ಥೇಟ್ ಸಿನಿಮಾ ಶೈಲಿಯಂತೆ ಗೂಡ್ಸ್ ರೈಲು ನಿಂತಾಗ ಚಿನ್ನದಂತಹ ಕಲ್ಲಿದ್ದಲು ಕದಿಯುವುದು ಅಂದಿನಿಂದಲೂ ನಡೆಯುತ್ತಾ ಬಂದಿದೆಯಂತೆ – ಆರ್ಟಿಪಿಎಸ್ ಅಧಿಕಾರಿ ಮಾತು
ಅಲ್ಲಿ ಥೇಟ್ ಸಿನಿ ಸ್ಟೈಲ್ನಲ್ಲಿ ಅಕ್ರಮ ನಡೀತಿರೊ ಸುದ್ದಿ ಕೇಳಿ ಅಧಿಕಾರಿ ವರ್ಗವೇ ಬೆಚ್ಚಿ ಬಿದ್ದಿದೆ. ಇಡೀ ರಾಜ್ಯಕ್ಕೆ ವಿದ್ಯುತ್ ಪೂರೈಕೆ ಮಾಡೊ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸೇರಿರೊ ಆ ಚಿನ್ನದಂತಹ ವಸ್ತುವನ್ನೇ ಅಕ್ರಮ ಸಾಗಾಟ ಮಾಡಲಾಗ್ತಿದೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಹೌದು.. ಅದು ಆರ್ಟಿಪಿಎಸ್ ವಿದ್ಯುತ್ ಉತ್ಪಾದನಾ ಕೇಂದ್ರ.. ಹಾಗೆಯೇ ಅದರ ಜೊತೆಗೇ ಅಲ್ಲಿರೋದು ವೈಟಿಪಿಎಸ್ ವಿದ್ಯುತ್ ಉತ್ಪಾದನಾ ಕೇಂದ್ರ.
ಅಲ್ಲಿ ಥೇಟ್ ಸಿನಿ ಸ್ಟೈಲ್ನಲ್ಲಿ ಅಕ್ರಮ ನಡೀತಿರೊ ಸುದ್ದಿ ಕೇಳಿ ಅಧಿಕಾರಿ ವರ್ಗವೇ ಬೆಚ್ಚಿ ಬಿದ್ದಿದೆ. ಇಡೀ ರಾಜ್ಯಕ್ಕೆ ವಿದ್ಯುತ್ ಪೂರೈಕೆ ಮಾಡೊ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸೇರಿರೊ ಆ ಚಿನ್ನದಂತಹ ವಸ್ತುವನ್ನೇ ಅಕ್ರಮ ಸಾಗಾಟ (coal theft) ಮಾಡಲಾಗ್ತಿದೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಹೌದು.. ಅದು ಆರ್ಟಿಪಿಎಸ್ ವಿದ್ಯುತ್ ಉತ್ಪಾದನಾ ಕೇಂದ್ರ.. ಹಾಗೆಯೇ ಅದರ ಜೊತೆಗೇ ಅಲ್ಲಿರೋದು ವೈಟಿಪಿಎಸ್ ವಿದ್ಯುತ್ ಉತ್ಪಾದನಾ ಕೇಂದ್ರ. ಇವೆರಡು ಇರೋದು ರಾಯಚೂರು ತಾಲ್ಲೂಕಿನ ಶಕ್ತಿ ನಗರದ ಬಳಿ (Raichur Thermal Power Station -RTPS). ರಾಜ್ಯಕ್ಕೇ ಬೇಡಿಕೆ ಇರೊ ಬಹುತೇಕ ವಿದ್ಯುತ್ ಅನ್ನ ಇವೆರಡೇ ಕೇಂದ್ರಗಳು ಪೂರೈಸುತ್ವೆ. ಆರ್ಟಿಪಿಎಸ್ ನಲ್ಲಿ 8 ವಿದ್ಯುತ್ ಉತ್ಪಾದನಾ ಘಟಕಗಳಿದ್ರೆ, ವೈಟಿಪಿಎಸ್ನಲ್ಲಿ ಎರಡು ಘಟಕಗಳಿವೆ..
