ರಾಯಚೂರು: ಕಲುಷಿತ ನೀರು ಕುಡಿದು ಮೂವರು ಸಾವನ್ನಪ್ಪಿರೊ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಶುದ್ಧ ಕುಡಿಯುವ ನೀರಿನ ಘಟಕದ ಅಸಲಿಯತ್ತು ಬಯಲಾಗಿದ್ದು, ವಾಟರ್ ಸ್ಯಾಂಪಲ್ಸ್ ನಲ್ಲಿ ಅನ್ ಫಿಟ್ ಅನ್ನೋ ಸ್ಫೋಟಕ ರಿಪೋರ್ಟ್ ಹೊರಬಿದ್ದಿದೆ. 14 ವಾರ್ಡ್ ನ 110 ವಾಟರ್ ಸ್ಯಾಂಪಲ್ಸ್ನಲ್ಲಿ 24 ವಾಟರ್ ಸ್ಯಾಂಪಲ್ಸ್ ಅನ್ ಫಿಟ್ ಎಂಬ ವರದಿ ಬಂದಿದೆ. ಇನ್ನು ಮತ್ತೊಂದು ಕಡೆ ಪರಿಹಾರಕ್ಕಾಗಿ ರಾಯಚೂರು ಬಂದ್ಗೆ ಕರೆ ಕೊಟ್ಟಿದ್ದ ವೇದಿಕೆ ರಾಜಕೀಯ ಪ್ರಚಾರಕ್ಕೆ ಬಳಕೆಯಾಗಿದೆ.
ರಾಯಚೂರಿಗೆ ಇಂದು ತನಿಖಾ ತಂಡ ಭೇಟಿ
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ರಾಯಚೂರು ನಗರದಲ್ಲಿ ಇಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಕಾವೇರಿ ನೇತೃತ್ವದ ತನಿಖಾ ತಂಡ ಪರಿಶೀಲನೆ ನಡೆಸಲಿದೆ. ಕಲುಷಿತ ನೀರು ಸರಬರಾಜು ಹಿನ್ನೆಲೆ ಸಾವು ಹಾಗೂ ಆರೋಗ್ಯ ನಷ್ಟ ಕುರಿತು ತನಿಖೆ ನಡೆಸಲಿದೆ. ರಾಂಪೂರ ಜಲಶುದ್ದೀಕರಣ ಘಟಕ ಪರಿಶೀಲನೆ ಮಾಡಲಿದೆ. ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತೆ. ಕಲುಷಿತ ನೀರು ಸರಬರಾಜಿಗೆ ಸಂಬಂಧಿಸಿದ ಲೋಪಗಳ ಬಗ್ಗೆ ತನಿಖೆ ನಡೆಯಲಿದೆ. ಮೂರು ದಿನಗಳಲ್ಲಿ ವರದಿ ನೀಡಲು ಸರ್ಕಾರ ಆದೇಶಿಸಿದೆ. ಈ ಹಿನ್ನೆಲೆ ರಾಯಚೂರು ನಗರಕ್ಕೆ ತನಿಖಾ ತಂಡ ಆಗಮಿಸಲಿದೆ.
ಇನ್ನು ಮತ್ತೊಂದು ಕಡೆ ಸಾವು-ನೋವು ಹೆಚ್ಚಾಗ್ತಿದ್ದಂತೆಯೇ DLSA(ಡಿಸ್ಟ್ರಿಕ್ಟ್ ಲೀಗಲ್ ಸರ್ವಿಸ್ ಅಥಾರಿಟಿ) ಅಲರ್ಟ್ ಆಗಿದ್ದು DLSA ಟೀಂ ಸ್ಪಾಟ್ ವಿಸಿಟ್ ಮಾಡುತ್ತಿದೆ. DLSA ಸದಸ್ಯ ದಯಾನಂದ ಸ್ಥಳಕ್ಕೆ ಭೇಟಿ ನೀಡಿ ಪೊಲೀಸ್ ಭದ್ರತೆಯೊಂದಿಗೆ ನೀರು ಶುದ್ಧೀಕರಣ ಘಟಕ ಪರಿಶೀಲನೆ ನಡೆಸಲಿದ್ದಾರೆ. ಕಲುಷಿತ ನೀರಿನಿಂದ ಉಂಟಾದ ದುರಂತದ ಬಗ್ಗೆ DLSA ಪ್ರತ್ಯೇಕ ತನಿಖೆ ನಡೆಸುತ್ತಿದೆ. ಪರಿಶೀಲನೆ ಬಳಿಕ ಘಟಕದ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕಲಾಗುತ್ತೆ.
