AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲವ್ ಜಿಹಾದ್ ಬದಲಿಗೆ ಲವ್ ಕೇಸರಿ ಹೇಳಿಕೆ; ಶ್ರೀರಾಮಸೇನೆಯ ಇಬ್ಬರ ವಿರುದ್ಧ ಎಫ್​ಐಆರ್ ದಾಖಲು

ಶ್ರೀರಾಮಸೇನೆ ಸಂಚಾಲಕ ರಾಜಾಚಂದ್ರ ರಾಮನಗೌಡ ಹಾಗೂ ಶ್ರೀರಾಮಸೇನೆ ರಾಯಚೂರು ಜಿಲ್ಲಾಧ್ಯಕ್ಷ ಮಂಜುನಾಥ್ ಎಂಬವರು ರಾಮನವಮಿ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಅವರ ವಿರುದ್ಧ ಐಪಿಸಿ ಸೆಕ್ಷನ್‌ 153, 153(A), 295(A)ರ ಅಡಿ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಲವ್ ಜಿಹಾದ್ ಬದಲಿಗೆ ಲವ್ ಕೇಸರಿ ಹೇಳಿಕೆ; ಶ್ರೀರಾಮಸೇನೆಯ ಇಬ್ಬರ ವಿರುದ್ಧ ಎಫ್​ಐಆರ್ ದಾಖಲು
FIR
TV9 Web
| Edited By: |

Updated on:Apr 11, 2022 | 11:08 PM

Share

ರಾಯಚೂರು: ಲವ್ ಜಿಹಾದ್ ಬದಲಿಗೆ ಲವ್ ಕೇಸರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ರಾಜಾಚಂದ್ರ ರಾಮನಗೌಡ, ಮಂಜುನಾಥ್ ಎಂಬವರ ವಿರುದ್ಧ FIR ದಾಖಲು ಮಾಡಲಾಗಿದೆ. ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ. ಶ್ರೀರಾಮಸೇನೆ ಸಂಚಾಲಕ ರಾಜಾಚಂದ್ರ ರಾಮನಗೌಡ ಹಾಗೂ ಶ್ರೀರಾಮಸೇನೆ ರಾಯಚೂರು ಜಿಲ್ಲಾಧ್ಯಕ್ಷ ಮಂಜುನಾಥ್ ಎಂಬವರು ರಾಮನವಮಿ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಅನ್ಯ ಧರ್ಮದ ವಿರುದ್ಧ ಪ್ರಚೋದನಕಾರಿ ಹೇಳಿಕೆ ಆರೋಪದಲ್ಲಿ ಅವರ ವಿರುದ್ಧ ಐಪಿಸಿ ಸೆಕ್ಷನ್‌ 153, 153(A), 295(A)ರ ಅಡಿ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಇತ್ತ ಬೆಂಗಳೂರಿನ ಜೆ.ಜೆ.ನಗರದಲ್ಲಿ ಯುವಕ ಚಂದ್ರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ. ಹತ್ಯೆ ಉದ್ದೇಶದಿಂದ ಚಾಕು ಹಾಕಿರಲಿಲ್ಲವೆಂದು ಜಮೀರ್​ ಹೇಳಿಕೆಗೆ ಅವರು ತಿರುಗೇಟು ನೀಡಿದ್ದಾರೆ. ಹಾಗಾದರೆ ಚಾಕು ಚುಚ್ಚುವುದು ಏಕೆ, ಕೇಕ್​ ಕಟ್ ಮಾಡ್ತಾರಾ? ಪೂಜೆ ಮಾಡಲು ಚಾಕು ಹಾಕ್ತಾರಾ? ಏನ್ ಮಾತಾಡುತ್ತಿದ್ದೀರಿ? ಚಾಕೊಲೇಟ್​ ಕಟ್ ಮಾಡಲು ಚಾಕು ಹಾಕಿದ್ನಾ? ಕೊಲ್ಲುವ ಉದ್ದೇಶದಿಂದಲೇ ಚಂದ್ರುಗೆ ಚಾಕು ಹಾಕಿದ್ದಾರೆ. ನಿಶ್ಚಿತವಾಗಿ ಚಂದ್ರುಗೆ ನ್ಯಾಯ ಸಿಗುತ್ತೆ. ಚಂದ್ರು ಕುಟುಂಬಕ್ಕೆ ಸರ್ಕಾರ ₹25 ಲಕ್ಷ ಪರಿಹಾರ ನೀಡಬೇಕು ಎಂದು ಜಮೀರ್ ಅಹ್ಮದ್​ಖಾನ್​ ವಿರುದ್ಧ ಮುತಾಲಿಕ್ ಕೆಂಡಾಮಂಡಲವಾಗಿದ್ದಾರೆ.

ಚಂದ್ರು ಕೊಲೆ ಮಾದರಿಯಲ್ಲಿ 3 ಪ್ರಕರಣ ಮುಚ್ಚಿಹಾಕಿದ್ದಾರೆ. ಚಂದ್ರು ಕೊಲೆ ಪ್ರಕರಣ ಮುಚ್ಚಿಹೋಗಬಾರದು. ಶಾಸಕ ಜಮೀರ್ ಅಹ್ಮದ್ ಮಾತನಾಡುತ್ತಿರುವುದು ಸರಿಯಲ್ಲ. ಜಮೀರ್ ಅಹ್ಮದ್ ಹೇಳಿಕೆಯನ್ನು ಅಲ್ಲಾನೂ ಒಪ್ಪುವುದಿಲ್ಲ. ಇದೇ ರೀತಿ ಮುಂದುವರಿದರೆ ಹಿಂದೂ ಸಮಾಜ ವಿರೋಧಿಸುತ್ತೆ. ಜನರು ನಿಮ್ಮನ್ನು ಮನೆಗೆ ಕಳುಹಿಸುವುದು ಸತ್ಯ. ಚಾಕು ಚುಚ್ಚುವುದು ಒಳ್ಳೆ ನಡೆಯಲ್ಲ. ಜಮೀರ್ ಅಹ್ಮದ್​ ಕೇಸ್ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರೇ ಜಮೀರ್​ಗೆ ಪಾಠ ಕಲಿಸುತ್ತಾರೆ. ಚಂದ್ರು ಅಣ್ಣನಿಗೆ ಸರ್ಕಾರಿ ನೌಕರಿ ನೀಡುವಂತೆ ಮನವಿ ಮಾಡ್ತೇನೆ. ಚಂದ್ರು ಕುಟುಂಬಕ್ಕೆ 5 ಲಕ್ಷ ಕೊಟ್ಟಿರುವುದು ಸಾಕಾಗುವುದಿಲ್ಲ. ಯುವಕ ಚಂದ್ರು ಹತ್ಯೆಯಲ್ಲಿ ರಾಜಕೀಯ ಮಾಡುವುದು ಬೇಡ. ಅಮಾನುಷ ಹೇಳಿಕೆ ಕುಟುಂಬಸ್ಥರ ಮೇಲೆ ಪರಿಣಾಮ ಬೀರುತ್ತದೆ ಎಂದು ಚಂದ್ರು ಮನೆಗೆ ಭೇಟಿ ನಂತರ ಪ್ರಮೋದ್ ಮುತಾಲಿಕ್​ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನ ಜೆ.ಜೆ.ನಗರದಲ್ಲಿ ಯುವಕ ಚಂದ್ರು ಹತ್ಯೆ ಪ್ರಕರಣ ಸಂಬಂಧ ಚಂದ್ರು ಮನೆಗೆ ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್ ಭೇಟಿ ನೀಡಿದ್ದಾರೆ. ಮೃತ ಚಂದ್ರು ಕುಟುಂಬಸ್ಥರಿಗೆ ಪ್ರಮೋದ್ ಮುತಾಲಿಕ್ ಸಾಂತ್ವನ ಹೇಳಿದ್ದಾರೆ.

ಇದನ್ನೂ ಓದಿ: ಕೋಲಾರ: ಮುನ್ಸೂಚನೆ ನೀಡದೆ ಪ್ರಮೋದ್ ಮುತಾಲಿಕ್ ಆಗಮನ; ಶ್ರೀರಾಮ ಶೋಭಾಯಾತ್ರೆಯ ಧ್ವಜಾರೋಹಣ ನಡೆಸಿ ವಾಪಸ್

ಇದನ್ನೂ ಓದಿ: ಕರ್ನಾಟಕದಲ್ಲಿನ ಧರ್ಮ ಸಂಘರ್ಷದಿಂದ ಉದ್ದಿಮೆಗಳಿಗೆ ಹಿನ್ನಡೆ ಆಗುತ್ತೆ ಎಂಬುದು ಸುಳ್ಳು: ಬಸವರಾಜ ಬೊಮ್ಮಾಯಿ

Published On - 11:07 pm, Mon, 11 April 22