ಆರ್ಟಿಪಿಎಸ್ ಗರಿಷ್ಠ 1720 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸೊ ಸಾಮರ್ಥ್ಯ ಹೊಂದಿದೆ. ಆ ಪೈಕಿ ಆರ್ಟಿಪಿಎಸ್ ಸದ್ಯ 1039 ಮೆ. ವ್ಯಾ. ವಿದ್ಯುತ್ ಉತ್ಪಾದಿಸುತ್ತಿದೆ. ವೈಟಿಪಿಎಸ್ನಲ್ಲಿ 1600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಆದ್ರೀಗ ಬರೀ 552 ಮೆ.ವ್ಯಾ. ವಿದ್ಯುತ್ ಉತ್ಪಾದಿಸಿದೆ. ಈ ಎರಡು ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆಗೆ ಬಹುಮುಖ್ಯವಾಗಿ ಬೇಕಿರೋದು ಕಲ್ಲಿದ್ದಲು. ದೇಶದ ವಿವಿಧೆಡೆಯಿಂದ ಗೂಡ್ಸ್ ರೈಲುಗಳ ಮೂಲಕ ಈ ಎರಡು ಕೇಂದ್ರಗಳಿಗೆ ನೇರವಾಗಿ ಕಲ್ಲಿದ್ದಲನ್ನ ಪೂರೈಸಲಾಗುತ್ತೆ.
ಪ್ರಸ್ತುತ ಆರ್ ಟಿಪಿಎಸ್ ನಲ್ಲಿ 1.77 ಲಕ್ಷ ಮೆಟ್ರಿನ್ ಟನ್ ಕಲ್ಲಿದ್ದಲು ಹಾಗೂ ವೈಟಪಿಎಸ್ನಲ್ಲಿ1.67 ಲಕ್ಷ ಮೆಟ್ರಿನ್ ಟನ್ ಕಲ್ಲಿದ್ದಿಲು ಸ್ಟಾಕ್ ಇದೆ. ಆಗಾಗ ಈ ಕೇಂದ್ರಗಳಲ್ಲಿ ಕಲ್ಲಿದ್ದಿಲು ಕೊರತೆ ಎದುರಾಗುತ್ತಲೇ ಇರತ್ತೆ. ಸರ್ಕಾರ ಕೂಡ ಕಲ್ಲಿದ್ದಿಲು ಪೂರೈಕೆ ಬಗ್ಗೆ ತಲೆ ಕೆಡಿಸಿಕೊಳ್ತಿದೆ. ಆದರೆ ಇತ್ತ, ಆರ್ಟಪಿಎಸ್ ಹಾಗೂ ವೈಟಿಪಿಎಸ್ಗೆ ಸೇರಿದ ಕಲ್ಲಿದ್ದಿಲು ಹಂತಹಂತವಾಗಿ ಅಕ್ರಮ ಸಾಗಾಟವಾಗ್ತಿದೆ ಅನ್ನೊ ಗಂಭೀರ ಆರೋಪ ಕೇಳಿ ಬಂದಿದೆ. ಈ ದಂಧೆ ವರ್ಷಗಳಿಂದ ನಡೆಯುತ್ತಲೇ ಇದ್ದು ಅಧಿಕಾರಿಗಳ ವರ್ಗ ಮೌನವಹಿಸಿದೆ ಅಂತ ಸ್ಥಳೀಯರು ಆರೋಪಿಸುತ್ತಿದ್ದಾರೆ.
ಹೌದು..ಗೂಡ್ಸ್ ರೈಲುಗಳ ಮೂಲಕ ಈ ಕೇಂದ್ರಗಳಿಗೆ ಕಲ್ಲಿದ್ದಲು ಸರಬರಾಜು ಆದ ಬಳಿಕ ಆ ಗೂಡ್ಸ್ ಕ್ಯಾರಿಯರ್ಗಳನ್ನ ಸ್ವಚ್ಛಗೊಳಿಸಿ ನಿರ್ವಹಣೆ ಮಾಡಲಾಗುತ್ತೆ..ಆ ನಿರ್ವಹಣೆಯನ್ನ ಖಾಸಗಿ ಗುತ್ತಿಗೆದಾರ ಕಂಪೆನಿ ಮಾಡತ್ತೆ..ಹೀಗೆ ನಿರ್ವಹಣೆ ಹೆಸರಿನಲ್ಲಿ ಗೂಡ್ಸ್ ಕ್ಯಾರಿಯರ್ಗಳಲ್ಲಿ ಉಳಿದಿರೊ ಒಳ್ಳೆ ಕ್ವಾಲಿಟಿ ಕಲ್ಲಿದ್ದಿಲನ್ನೇ ಅಕ್ರಮವಾಗಿ ಸಾಗಾಟ ಮಾಡಲಾಗ್ತಿದೆಯಂತೆ.