ರಾಜಕೀಯ ತಿರುವು ಪಡೆದುಕೊಂಡ ಹೋರಾಟ
ಕಲುಷಿತ ನೀರು ಕುಡಿದು ಮೂವರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿ ಮೃತರಿಗೆ ಹಾಗೂ ಚಿಕಿತ್ಸೆ ಪಡೆಯುತ್ತಿರುವವರಿಗೆ ಸರ್ಕಾರ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ ಎಂದು ನಿನ್ನೆ ರಾಯಚೂರು ಬಂದ್ಗೆ ಕರೆ ನೀಡಲಾಗಿತ್ತು. ಆದ್ರೆ ಈ ಹೋರಾಟ ರಾಜಕೀಯ ತಿರುವು ಪಡೆದುಕೊಂಡಿದೆ. ಎಂಎಲ್ಎ ಟಿಕೆಟ್ ಆಕಾಂಕ್ಷಿಗಳು ಈ ಬಂದನ್ನು ವೇದಿಕೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಗದಗ ಆರೋಗ್ಯ ಇಲಾಖೆಯಲ್ಲಿ ಭಾರಿ ಹಗರಣ! ಟಿವಿ9 ಎದುರು ಗೋಳು ತೋಡಿಕೊಂಡ ಸಿಬ್ಬಂದಿ
ಬಂದ್ ವೇದಿಕೆಯಲ್ಲಿ ‘ಕೈ’ ಟಿಕೆಟ್ ಆಕಾಂಕ್ಷಿಗಳು ಶಾಸಕರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. ರಾಯಚೂರ ಬಂದ್ ವೇಳೆ ಜಿ.ಪಂ. ಮಾಜಿ ಸದಸ್ಯರಾದ ಬಸಿರುದ್ದೀನ್, ಅಸ್ಲಾಂ ಪಾಷಾ ಶಾಸಕ ಡಾ.ಶಿವರಾಜ್ ಪಾಟೀಲ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ‘ನಾಚಿಕೆ ಆಗಲ್ವಾ ನಗರಸಭೆ ದುಡ್ಡು ಪಿಡಬ್ಲ್ಯುಡಿಗೆ ಕೊಡ್ತೀರಲ್ಲ’ ‘ಧಮ್ ಇದ್ರೆ ಬನ್ರೀ.. ನಗರಸಭೆ ಇಟ್ಕೊಂಡು ಲೂಟಿ ಮಾಡ್ತೀಯಾ’ ‘ಹೇಯ್ ನಾಲಾಯಕ್ ದಬ್ಬಾಳಿಕೆ ಮಾಡ್ತೀಯಾ ಅಂತಾ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಇಬ್ಬರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಶಾಸಕ ಡಾ.ಶಿವರಾಜ್ ಟಕ್ಕರ್ ಕೊಟ್ಟಿದ್ದಾರೆ. ನಾನೂ ರಾಯಚೂರು ನೀರೇ ಕುಡಿದಿದ್ದೀನಿ. ನೀನು ಗೂಂಡಾ, ರೌಡಿಶೀಟರ್ ಇದ್ದ್ದೀಯಾ ಅಂತ ಅನ್ನಬಹುದು. ನಾನೂ ಹಾಗೆ ಮಾತನಾಡಲ್ಲ, ನಾನು ಬೆಳೆದಿರುವ ಪರಿಸರ ಹಾಗಿಲ್ಲ. ನನಗೆ ಹೆಚ್ಚು ಬೈದವರಿಗೆ ಟಿಕೆಟ್ ಕೊಡ್ತೀನಿ ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿಮ್ಮಬ್ಬರಿಗೂ ಹೇಳಿರಬಹುದು. ನಾನು ಕೆಸರಿಗೆ ಕಲ್ಲೆಸೆಯೋ ಕೆಲಸ ಮಾಡುವುದಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
