ಗದಗ ಆರೋಗ್ಯ ಇಲಾಖೆಯಲ್ಲಿ ಭಾರಿ ಹಗರಣ! ಟಿವಿ9 ಎದುರು ಗೋಳು ತೋಡಿಕೊಂಡ ಸಿಬ್ಬಂದಿ
ಆಡಳಿತ ವೈದ್ಯಾಧಿಕಾರಿ ಕೀರ್ತಿಹಾಸ್ ಮತ್ತು ಎಫ್ಡಿಸಿಎಸ್ಆರ್ ಶಿಂಧೆ ವಿರುದ್ಧ ಆರೋಪಿಸಿರುವ ಆಸ್ಪತ್ರೆ ಸಿಬ್ಬಂದಿ ನಾಲ್ಕು ವರ್ಷಗಳಿಂದ ಆರೋಗ್ಯ ಸಿಬ್ಬಂದಿಗೆ ಬಂದ ಲಕ್ಷಾಂತರ ಇನ್ಸೆಂಟಿವ್ ಹಣವನ್ನು ಗುಳುಂ ಮಾಡಿದ್ದಾರೆ ಎಂದಿದ್ದಾರೆ.
ಗದಗ: ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಕನಸಿನ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಭಾರಿ ಹಗರಣ (Scam) ನಡೆದಿರುವ ಆರೋಪ ಕೇಳಿಬಂದಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕು ಆಸ್ಪತ್ರೆಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ ಆಸ್ಪತ್ರೆ ಸಿಬ್ಬಂದಿ ಟಿವಿ9 ಎದುರು ಗೋಳು ತೋಡಿಕೊಂಡಿದ್ದಾರೆ. ಜೊತೆಗೆ ಆಡಳಿತ ವೈದ್ಯಾಧಿಕಾರಿ ಕೀರ್ತಿಹಾಸ್ ವಿರುದ್ಧ ಸಿಬ್ಬಂದಿ ನೇರ ಆರೋಪ ಮಾಡಿದೆ. ಕೇಂದ್ರ ಸರ್ಕಾರ ಹಣ ನೀಡಿದರೂ ಸಿಬ್ಬಂದಿಗೆ ಒಂದು ಪೈಸೆ ನೀಡಿಲ್ಲ ಎಂದು ಆಡಳಿತ ವೈದ್ಯಾಧಿಕಾರಿ ವಿರುದ್ಧ ಗರಂ ಆಗಿದ್ದಾರೆ.
ಆಡಳಿತ ವೈದ್ಯಾಧಿಕಾರಿ ಡಾ. ಕೀರ್ತಿಹಾಸ್ ಮತ್ತು ಎಫ್ಡಿಸಿಎಸ್ಆರ್ ಶಿಂಧೆ ವಿರುದ್ಧ ಆರೋಪಿಸಿರುವ ಆಸ್ಪತ್ರೆ ಸಿಬ್ಬಂದಿ ನಾಲ್ಕು ವರ್ಷಗಳಿಂದ ಆರೋಗ್ಯ ಸಿಬ್ಬಂದಿಗೆ ಬಂದ ಲಕ್ಷಾಂತರ ಇನ್ಸೆಂಟಿವ್ ಹಣವನ್ನು ಗುಳುಂ ಮಾಡಿದ್ದಾರೆ ಎಂದಿದ್ದಾರೆ. ಸಿಬ್ಬಂದಿಗಳು ಇನ್ಸೆಂಟಿವ್ ಹಣವನ್ನು ಹಲವಾರು ಬಾರಿ ಕೇಳಿದರೂ ಕೊಡುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಇಷ್ಟೊಂದು ದೊಡ್ಡ ಹಗರಣ ನಡೆದರೂ ಜಿಲ್ಲಾಡಳಿತ ಮಾತ್ರ ಯಾವ ಕ್ರಮಕ್ಕೆ ಮುಂದಾಗಿಲ್ಲ. ಡಿಸಿ ಸುಂದರೇಶಬಾಬು, ಜಿಲ್ಲಾ ಪಂಚಾಯತಿ ಸಿಇಓ ಡಾ. ಸುಶೀಲಾ ಮೌನವಾಗಿರುವುದು ಹತ್ತಾರು ಅನುಮಾನಕ್ಕೆ ಕಾರಣವಾಗಿದೆ ಎಂದು ಸಿಬ್ಬಂದಿ ಸಿಡಿದೆದ್ದಿದ್ದಾರೆ.
ಇದನ್ನೂ ಓದಿ: ಒಂದೇ ಮನೆಯ ಅಣ್ಣ-ತಮ್ಮಂದಿರನ್ನು ಮದುವೆಯಾಗಿದ್ದ ಮೂವರು ಸೋದರಿಯರು ಒಟ್ಟಿಗೇ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
ಅಧಿಕಾರಿ ಹಣದ ದಾಹಕ್ಕೆ ಬಲಿಯಾದ ನೌಕರರು: ಇನ್ನು ಏನೂ ತಪ್ಪು ಮಾಡದಿದ್ರೂ ನೌಕರಿ ಕಳೆದುಕೊಂಡು ಹೊರಗುತ್ತಿಗೆ ನೌಕರರು ಗೋಳಾಡುತ್ತಿದ್ದಾರೆ. ಆರು ತಿಂಗಳ ಸಂಬಳವೂ ನೀಡದೇ ಏಕಾಏಕಿ ಸೇವೆಯಿಂದ ತೆಗೆದುಹಾಕಿದ ಡಿಹೆಚ್ಓ ವಿರುದ್ಧ ನೌಕರರ ಆಕ್ರೋಶ ಹೊರ ಹಾಕಿದ್ದಾರೆ. ನ್ಯಾಯಕ್ಕಾಗಿ ಡಿಸಿ, ಸಿಇಓ, ಕಾರ್ಮಿಕ ಇಲಾಖೆ ಕಚೇರಿ ಅಲೆದಾಡಿ ಬೇಡಿಕೊಂಡ್ರು ನ್ಯಾಯ ಸಿಗದೇ ರೋಸಿಹೋಗಿದ್ದಾರೆ. ಗದಗ ಜಿಲ್ಲಾಡಳಿತ ಭವನದಲ್ಲಿ ಗದಗ ಆರೋಗ್ಯ ಇಲಾಖೆಯಲ್ಲಿ ಸೇವೆ ಮಾಡಿದ ಹೊರಗುತ್ತಿಗೆ ನೌಕರರು ಲಂಚಬಾಕ ಡಿಎಚ್ಓ ಡಾ. ಜಗದೀಶ್ ನುಚ್ಚಿನ್ ಹಣದ ದಾಹಕ್ಕೆ ಬಲಿಯಾಗಿದ್ದಾರೆ.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:07 am, Wed, 8 June 22