ಆರ್ಟಿಪಿಎಸ್ ಹಾಗೂ ವೈಟಿಪಿಎಸ್ಗೆ ಕಲ್ಲಿದ್ದಲನ್ನ ನೇರವಾಗಿ ಆಯಾ ಕೇಂದ್ರಗಳೊಳಗೆ ಹೋಗಿ ಸರಬರಾಜು ಮಾಡಲಾಗುತ್ತೆ..ನಂತರ ಹೊರಗಡೆ ವಿವಿಧ ರೈಲ್ವೆ ನಿಲ್ದಾಣಗಳ ಬಳಿ ಈ ಗೂಡ್ಸ್ ರೈಲುಗಳನ್ನ ಸ್ವಚ್ಛಗೊಳಿಸಲಾಗುತ್ತೆ..ಆದ್ರೆ ಹೀಗೆ ಸ್ವಚ್ಛ ಮಾಡೋ ವೇಳೆ ಗೂಡ್ಸ್ ಕ್ಯಾರಿಯರ್ನಲ್ಲಿರೊ ಕಲ್ಲಿದ್ದಿಲನ್ನು ತೆಗೆದು ರೈಲ್ವೆ ನಿಲ್ಣಾಣದ ಬಳಿ ವಿವಿಧ ಕಡೆ ಡಂಪ್ ಮಾಡಲಾಗುತ್ತೆ.
ನಂತರ ಅವುಗಳನ್ನ ಟ್ರಾಕ್ಟರ್ ಹಾಗೂ ಟಿಪ್ಪರ್ಗಳ ಮೂಲಕ ಸ್ಥಳೀಯ ಖಾಸಗಿ ಕಂಪೆನಿಗಳಿಗೆ ಅಕ್ರಮ ಸಾಗಾಟ ಮಾಡಲಾಗ್ತಿದೆ ಅನ್ನೋದು ಆರೋಪದ ತಿರುಳು. ಈ ಬಗ್ಗೆ ಟಿವಿ9 ತಂಡ ಘಟನಾ ಸ್ಥಳಕ್ಕೆ ತೆರಳಿದ ಬಳಿಕ ಟ್ರಾಕ್ಟರ್ ಚಾಲಕರು ಟ್ರಾಕ್ಟರ್ಗಳ ಮೂಲಕ ಎಸ್ಕೇಪ್ ಆದ್ರು. ಈ ಆರೋಪದ ಬಗ್ಗೆ ಆರ್ಟಿಪಿಎಸ್ನ ಅಧಿಕಾರಿಯೊಬ್ರು ಟಿವಿ9ಗೆ ಸ್ಪಷ್ಟನೆ ನೀಡಿದ್ದಾರೆ. ಗೂಡ್ಸ್ ರೈಲು ನಿಂತಾಗ ಸ್ಥಳೀಯರು ಹೀಗೆ ಕಳ್ಳತನ ಮಾಡೋದು ನಡೆಯುತ್ತಲೇ ಇದೆ. ಆದ್ರೆ ಗುತ್ತಿಗೆದಾರರ ಕಡೆಯಿಂದ ಸಮಸ್ಯೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ ಆ ಬಗ್ಗೆ ಮಾಹಿತಿ ಪಡೀತಿವಿ ಅಂತ ಟಿವಿ9ಗೆ ಪ್ರತಿಕ್ರಿಯಿಸಿದ್ದಾರೆ.
ಇತ್ತ ಘಟನೆ ಬೆಳಕಿಗೆ ಬರ್ತಿದ್ದಂತೆ ಆರ್ಟಪಿಎಸ್ನ ಅಧಿಕಾರಿಗಳ ತಂಡ ಯರಮರಸ್ ರೈಲು ನಿಲ್ದಾಣದ ಸುತ್ತ ಪರಿಶೀಲನೆ ನಡೆಸಿದ್ರು..ಅದೆನೆ ಇರ್ಲಿ ಹೀಗೆ ಅವ್ಯಾಹತವಾಗಿ ರಾಜಾರೋಷವಾಗಿ ಕಲ್ಲಿದ್ದಿಲನ್ನ ಸ್ಟಾಕ್ ಮಾಡಿಕೊಂಡು ಅಕ್ರಮ ಸಾಗಾಟ ಮಾಡ್ತಿರೋದರ ಹಿಂದೆ ದೊಡ್ಡ ಜಾಲವೇ ಇರೋ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸರ್ಕಾರ ಅಥವಾ ಇಂಧನ ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸಿ, ಕ್ರಮ ಜರುಗಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:56 am, Wed, 22 November 23