Fire Accident: ರಾಯಚೂರಿನ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ; ವಿದ್ಯುತ್ ಉತ್ಪಾದನೆ ಸ್ಥಗಿತ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 03, 2023 | 4:31 PM

ಶಕ್ತಿನಗರದ ಆರ್​​ಟಿಪಿಎಸ್​​ 7ನೇ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಅವಘಡದಿಂದ 7ನೇ ಘಟಕದಲ್ಲಿ ವಿದ್ಯುತ್​​ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.

Fire Accident: ರಾಯಚೂರಿನ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ; ವಿದ್ಯುತ್ ಉತ್ಪಾದನೆ ಸ್ಥಗಿತ
ಸಾಂದರ್ಭಿಕ ಚಿತ್ರ
Follow us on

ರಾಯಚೂರು: ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ 7ನೇ ಘಟಕದ ಎಚ್. ಟಿ. 6.6 ಕೆ. ವಿ. ಪ್ಯಾನಲ್ ನಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯಿಂದ 210ಮೆಗಾ ವ್ಯಾಟ್ ವಿದ್ಯುತ್​ ಉತ್ಪಾದನ ಘಟಕದ ಯು. ಸಿ.ಬಿ. ಸ್ವಿಚ್ ಗೇರ್‌ ಸುಟ್ಟು ಕರಕಲಾಗಿದ್ದು, ಒಂದು ವಾರ ಕಾಲ ವಿದ್ಯುತ್​ ಉತ್ಪಾದನೆಯನ್ನ ಸ್ಥಗಿತ ಮಾಡಲಾಗಿದೆ. ಈ ಕುರಿತು ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ದೇವಸ್ಥಾನದಲ್ಲಿ ಸಿಲೆಂಡರ್ ಸ್ಫೋಟಗೊಂಡು ಅರ್ಚಕ ಸೇರಿ ಮೂರು ಜನರಿಗೆ ಗಾಯ

ಹುಬ್ಬಳ್ಳಿ: ಮಹಾನಗರದ ವೀರಾಪುರ ಓಣಿಯ ಗಣೇಶನ ದೇವಸ್ಥಾನದಲ್ಲಿ ಸಿಲೆಂಡರ್ ಸ್ಫೋಟಗೊಂಡು ದೇವಸ್ಥಾನದ ಅರ್ಚಕ ಪ್ರಶಾಂತ್ ಹಿರೇಮಠ್ ಸೇರಿ ಇಬ್ಬರು ಭಕ್ತರಾದ ಐಶ್ವರ್ಯ ಮತ್ತು ಸರಸ್ವತಿ ಮೂವರಿಗೂ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೈಪ್​ನಿಂದ ಗ್ಯಾಸ್ ಸೋರಿಕೆಯಾಗಿ ಸ್ಫೋಟಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಇಂದು ಬೆಳಗ್ಗೆ ಆಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ತಿಂಡಿ ಮಾಡುವ ಸಲುವಾಗಿ ಅಡುಗೆ ತಯಾರಿಸುವ ಸಮಯದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