ಮಂಡ್ಯಕ್ಕೆ ಯಾರೇ ಬಂದ್ರು ಅಲ್ಲಾಡಿಸಲಾಗಲ್ಲ ಎಂದ ನಿಖಿಲ್ ಕುಮಾರಸ್ವಾಮಿ

| Updated By: ಸಾಧು ಶ್ರೀನಾಥ್​

Updated on: Jan 05, 2023 | 5:30 PM

Nikhil Kumaraswamy: ಪಂಚರತ್ನ ಯಾತ್ರೆಯಿಂದ ಬಿಜೆಪಿ, ಕಾಂಗ್ರೆಸ್ ಗೆ ನಡುಕ ಶುರುವಾಗಿದೆ ಅನ್ನೋ ಟಾಕ್ ಹರಿದಾಡುತ್ತಿರುವ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಎರಡು ರಾಷ್ಟ್ರೀಯ ಪಕ್ಷಗಳ ಬಗ್ಗೆ ಚರ್ಚೆ ಮಾಡಿ, ಸಮಯ ವ್ಯರ್ಥ ಮಾಡಿಕೊಳ್ಳೋಲ್ಲ. ಜೆಡಿಎಸ್ ಅನ್ನ ಸ್ವತಂತ್ರವಾಗಿ ಬೆಂಬಲಿಸಿ ಅಂತಾ ಜನರನ್ನ ಕೇಳಿಕೊಳ್ತೀನಿ ಎಂದು ಹೇಳಿದರು.

ಮಂಡ್ಯಕ್ಕೆ ಯಾರೇ ಬಂದ್ರು ಅಲ್ಲಾಡಿಸಲಾಗಲ್ಲ ಎಂದ ನಿಖಿಲ್ ಕುಮಾರಸ್ವಾಮಿ
ಮಂಡ್ಯಕ್ಕೆ ಯಾರೇ ಬಂದ್ರು ಅಲ್ಲಾಡಿಸಲಾಗಲ್ಲ ಎಂದ ನಿಖಿಲ್ ಕುಮಾರಸ್ವಾಮಿ
Follow us on

ರಾಯಚೂರು: ಕರ್ನಾಟಕ ಅಸೆಂಬ್ಲಿ ಚುನಾವಣೆ (Karnataka Asssembly Elections 2023) ಸಭೆಗಳು ರಂಗೇರುತ್ತಿವೆ. ಯುವಕರು, ವೃದ್ಧರಾದಿಯಾಗಿ ಎಲ್ಲರೂ ತಮ್ಮ ಶಕ್ತ್ಯಾನುಸಾರ ಚುನಾವಣೆ ಜಪಿಸುತ್ತಿದ್ದಾರೆ. ಜಪದ ಮಧ್ಯೆ ಬೈಗುಳಗಳು, ಆರೋಪಗಳು, ಪ್ರತ್ಯಾರೋಪಗಳು, ಅಸ್ತ್ರಗಳು, ಪ್ರತ್ಯಸ್ತ್ರಗಳು ಢಾಳಾಗಿ ಕಾಣಬರುತ್ತಿವೆ. ಇಂದು ರಾಯಚೂರಿನಲ್ಲಿ (Raichur) ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮಾತನಾಡಿದ್ದು ಅಮಿತ್​ ಶಾ ಮಂಡ್ಯದಲ್ಲಿ ನಡೆದ ಸಮಾವೇಶ ಹರಿಬಿಟ್ಟಿರುವ ವಾಗ್ಬಾಣಗಳ ವಿಚಾರ ಪ್ರಸ್ತಾಪಿಸಿ ಮಂಡ್ಯಕ್ಕೆ (Mandya) ಯಾರೇ ಬಂದ್ರು ಅಲ್ಲಾಡಿಸಲಾಗಲ್ಲ ಎಂದು ಘರ್ಜಿಸಿದ್ದಾರೆ. ಸರ್, ದೇವೆಗೌಡರನ್ನಾಗ್ಲಿ,ಇಲ್ಲಾ ಕುಮಾರಣ್ಣನ್ನಾಗ್ಲಿ ಅಥವಾ ಜೆಡಿಎಸ್ ಪಕ್ಷವನ್ನಾಗಲೀ (JDS) ಯಾರೇ ಬಂದ್ರು ಹಳೆ ಮೈಸೂರು ಭಾಗದಲ್ಲಿ ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಎದೆಯುಬ್ಬಿಸಿ ಹೇಳಿದ್ದಾರೆ.

