ಒಂದೇ ಮನೆಯ ಅಣ್ಣ-ತಮ್ಮಂದಿರನ್ನು ಮದುವೆಯಾಗಿದ್ದ ಮೂವರು ಸೋದರಿಯರು ಒಟ್ಟಿಗೇ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

ರಾಜಸ್ಥಾನದ ಮೂವರು ಸಹೋದರಿಯರು ಒಂದೇ ಮನೆಯ ಸಹೋದರರನ್ನು ವಿವಾಹವಾಗಿ, ಒಂದೇ ಸೂರಿನಡಿ ವಾಸಿಸುತ್ತಿದ್ದರು. ಆ ಮೂವರೂ ತಮ್ಮ ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಒಂದೇ ಮನೆಯ ಅಣ್ಣ-ತಮ್ಮಂದಿರನ್ನು ಮದುವೆಯಾಗಿದ್ದ ಮೂವರು ಸೋದರಿಯರು ಒಟ್ಟಿಗೇ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
ಆತ್ಮಹತ್ಯೆ ಮಾಡಿಕೊಂಡ ಮೂವರು ಸೋದರಿಯರುImage Credit source: NDTV
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jun 08, 2022 | 9:03 AM

ಜೈಪುರ: ರಾಜಸ್ಥಾನದಲ್ಲಿ (Rajasthan) ಮೂವರು ಸಹೋದರಿಯರು ಮತ್ತು ಅವರ ಮಕ್ಕಳು ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ ನಡೆದಿದೆ. ಆ ಮೂವರು ಅಕ್ಕ- ತಂಗಿಯರು ಸಾಯುವ ಮೊದಲು ಅವರು ತಾವು ಮದುವೆಯಾಗಿದ್ದ ಕುಟುಂಬದ ವಿರುದ್ಧ ತಮ್ಮ ಮನೆಯವರಿಗೆ ಸಂದೇಶವನ್ನು ಕಳುಹಿಸಿದ್ದಾರೆ. ಅಂದಹಾಗೆ, ಈ ಮೂವರೂ ಒಂದೇ ಮನೆಯ ಅಣ್ಣ-ತಮ್ಮಂದಿರನ್ನು ಮದುವೆಯಾಗಿದ್ದರು. ಒಂದೇ ಮನೆಗೆ ಸೊಸೆಯರಾಗಿ ಹೋಗಿದ್ದ ಈ ಮೂವರು ಇದೀಗ ಹೆಣವಾಗಿದ್ದಾರೆ. ಈ ಮೂವರು ವರದಕ್ಷಿಣೆ (Dowry Case) ಕಿರುಕುಳಕ್ಕೆ ಒಳಗಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಸಮಾಜ ಎಷ್ಟೇ ಬದಲಾದರೂ, ಹೆಣ್ಣು ಮಕ್ಕಳು ಎಷ್ಟೇ ವಿದ್ಯಾವಂತರಾದರೂ ವರದಕ್ಷಿಣೆ ಕಿರುಕುಳ ಇನ್ನೂ ಕಡಿಮೆಯಾಗಿಲ್ಲ. ರಾಜಸ್ಥಾನದ ಮೂವರು ಸಹೋದರಿಯರು ಒಂದೇ ಮನೆಯ ಸಹೋದರರನ್ನು ವಿವಾಹವಾಗಿ, ಒಂದೇ ಸೂರಿನಡಿ ವಾಸಿಸುತ್ತಿದ್ದರು. ಆದರೆ ಅವರ ಪತಿ ಮತ್ತು ಅತ್ತೆಯರಿಂದ ನಿರಂತರ ಹಿಂಸೆಯನ್ನು ಅನುಭವಿಸುತ್ತಿದ್ದರು. ಹೆಚ್ಚಿನ ಹಣದ ಬೇಡಿಕೆಗಳನ್ನು ಪೂರೈಸಲು ಅವರ ತಂದೆ ವಿಫಲವಾದಾಗ ಸೇರಿದಂತೆ ಅವರು ನಿರಂತರವಾಗಿ ನಿಂದನೆಗೊಳಗಾಗುತ್ತಿದ್ದರು.

ಇದರಿಂದ ಬೇಸತ್ತಿದ್ದ ಅಕ್ಕ-ತಂಗಿಯರು ಜೈಪುರದ ಹೊರವಲಯದಲ್ಲಿರುವ ಅವರ ಮನೆಯ ಬಳಿ ತಮ್ಮ ಮಕ್ಕಳೊಂದಿಗೆ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ತಮ್ಮ ನಾಲ್ಕು ವರ್ಷದ ಮಗ ಮತ್ತು 6 ತಿಂಗಳ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂವರಲ್ಲಿ ಕಿರಿಯ ಮಹಿಳೆಯೂ ಗರ್ಭಿಣಿಯಾಗಿದ್ದರು. 5 ಶವಗಳನ್ನು ಹೊರತೆಗೆಯಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Crime News: ದೆಹಲಿಯ ಮೈದಾನದಲ್ಲಿ ಶವದ ತುಂಡುಗಳನ್ನು ತುಂಬಿಟ್ಟಿದ್ದ ಬ್ಯಾಗ್ ಪತ್ತೆ; ಕೊಲೆಯಾದವರ ಸುಳಿವೇ ಸಿಕ್ಕಿಲ್ಲ

“ನಮಗೆ ಸಾಯಲು ಇಷ್ಟವಿಲ್ಲ. ಆದರೆ, ಗಂಡ, ಅತ್ತೆಯಿಂದ ದಿನವೂ ಬೈಸಿಕೊಳ್ಳುತ್ತಾ ಸಾಯುವುದಕ್ಕಿಂತ ಈ ಸಾವೇ ಉತ್ತಮವಾಗಿದೆ” ಎಂದು ಅವರು ತಮ್ಮ ಮನೆಯವರಿಗೆ ವಾಟ್ಸಾಪ್​ನಲ್ಲಿ ಕೊನೆಯಾಗಿ ಮೆಸೇಜ್ ಕಳುಹಿಸಿದ್ದಾರೆ.

ತಮ್ಮ ಹೆಣ್ಣುಮಕ್ಕಳ ನಿಧನದಿಂದ ದಿಗ್ಭ್ರಮೆಗೊಂಡ ತಂದೆ ಸರ್ದಾರ್ ಮೀನಾ ಅವರು ತಮ್ಮ ಹೆಣ್ಣುಮಕ್ಕಳಿಗೆ ಜೀವನ ನರಕವಾಗಿತ್ತು. ಅವರಿಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿತ್ತು. ನಾವು ಅವರಿಗೆ ಈಗಾಗಲೇ ಫ್ರಿಡ್ಜ್, ವಾಷಿಂಗ್ ಮಷಿನ್, ಟಿವಿ ಸೆಟ್​ಗಳು ಸೇರಿದಂತೆ ಹಲವು ವಸ್ತುಗಳನ್ನು ನೀಡಿದ್ದೇವೆ, ನೀವು ಅವರ ಮನೆಯಲ್ಲಿ ಬೇಕಾದರೆ ಚೆಕ್ ಮಾಡಿ ಎಂದು ಅವರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