24 ವಾಟರ್ ಸ್ಯಾಂಪಲ್ಸ್ ಅನ್‌ಫಿಟ್
ಕಳೆದ 15 ದಿನಗಳಿಂದ ರಾಯಚೂರು ನಗರ ನಿವಾಸಿಗಳು ಕಲುಷಿತ ನೀರಿನ ಹೊಡೆತಕ್ಕೆ ತತ್ತರಿಸಿದ್ರು.. ಪದೇಪದೆ ಆಸ್ಪತ್ರೆ ಸೇರುತ್ತಿದ್ದ ಕೇಸ್‌ಗಳು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ, ನೀರು ಸರಬರಾಜು ಮಾಡೋ ರಾಂಪುರ ಶುದ್ಧ ಕುಡಿಯುವ ನೀರಿನ ಘಟಕದ ಮೇಲೆ ಕಣ್ಣಿಟ್ಟಿತ್ತು. ಕೂಡಲೇ ನಗರದ 14 ವಾರ್ಡ್, ಡಿಸ್ಟ್ರಿಬ್ಯುೂಟರ್ ಪಾಯಿಂಟ್, ಬಲ್ಕ್ ಸಪ್ಲೈ ಸೇರಿದಂತೆ ಹಲವೆಡೆ ನೀರಿನ ಸ್ಯಾಂಪಲ್ಸ್ ಪಡೆದು ಟೆಸ್ಟ್‌ಗೆ ಕಳುಹಿಸಲಾಗಿತ್ತು. ಇದೀಗ ಆ ಸ್ಫೋಟಕ ರಿಪೋರ್ಟ್ ಬಂದಿದ್ದು, ವರದಿಯಲ್ಲಿ 110 ವಾಟರ್ ಸ್ಯಾಂಪಲ್ಸ್‌ನಲ್ಲಿ 24 ಸ್ಯಾಂಪಲ್ಸ್ ಅನ್‌ಫಿಟ್ ಅನ್ನೋದು ಬಯಲಾಗಿದೆ. 24 ಕಡೆಗಳಲ್ಲಿನ ನೀರು ಕುಡಿಯಲು ಯೋಗ್ಯವಲ್ಲ ಅನ್ನೋ ಬೆಚ್ಚಿಬೀಳಿಸೊ ಮಾಹಿತಿ ಬೆಳಕಿಗೆ ಬಂದಿದೆ.
15 ವರ್ಷಗಳಿಂದ ಸ್ವಚ್ಛವಾಗಿಲ್ಲ ನೀರಿನ ಘಟಕ
ವಾಟರ್ ಸಫ್ಲೈ ವಿಧಾನದಲ್ಲೇ ಸಮಸ್ಯೆಯಿದೆ ಅನ್ನೋದಕ್ಕಿಂತ, ಬೆಚ್ಚಿಬೀಳಿಸೋ ಮತ್ತೊಂದು ಅಂಶ ಬೆಳಕಿಗೆ ಬಂದಿದೆ.. ರಾಂಪುರ ಶುದ್ಧ ಕುಡಿಯುವ ನೀರಿನ ಘಟಕವನ್ನು ಕಳೆದ 15 ವರ್ಷಗಳಿಂದ ಸ್ವಚ್ಛಗೊಳಿಸಿಲ್ಲವಂತೆ. ಹಾಗಾಗಿ ಓರ್ವ ವ್ಯಕ್ತಿ ಮುಳುಗುವಷ್ಟು ಆಳದ ಕೆಸರು ಶುದ್ದೀಕರಣ ಘಟಕದಲ್ಲಿ ಶೇಖರಣೆಯಾಗಿದೆ.. ಅಷ್ಟೇ ಅಲ್ಲ ಕೆಮಿಕಲ್ ಇಂಜಿನಿಯರ್ ಇಲ್ಲದೇ ಅವೈಜ್ಞಾನಿಕವಾಗಿ ನೀರಿನ ಟ್ಯಾಂಕ್‌ನ್ನ ಶುದ್ಧ ಮಾಡಿ, ನಿರ್ವಹಣೆ ಹಣವನ್ನೆಲ್ಲಾ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: RRR: ಹಾಲಿವುಡ್ ಜನಪ್ರಿಯ ಬರಹಗಾರನಿಂದ ‘ಆರ್ಆರ್ಆರ್’ಗೆ ಶಹಬ್ಬಾಸ್ಗಿರಿ; ಚಿತ್ರ ನೋಡಿ ಹೇಳಿದ್ದೇನು ಗೊತ್ತಾ?
Published On - 9:19 am, Wed, 8 June 22