ರಾಯಚೂರು: ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದರೂ ಇನ್ನೂ ಹಲವು ಗೊಂದಲಗಳಿವೆ. ಸದ್ಯ ಸಿದ್ದರಾಮಯ್ಯ ಅಭಿಮಾನಿಗಳು ಮಾತ್ರ ತಮ್ಮ ಆಸ್ತಿ ಮಾರಾಲೂ ಸಿದ್ದ ದಯಮಾಡಿ ಇಲ್ಲಿಂದ ಸ್ಪರ್ಧಿಸಿ ಎಂದು ಮನವಿ ಮಾಡುತ್ತಿದ್ದಾರೆ. ರಾಯಚೂರಿನಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಅಭಿಮಾನಿಯೊಬ್ಬರು ಆಫರ್ ನೀಡಿದ್ದಾರೆ.
ಯಾದಗಿರಿ ಕ್ಷೇತೃದಿಂದ ಸ್ಫರ್ಧೆ ಮಾಡಿದರೆ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಮಾಜಿ ತಾಪಂ ಸದಸ್ಯ ಚಂದ್ರಯ್ಯಾ ನಾಗರಾಳ ಎಂಬುವರು ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ಆಫರ್ ನೀಡಿದ್ದರು. ಇದೀಗ ಸಿದ್ದರಾಮಯ್ಯಗೆ ಮತ್ತೊಂದು ಬಿಗ್ ಆಫರ್ ಬಂದಿದೆ. ರಾಯಚೂರು ಜಿಲ್ಲೆಯಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರನ್ನು ಅಭಿಮಾನಿಯೊಬ್ಬರು ಒತ್ತಾಯಿಸಿದ್ದು, ಸ್ಪರ್ಧೆ ಮಾಡಿದ್ರೆ ಎರಡು ಎಕರೆ ಜಮೀನು ಮಾರಿ ಹಣ ಕೊಡುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Karnataka News Live: ಸಿಡಿ ಷಡ್ಯಂತ್ರ; ಡಿಕೆ ಶಿವಕುಮಾರ್, ರಮೇಶ ಜಾರಕಿಹೋಳಿ ಫೈಟ್ ಮಧ್ಯೆ ಇಂದಿನ ಅಪ್ಡೇಟ್ಸ್
ರಾಯಚೂರು ನಗರ ಅಥವಾ ಸಿಂಧನೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಚಿಕ್ಕ ಹೆಸರೂರು ಗ್ರಾಮದ ಅಭಿಮಾನಿ ಶರಣು ಕಡ್ಡೋಣಿ ಎಂಬುವವರು ಆಫರ್ ನೀಡಿದ್ದಾರೆ. ಸಿದ್ದರಾಮಯ್ಯ ಸ್ಪರ್ಧಿಸಿದ್ರೆ 2 ಎಕರೆ ಜಮೀನು ಮಾರಿ ಹಣ ನೀಡುತ್ತೇನೆ ಎಂದಿದ್ದಾರೆ.
ರಾಯಚೂರು ಜಿಲ್ಲೆಯ ಅಭಿವೃದ್ಧಿಗೆ ಸಿದ್ದರಾಮಯ್ಯ ಬರಬೇಕು. ಸಿಂಧನೂರು ಅಥವಾ ರಾಯಚೂರು ಕ್ಷೇತ್ರದಿಂದ ಸ್ಪರ್ಧೆ ಮಾಡಲಿ. 50 ಸಾವಿರ ಮತಗಳ ಅಂತರದಿಂದ ಸಿದ್ದರಾಮಯ್ಯ ಗೆಲ್ಲಲಿದ್ದಾರೆ ಎಂದು ಫೇಸ್ಬುಕ್ನಲ್ಲಿ ಸಿದ್ದರಾಮಯ್ಯ ಅಭಿಮಾನಿ ಶರಣು ಪೋಸ್ಟ್ ಮಾಡಿದ್ದಾರೆ.
ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