ರಾಯಚೂರು: ಶವ ಸಂಸ್ಕಾರಕ್ಕೆ ಜಾಗ ಇಲ್ಲದ ಹಿನ್ನಲೆಯಲ್ಲಿ ಹೂತಿದ್ದ ಶವ ಹೊರತೆಗೆದು ಅಂತ್ಯಸಂಸ್ಕಾರ ಮಾಡುವ ಮನಕಲಕುವ ಘಟನೆ ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ನಿರಲಕೇರಿಯಲ್ಲಿ ನಡೆದಿದೆ.
ಈ ಗ್ರಾಮದಲ್ಲಿ ಹೊಸದಾಗಿ ಯಾರಾದರು ಮೃತಪಟ್ಟರೆ ಅವರನ್ನು ಮಣ್ಣು ಮಾಡಲು ಸ್ಮಶಾನದಲ್ಲಿ ಜಾಗ ಕೇಳಲೂ ಸಹ ಗೋಲಾಡ ಬೇಕು. ಗ್ರಾಮದಲ್ಲಿ ನಿನ್ನೆ ವೃದ್ಧ ಮೃತಪಟ್ಟಿದ್ದು ಸ್ಮಶಾನದಲ್ಲಿ ಜಾಗ ನೀಡದ ಹಿನ್ನೆಲೆ ಗ್ರಾಮಸ್ಥರು ಕಳೆದ ಎರಡು ತಿಂಗಳ ಹಿಂದೆ ಹೂತಿದ್ದ, ಅರೆ ಕೊಳೆತ ಸ್ಥಿತಿಯಲ್ಲಿರುವ ಶವ ತೆಗೆದು ಮೃತರ ಅಂತ್ಯಸಂಸ್ಕಾರ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ನಿನ್ನೆ ಅರೆಬರೆ ಕೊಳೆತೆ ಸ್ಥಿತಿಯಲ್ಲಿದ್ದ ಮಹಿಳೆಯ ಶವ ತೆಗೆದು ಗ್ರಾಮದ ವೃದ್ದನೋರ್ವನ ಅಂತ್ಯಸಂಸ್ಕಾರ ಮಾಡಲಾಗಿದೆ.
ಶವ ಸಂಸ್ಕಾರಕ್ಕೆ ಜಾಗ ನೀಡಲು ಹಲವಾರು ಬಾರಿ ಮನವಿ ಮಾಡಿದ್ರು ಅಧಿಕಾರಿಗಳು ಸ್ಪಂದಿಸಿಲ್ಲ. ಹೀಗಾಗಿ ಗ್ರಾಮದಲ್ಲಿ ಇಂತಹ ಮನಕಲಕುವ ಘಟನೆ ನಡೆದಿದೆ. ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಕಲಬುರಗಿ: ರಾತ್ರಿ ಒಂದು ಗಂಟೆಗೆ ಲಘು ಭೂಕಂಪದ ಅನುಭವ; ಆತಂಕದಲ್ಲಿ ಮನೆಯಿಂದ ಹೊರಬಂದ ಜನರು
ಕನ್ನಡತಿ ಶ್ರದ್ಧಾ ಶ್ರೀನಾಥ್ ಬೆಂಗಳೂರಿನಲ್ಲಿ ಖಾಯಂ ಆಗಿ ಸೆಟ್ಲ್ ಆಗುವ ಮೊದಲು ಅರ್ಧ ದೇಶವನ್ನೇ ಸುತ್ತಿದ್ದರು!