ದಿಗಳು

ಬೆಂಗಳೂರು: ಬ್ರೌನ್ ಶುಗರ್ ಸರಬರಾಜು ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಶ್ರೀಕಾಂತ್ ಬಂಧನ ಮಾಡಲಾಗಿದೆ. ಗೋವಿಂದಪುರ ಪೊಲೀಸರಿಂದ ಆರೋಪಿ ಅರೆಸ್ಟ್ ಮಾಡಲಾಗಿದೆ, ಬಂಧಿತನಿಂದ 2 ಕೆಜಿ 48 ಗ್ರಾಂ ಬ್ರೌನ್ ಶುಗರ್ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು: ಬ್ರೆಜಿಲ್‌ನಿಂದ ಕೊಕೇನ್ ತಂದು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಚಿಬುಯಿಜ್ ಚಿನೋಸೋ ಬಂಧಿಸಲಾಗಿದೆ. ಗೋವಿಂದಪುರ ಠಾಣೆ ಪೊಲೀಸರು ಆರೋಪಿ ಬಂಧಿಸಿದ್ದಾರೆ. ಬಂಧಿತನಿಂದ 1 ಕೋಟಿ ಮೌಲ್ಯದ 910 ಗ್ರಾಂ ಕೊಕೇನ್, ತೂಕ ಮಾಡುವ ಯಂತ್ರ, ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಬೆಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಆಂಧ್ರಪ್ರದೇಶದ ಕುಮಾರ್, ಶಿವಪ್ರಕಾಶ್, ಪ್ರಕಾಶ್ ರಾವ್ ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 35 ಲಕ್ಷ ರೂಪಾಯಿ ಮೌಲ್ಯದ 103 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: Crime Updates: ಚರಂಡಿ ವಿಷಯಕ್ಕೆ ಗಲಾಟೆಯಾಗಿ ವೃದ್ಧೆ ಸಾವು, ಹಾಸನದಲ್ಲಿ ಮಗನಿಂದಲೇ ತಾಯಿಯ ಹತ್ಯೆ

ಇದನ್ನೂ ಓದಿ: Crime Updates: ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳ ಬಳಿ 1 ಕೆಜಿ ಗಾಂಜಾ ಪತ್ತೆ; ಆರೋಪಿಗಳ ಬಂಧನ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada