ರಾಯಚೂರು, (ಜೂನ್ 23): ಅನುರಾಧಾ ಮತ್ತು ವಿನಯ್ ರೆಡ್ಡಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು (Love). ಆದ್ರೆ, ಪ್ರೇಮ ವಿವಾಹಕ್ಕೆ ಯುವತಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಜೋಡಿ ಪೊಲೀಸರ ಮೊರೆ ಹೋಗಿದ್ದಾರೆ. ಆದ್ರೆ, ಪ್ರಿಯಕರ ಪೊಲೀಸ್ ಠಾಣೆಯಲ್ಲಿ ಪ್ರೀತಿಗೆ ಒಪ್ಪಿ ಬಳಿಕ ಸಾಂತ್ವನ ಕೇಂದ್ರದಲ್ಲಿ ಉಲ್ಟಾ ಹೊಡೆದಿದ್ದಾನೆ. ಪ್ರಿಯಕರನ್ನೇ ನಂಬಿ ಮನೆಬಿಟ್ಟು ಬಂದ ಯುವತಿ ಮನನೊಂದು ಪ್ರಾಣ ಕಳೆದುಕೊಂಡಿದ್ದಾಳೆ. ಹೌದು..ಪ್ರಿಯಕರನಿಗಾಗಿ ಹೆತ್ತವರನ್ನು ಬಿಟ್ಟು ಬಂದಿದ್ದ ಅನುರಾಧಾ, ಕಟ್ಟಡ ಮೇಲಿಂದ ಹಾರಿ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ರಾಯಚೂರಿನ (Raichur) ದೇವರ ಕಾಲೋನಿಯಲ್ಲಿರುವ ಸಾಂತ್ವನ ಕೇಂದ್ರದಲ್ಲಿ ಈ ದುರ್ಘಟನೆ ನಡೆದಿದ್ದಾಳೆ. ಅನುರಾಧಾ(19) ಆತ್ಮಹತ್ಯೆ ಮಾಡಿಕೊಂಡ ಯುವತಿ.
ಅನುರಾಧಾ(19) ವಿನಯ್ ರೆಡ್ಡಿ ಎಂಬುವನನ್ನು ಪ್ರೀತಿಸುತ್ತಿದ್ದಳು. ಜೂನ್ 20ರಂದು ರಕ್ಷಣೆ ಕೋರಿ ಮಾರ್ಕೆಟ್ ಯಾರ್ಡ್ ಠಾಣೆಗೆ ತೆರಳಿ ಪೋಷಕರ ಜೊತೆ ಹೋಗಲ್ಲವೆಂದು ಅನುರಾಧಾ ಹೇಳಿದ್ದಳು. ಈ ಹಿನ್ನೆಲೆಯಲ್ಲಿ ಪೊಲೀಸರು, ಅನುರಾಧಾಳನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದರು. ಆದ್ರೆ, ಪ್ರಿಯಕರ ವಿನಯ್ ರೆಡ್ಡಿ, ಸಾಂತ್ವನ ಕೇಂದ್ರಕ್ಕೆ ಬಂದು ನಿನ್ನನ್ನ ಮದುವೆ ಆಗಲ್ಲ ಎಂದು ಅನುರಾಧಾಗೆ ಹೇಳಿದ್ದಾನೆ. ಇದರಿಂದ ಮನನೊಂದ ಅನುರಾಧಾ, ಮಹಿಳಾ ಸಾಂತ್ವನ ಕೇಂದ್ರದ ಮೊದಲನೇ ಮಹಡಿಯಿಂದ ಹಾರಿದ್ದಾಳೆ. ಇದರಿಂದ ಅನುರಾಧಾ ತಲೆಗೆ ತೀವ್ರ ಪೆಟ್ಟಾಗಿದ್ದು, ಕೂಡಲೇ ಆಕೆಯನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ,ಇಂದು(ಜೂನ್ 23) ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಸದ್ಯ ಪಶ್ಚಿಮ ಠಾಣೆಯ ಪೊಲೀಸರು ಪ್ರಿಯಕರ ವಿನಯ್ ರೆಡ್ಡಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: ವಿವಾಹಿತ ಪುರುಷನೊಂದಿಗೆ ಯುವತಿ ನಾಪತ್ತೆ ಪ್ರಕರಣ: ಇಬ್ಬರ ಶವ ಕೆರೆಯಲ್ಲಿ ಪತ್ತೆ
ಬಾಗಲಕೋಟೆ: ಜಿಲ್ಲೆಯ ತೇರದಾಳ ತಾಲೂಕಿನ ರಬಕವಿ ಗಣಪತಿ ದೇಗುಲ ಬಳಿಯ ಬಾವಿಗೆ ಬಿದ್ದು ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದ್ರಾಕ್ಷಾಯಿಣಿ(50) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಸದ್ಯ ಅಗ್ನಿಶಾಮಕ ದಳ ಸಿಬ್ಬಂದಿ ಮೃತದೇಹವನ್ನು ಬಾವಿಯಿಂದ ಹೊರತೆಗೆದ್ದಿದ್ದಾರೆ. ಆದ್ರೆ, ಮಹಿಳೆ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ತೇರದಾಳ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:44 pm, Sun, 23 June 24