ನಾಲ್ಕೂವರೆ ವರ್ಷದಲ್ಲಿ ಆಗದೇ ಇದ್ದದ್ದನ್ನ, ಬಿಜೆಪಿಯವ್ರು ಮುಂದೆ ಐದು ವರ್ಷದಲ್ಲಿ ಮಾಡಿ ಬಿಡ್ತಾರಂತಾ ಅಂತ ಸವಾಲಿನ ಧಾಟಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ವಾತಂತ್ರ್ಯ ಸಿಕ್ಕಿ 75 ವರ್ಷವೇ ಆಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಆಡಳಿತ ನಡೆಸಿವೆ. ಕುಮಾರಣ್ಣ 34 ತಿಂಗಳು ಆಡಳಿತ ಮಾಡಿದವರು. ರಾಜ್ಯದ ಜನತೆ ಈಗಲೂ ಅಂದಿನ ಅವರ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಮಾಡುತ್ತಾರೆ. ನಾಲ್ಕೂವರೆ ವರ್ಷದಲ್ಲಿ ಆಗದೇ ಇದ್ದದ್ದನ್ನ, ಬಿಜೆಪಿಯವ್ರು ಮುಂದೆ ಐದು ವರ್ಷದಲ್ಲಿ ಮಾಡಿ ಬಿಡ್ತಾರಂತಾ? ರೈತರ ಸಾಲ ಮನ್ನಾ ಮಾಡಿದ್ದು ಕುಮಾರಣ್ಣ. ಯಾವ ಜಾತಿ ಅಂತಾನೂ ನೋಡದೆ ಎಲ್ಲ ಜಾತಿಯ ರೈತರ ಸಾಲ ಮನ್ನಾ ಮಾಡಿದ್ರು. ಆದರೂ ಅವರನ್ನ ಬೀಳಿಸಿದ್ರು ಎಂದು ನಿಖಿಲ್ ಕಿಡಿಕಾರಿದರು.

ಪಂಚರತ್ನ ಯಾತ್ರೆಯಿಂದ ಬಿಜೆಪಿ, ಕಾಂಗ್ರೆಸ್ ಗೆ ನಡುಕ ಶುರುವಾಗಿದೆ ಅನ್ನೋ ಟಾಕ್ ಹರಿದಾಡುತ್ತಿರುವ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಎರಡು ರಾಷ್ಟ್ರೀಯ ಪಕ್ಷಗಳ ಬಗ್ಗೆ ಚರ್ಚೆ ಮಾಡಿ, ಸಮಯ ವ್ಯರ್ಥ ಮಾಡಿಕೊಳ್ಳೋದಕ್ಕೆ‌ ನಾವು ಸಿದ್ದರಿಲ್ಲ. 40 % ಲೂಟಿ ಹೊಡೆದಿದ್ದೀರಿ. ಬಿಜೆಪಿ ಸಂಕಲ್ಪ ಯಾತ್ರೆ, ಭಾರತ್ ಜೋಡೊದಿಂದ ಏನೂ ಆಗಲ್ಲ. ಜೆಡಿಎಸ್ ಅನ್ನ ಸ್ವತಂತ್ರವಾಗಿ ಬೆಂಬಲಿಸಿ ಅಂತಾ ಜನರನ್ನ ಕೇಳಿಕೊಳ್ತೀನಿ ಎಂದು ಹೇಳಿದರು.

ಕುಮಾರಣ್ಣ ಪಂಚರತ್ನ ರಥಯಾತ್ರೆಯ ಟೀಸರ್ ಇದು. ಎರಡು ರಾಷ್ಟ್ರೀಯ ಪಕ್ಷಗಳನ್ನ ಜನ ಧಿಕ್ಕರಿಸಿದ್ದಾರೆ‌‌. ಕುಮಾರಣ್ಣ ನಾಯಕತ್ವಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಇಂದು ಬೀದರ್‌ನಿಂದ ಕುಮಾರಣ್ಣ ಯಾತ್ರೆ ಶುರು ಮಾಡಿದ್ದಾರೆ ಎಂದು ನಿಖಿಲ್ ತಮ್ಮ ಜೆಡಿಎಸ್ ಪಕ್ಷದ ಬಗ್ಗೆ ಭರವಸೆಯ ಮಾತುಗಳನ್ನಾಡಿದರು.

ಕರ್ನಾಟಕ ಅಸೆಂಬ್ಲಿ ಎಲೆಕ್ಷನ್ಸ್​  2023  ಕುರಿತು ಹೆಚ್ಚಿನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