ರಾಯಚೂರು: ಮಂತ್ರಾಲಯದ ಮುಖ್ಯದ್ವಾರದ ಮುಂಭಾಗದಲ್ಲಿರುವ ಶ್ರೀ ರಾಮಚಂದ್ರನ ವಿಗ್ರಹದ ಎಡಗೈ ದ್ವಂಸವಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು 15 ದಿನಗಳ ಈ ಹಿಂದೆ ವಿಗ್ರಹಕ್ಕೆ ಹಾನಿಯಾದ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಲಾಗಿದೆ ಎನ್ನಲಾಗುತ್ತಿದೆ.
ಇನ್ನು ವಿಗ್ರಹ ಹಾನಿ ಕುರಿತು ಭಜರಂಗದಳ ಸಂಘಟನೆಯಿಂದ ಡಾ.ಸುಬುಧೇಂದ್ರ ತೀರ್ಥರಿಗೆ ಮಾಹಿತಿ ನೀಡಲಾಗಿದೆ. ಸದ್ಯ ದ್ವಂಸವಾದ ವಿಗ್ರಹಕ್ಕೆ ಕೇಸರಿ ಶಾಲು ಧರಿಸಿ ರಕ್ಷಣೆ ನೀಡಲಾಗಿದ್ದು, ಇಂದು ವಿಶ್ವ ಹಿಂದೂ ಪರಿಷತ್ ಮುಖಂಡರು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ದ್ವಂಸವಾದ ವಿಗ್ರಹದ ಬಗ್ಗೆ ತನಿಖೆಗೆ ಒತ್ತಾಯಿಸಲಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:18 am, Fri, 10 March 23