ರಾಜ್ಯದಲ್ಲಿ ಇನ್ನೂ ಶೇ.100ರಷ್ಟು ಮತಾಂತರ ನಡೆಯುತ್ತಿದೆ -ಶಾಸಕ ಗೂಳಿಹಟ್ಟಿ ಶೇಖರ್

| Updated By: ಆಯೇಷಾ ಬಾನು

Updated on: Aug 17, 2022 | 8:37 PM

ರಾಯಚೂರಿನಲ್ಲಿ ಇಂದು ಪ್ರಗತಿ ಪರಿಶೀಲನಾ ಸಭೆ ನಡೆದಿದೆ. ವಿಧಾನಮಂಡಲದ ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಸಭೆಯ ಬಳಿಕ ಶಾಸಕ ಗೂಳಿಹಟ್ಟಿ ಶೇಖರ್ ಮಾತನಾಡಿದ್ದಾರೆ.

ರಾಜ್ಯದಲ್ಲಿ ಇನ್ನೂ ಶೇ.100ರಷ್ಟು ಮತಾಂತರ ನಡೆಯುತ್ತಿದೆ -ಶಾಸಕ ಗೂಳಿಹಟ್ಟಿ ಶೇಖರ್
ಶಾಸಕ ಗೂಳಿಹಟ್ಟಿ ಶೇಖರ್
Follow us on

ರಾಯಚೂರು: ರಾಜ್ಯದಲ್ಲಿ ಇನ್ನೂ ಶೇ.100ರಷ್ಟು ಮತಾಂತರ ನಡೆಯುತ್ತಿದೆ ಎಂದು ರಾಯಚೂರು ನಗರದಲ್ಲಿ ಶಾಸಕ ಗೂಳಿಹಟ್ಟಿ ಶೇಖರ್(Gulihatti Shekar) ಆರೋಪಿಸಿದ್ದಾರೆ. ಸೌಲಭ್ಯಗಳನ್ನ ನೀಡುವಾಗ ಎಲ್ಲಾ ದಾಖಲಾತಿ ಪರಿಶೀಲಿಸಬೇಕು. ರಾಯಚೂರು ನಗರದಲ್ಲಿ 150ಕ್ಕೂ ಹೆಚ್ಚು ಚರ್ಚ್‌ಗಳಿವೆ. ದುರಸ್ತಿ, ಹೊಸ ಚರ್ಚ್‌ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ ಎಂದರು.

ರಾಯಚೂರಿನಲ್ಲಿ ಇಂದು ಪ್ರಗತಿ ಪರಿಶೀಲನಾ ಸಭೆ ನಡೆದಿದೆ. ವಿಧಾನಮಂಡಲದ ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಸಭೆಯ ಬಳಿಕ ಶಾಸಕ ಗೂಳಿಹಟ್ಟಿ ಶೇಖರ್ ಮಾತನಾಡಿದ್ದಾರೆ. ಚರ್ಚ್ ಗಳ ರಿಪೇರಿ, ಹೊಸ ಚರ್ಚ್ಗಳಿಗಾಗಿ 20- 30 ಲಕ್ಷ ಅನುದಾನ ಕೊಟ್ಟಿದೆ. ಬೇರೆ ಸೌಲಭ್ಯ ಪಡೆದು ಕ್ರಿಶ್ಚಿಯನ್ ಧರ್ಮದ ಹೆಸರಲ್ಲೂ ಸೌಲಭ್ಯ ಪಡೆಯುವವರು ಎಷ್ಟು? ಹೀಗಾಗಿ ಯಾವ ಮಾನದಂಡಗಳಲ್ಲಿ ಅನುದಾನ ನೀಡಲಾಗಿದೆ? ಈ ವಿಚಾರಗಳ ಬಗ್ಗೆ ಸಭೆಯಲ್ಲಿ ಅಧಿಕಾರಿಗಳನ್ನ ಕೇಳಿದ್ದೇನೆ ಎಂದು ಗೂಳಿಹಟ್ಟಿ ಶೇಖರ್ ಇಂದು ರಾಯಚೂರಿನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ಬಳಿಕ ತಿಳಿಸಿದ್ದಾರೆ.

ರಾಯಚೂರು ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರಾಜಕೀಯ ನಾಯಕರ ಟಾಕ್ ವಾರ್ ಗೆ ಕುಮಾರ ಬಂಗಾರಪ್ಪ ಅಸಮಾಧಾನ

ಶಿವಮೊಗ್ಗ ಜಿಲ್ಲೆ ಗಲಭೆ ವಿಚಾರದಲ್ಲಿ ನಾಯಕರ ಟಾಕ್ ವಾರ್ ವಿಚಾರಕ್ಕೆ ಕುಮಾರ ಬಂಗಾರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಯಾವ ರಾಜಕೀಯ ‌ನಾಯಕರು ಸ್ಟೇಟ್ಮೆಂಟ್ ಕೊಡಬಾರದು. ಸಮಾಜಕ್ಕೆ ವಿರುದ್ಧವಾದ ವಾತಾವರಣ ರಾಜಕೀಯ ನಾಯಕರೇ ಸೃಷ್ಟಿಸಿದ್ದಾರೆ. ಯಾರೂ ‌ಕೂಡ ಈ ವಿಚಾರವನ್ನ ರಾಜಕೀಯವಾಗಿ ತೆಗೆದುಕೊಳ್ಳಬಾರದು. ಎಲ್ಲರೂ ಕೋಮು ಸೌಹಾರ್ದತೆಯಾಗಿ ಕುಳಿತು ಬಗೆಹರಿಸಿಕೊಳ್ಳಬೇಕು. ಯಾವುದೇ ಸಮುದಾಯದ ಮೇಲೆ ಯಾರೂ ‌ಕೂಡ ಗಲಾಟೆ ಮಾಡಬಾರದು. ಎಲ್ಲಾ ಸಮುದಾಯದ ಜನರು ಬದುಕಿ ಬಾಳಿದಂತ ಊರು ಶಿವಮೊಗ್ಗ. ಶಿವಮೊಗ್ಗದ ನಗರದಲ್ಲಿ ಮೊದಲಿನಿಂದಲೂ ಸೂಕ್ಷ್ಮ ವಿಚಾರಗಳಿವೆ. ಶಿವಮೊಗ್ಗದ ಆಡಳಿತಾಧಿಕಾರಿಗಳು ಈ ವಿಚಾರಗಳನ್ನ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ರಾಯಚೂರಿನಲ್ಲಿ ಕುಮಾರ ಬಂಗಾರಪ್ಪ ಬೇಸರ ಹೊರ ಹಾಕಿದ್ರು.

Published On - 8:30 pm, Wed, 17 August 22