ರಾಯಚೂರು: ಸರ್ಕಾರಿ ಶಾಲೆಯಲ್ಲಿ 1,000 ಕ್ಕೂ ಹೆಚ್ಚು ಮಕ್ಕಳಿಗೆ ಆರೇ ಕೊಠಡಿ; ಸುಡುವ ಬಿಸಿಲಲ್ಲಿ ಕುಳಿತು ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು

| Updated By: sandhya thejappa

Updated on: Jan 29, 2022 | 3:35 PM

ಸಗಮಕುಂಟಾ ಗ್ರಾಮದ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಸೇರಿ ಸುಮಾರು 1,053 ಮಕ್ಕಳು ಓದುತ್ತಿದ್ದಾರೆ. ಆದರೆ ಈ ಶಾಲೆಯಲ್ಲಿ ಕೇವಲ ಆರು ತರಗತಿ ಕೊಠಡಿಗಳಿವೆ. ಒಂದೊಂದು ಕೊಠಡಿಯಲ್ಲಿ 100 ಕ್ಕೂ ಹೆಚ್ಚು ಮಕ್ಕಳಿರುತ್ತಾರೆ.

ರಾಯಚೂರು: ಸರ್ಕಾರಿ ಶಾಲೆಯಲ್ಲಿ 1,000 ಕ್ಕೂ ಹೆಚ್ಚು ಮಕ್ಕಳಿಗೆ ಆರೇ ಕೊಠಡಿ; ಸುಡುವ ಬಿಸಿಲಲ್ಲಿ ಕುಳಿತು ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು
ಶಾಲೆ ಹೊರಗೆ ಕುಳಿತು ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು
Follow us on

ರಾಯಚೂರು: ತಾಲೂಕಿನ ಸಗಮಕುಂಟಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ (Government School) ಸಾವಿರಾರು ಮಕ್ಕಳಿದ್ದಾರೆ. ಆದರೆ ಸಾವಿರ ಮಕ್ಕಳಿಗೆ ಕೇವಲ ಆರೇ ಆರು ತರಗತಿ ಕೊಠಡಿಗಳಿವೆ. ಜಾಗವಿಲ್ಲದ ಕಾರಣಕ್ಕೆ ಮೈ ಸುಡುವ ಬಿಸಿನಲಲ್ಲಿ ಕುಳಿತು ಮಕ್ಕಳು ಪಾಠ ಕಲಿಯುತ್ತಿದ್ದಾರೆ. ಸದ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಅಂತರ ಕಾಯ್ದುಕೊಳ್ಳಲು ಮೈದಾನದಲ್ಲಿ ಮಕ್ಕಳಿಗೆ ಪಾಠ ಹೇಳಲಾಗುತ್ತಿದೆ. ಮೈದಾನದಲ್ಲಿ ಕೂತು ಪಾಠ ಕೇಳುವುದರಿಂದ ಗ್ರಾಮಸ್ಥರ ಓಡಾಟ, ವಾಹನಗಳ ಓಡಾಟದಿಂದ ಮಕ್ಕಳಿಗೆ ತೀರಾ ತೊಂದರೆಯಾಗುತ್ತಿದೆ. ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆದರೂ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಅಂತ ವಿದ್ಯಾರ್ಥಿಗಳು (Students) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಗಮಕುಂಟಾ ಗ್ರಾಮದ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಸೇರಿ ಸುಮಾರು 1,053 ಮಕ್ಕಳು ಓದುತ್ತಿದ್ದಾರೆ. ಆದರೆ ಈ ಶಾಲೆಯಲ್ಲಿ ಕೇವಲ ಆರು ತರಗತಿ ಕೊಠಡಿಗಳಿವೆ. ಒಂದೊಂದು ಕೊಠಡಿಯಲ್ಲಿ 100 ಕ್ಕೂ ಹೆಚ್ಚು ಮಕ್ಕಳಿರುತ್ತಾರೆ. ಕುಳಿತುಕೊಳ್ಳಲು ಎಲ್ಲರಿಗೂ ಸರಿಯಾಗಿ ಜಾಗವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣಕ್ಕೆ ಶಿಕ್ಷಕರು ವಿಧಿಯಿಲ್ಲದೇ ಮಕ್ಕಳನ್ನು ಬಯಲಲ್ಲಿ ಕೂರಿಸಿ ಪಾಠ ಕಲಿಸುತ್ತಿದ್ದಾರೆ.

ಎರಡೇ ಶೌಚಾಲಯ:
ವಿದ್ಯಾರ್ಥಿಗಳು ಹಾಗೂ 20ಕ್ಕೂ ಹೆಚ್ಚು ಶಿಬ್ಬಂದಿಗೆ ಇರುವುದು ಎರಡೇ ಶೌಚಾಲಯ. ಹೀಗಾಗಿ ಕೊರೊನಾ ನಿಯಮಗಳನ್ನ ಮಾಡುವವರು ನಮ್ಮ ಪರಿಸ್ಥಿತಿ ನೋಡಿ ಅಂತ ವಿದ್ಯಾರ್ಥಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾವಿರಾರು ವಿದ್ಯಾರ್ಥಿಗಳ ಜೊತೆ ಅಂಗನವಾಡಿಯೂ ಶಾಲಾ ಆವರಣದಲ್ಲಿಯೇ ಇದೆ. ಈ ಬಗ್ಗೆ ಸಗಮಕುಂಟಾ ಗ್ರಾಮದ ಹಿರಿಯರು, ಶಿಕ್ಷಕರು ಸಾಕಷ್ಟು ಬಾರಿ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಏನೂ ಪ್ರಯೋಜನವಾಗಿಲ್ಲ.

ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಈ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಲು ಸಾಕಷ್ಟು ಬಾರಿ ಅಧಿಕಾರಿಗಳನ್ನು ಭೇಟಿಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಒಬ್ಬರಿಗೆ ಕೊರೊನಾ ಬಂದರೆ ಇಡೀ ಶಾಲೆಗೆ ಅಂಟುವ ಸ್ಥಿತಿ ಇದೆ. ಕೂಡಲೇ ಇದಕ್ಕೆ ಪರ್ಯಾಯ ಮಾರ್ಗ ಕಲ್ಪಿಸಬೇಕು ಅಂತ ಶಾಲಾ ಮುಖ್ಯ ಶಿಕ್ಷಕರು ಇಕ್ಬಾಲ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ

Literature : ಅಭಿಜ್ಞಾನ ; ಪಾದರಸದಂತೆ ಹಗೂರ ತೇಲಿ ಬಂದ ಆ ಹೆಣ್ಣು, ಆ ಸುವಾಸನೆ ಅವನ ನಿರ್ಧಾರಕ್ಕೆ ಮೂಲ ಕಾರಣವಾಯಿತು

‘100’ ಓಟಿಟಿ ಬಿಡುಗಡೆಗೆ ಮುಹೂರ್ತ ಫಿಕ್ಸ್; ಯಾವಾಗ ತೆರೆಗೆ? ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ಮಾಹಿತಿ

Published On - 3:35 pm, Sat, 29 January 22