AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶಕ್ಕಾಗಿ ‘ನೆತ್ತರು’ ಹರಿಸಲು ಅವಕಾಶ ಕೊಡಿ, ರಾಷ್ಟ್ರಪತಿಗೆ ಹೋಮ್​ಗಾರ್ಡ್​ ‘ರಕ್ತ’ದಲ್ಲಿ ಮನವಿ!

ರಾಯಚೂರು: ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗಮಾಡಲು ನಮ್ಮ ಯುವಕರು ಸದಾ ಸಿದ್ಧ. ಇದಕ್ಕೆ ತಕ್ಕ ಉದಾಹರಣೆ ಜಿಲ್ಲೆಯ ಮಸ್ಕಿ ಪಟ್ಟಣದ ಯುವಕ ಲಕ್ಷ್ಮಣ. ಜಿಲ್ಲೆಯಲ್ಲಿ ಹೋಮ್‌ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಲಕ್ಷ್ಮಣರಿಗೆ ಲಡಾಖ್​ನ ಗಾಲ್ವಾನ್​ ಕಣಿವೆಯ ಘರ್ಷಣೆಯಲ್ಲಿ ಭಾರತೀಯ ಸೈನಿಕರು ಮೃತಪಟ್ಟಿದ್ದು ತೀವ್ರ ನೋವುಂಟುಮಾಡಿತ್ತು. ಹಾಗಾಗಿ ಚೀನಾದ ಅಟ್ಟಹಾಸದಿಂದ ತೀವ್ರ ಆಕ್ರೋಶಗೊಂಡಿರುವ ಲಕ್ಷ್ಮಣ ಇದೀಗ ರಾಷ್ಟ್ರಪತಿ ಕೋವಿಂದ್​ ಅವರಿಗೆ ತನ್ನ ರಕ್ತದಲ್ಲಿ ಪತ್ರ ಬರೆದು ದೇಶಕ್ಕಾಗಿ ಸೇವೆ ಸಲ್ಲಿಸಲು ಒಂದು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ‘ನನ್ನ […]

ದೇಶಕ್ಕಾಗಿ ‘ನೆತ್ತರು’ ಹರಿಸಲು ಅವಕಾಶ ಕೊಡಿ, ರಾಷ್ಟ್ರಪತಿಗೆ ಹೋಮ್​ಗಾರ್ಡ್​ ‘ರಕ್ತ’ದಲ್ಲಿ ಮನವಿ!
KUSHAL V
|

Updated on:Jun 21, 2020 | 2:18 PM

Share

ರಾಯಚೂರು: ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗಮಾಡಲು ನಮ್ಮ ಯುವಕರು ಸದಾ ಸಿದ್ಧ. ಇದಕ್ಕೆ ತಕ್ಕ ಉದಾಹರಣೆ ಜಿಲ್ಲೆಯ ಮಸ್ಕಿ ಪಟ್ಟಣದ ಯುವಕ ಲಕ್ಷ್ಮಣ. ಜಿಲ್ಲೆಯಲ್ಲಿ ಹೋಮ್‌ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಲಕ್ಷ್ಮಣರಿಗೆ ಲಡಾಖ್​ನ ಗಾಲ್ವಾನ್​ ಕಣಿವೆಯ ಘರ್ಷಣೆಯಲ್ಲಿ ಭಾರತೀಯ ಸೈನಿಕರು ಮೃತಪಟ್ಟಿದ್ದು ತೀವ್ರ ನೋವುಂಟುಮಾಡಿತ್ತು.

ಹಾಗಾಗಿ ಚೀನಾದ ಅಟ್ಟಹಾಸದಿಂದ ತೀವ್ರ ಆಕ್ರೋಶಗೊಂಡಿರುವ ಲಕ್ಷ್ಮಣ ಇದೀಗ ರಾಷ್ಟ್ರಪತಿ ಕೋವಿಂದ್​ ಅವರಿಗೆ ತನ್ನ ರಕ್ತದಲ್ಲಿ ಪತ್ರ ಬರೆದು ದೇಶಕ್ಕಾಗಿ ಸೇವೆ ಸಲ್ಲಿಸಲು ಒಂದು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

‘ನನ್ನ ದೇಶ ನನ್ನ ಭಾರತ’ ಲಕ್ಷ್ಮಣ ತಮ್ಮ ಪತ್ರದಲ್ಲಿ ನನ್ನ ದೇಶ ನನ್ನ ಭಾರತ. ಈ ಭಾರತ ದೇಶಕ್ಕಾಗಿ ನನ್ನ ಜೀವ ಸದಾ ಜೈ ಹಿಂದ್ ಅನ್ನುತ್ತದೆ. ದೇಶಕ್ಕಾಗಿ ಬಾಳದ ಬದುಕು ಬದುಕೇ ಅಲ್ಲ ನರಕವದು. ಭಾರತ ಮತ್ತು ಚೀನಾ ನಡುವೆ ಗಾಲ್ವಾನ್ ಪ್ರದೇಶದಲ್ಲಿ ಚೀನಿ ಸೈನಿಕರು ನನ್ನ ದೇಶದ ಯೋಧರ ಮೇಲೆ ಹಲ್ಲೆ ಮಾಡಿ ಅವರನ್ನ ಕೊಲೆಗೈದರು ಎಂಬ ವಿಷಯವು ನನ್ನ ಗಮನಕ್ಕೆ ಬಂದಾಗಿನಿಂದ ನನಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ.

ಆದ ಕಾರಣ ನನ್ನ ರಕ್ತವು ದೇಶ ಸೇವೆವಾಗಿ ಕುದಿಯುತ್ತಿದೆ. ಚೀನಿಯರ ವಿರುದ್ಧ ಸೇಡು ತೀರಿಸಿಕೊಳ್ಳಲು ಮಾನ್ಯ ಗೌರವಾನ್ವಿತ ರಾಷ್ಟ್ರಪತಿಗಳು ನನಗೆ ಗಡಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿ ಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ.  ಮೂಲಕ ದೇಶಸೇವೆಗಾಗಿ ತಾನು ಸದಾ ಸಿದ್ಧ ಎಂದು ತೋರಿಸಿಕೊಟ್ಟ್ಟಿದ್ದಾರೆ.

Published On - 2:09 pm, Sun, 21 June 20