ರಾಯಚೂರು: ರಾಯಚೂರಿನ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ(Raichur Thermal Power Station) ತಾಂತ್ರಿಕ ಸಮಸ್ಯೆಯಿಂದ ಆರ್ಟಿಪಿಎಸ್ನ 4 ಘಟಕಗಳು ಬಂದ್ ಆಗಿವೆ. ಒಟ್ಟು 8 ವಿದ್ಯುತ್ ಉತ್ಪಾದನಾ ಘಟಕ ಹೊಂದಿರುವ RTPS ಕೇಂದ್ರದಲ್ಲೀಗ 4 ಘಟಕಗಳು ಬಂದ್ ಆಗಿವೆ. ಇದರಿಂದ 1.720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ RTPSನಲ್ಲಿ ಕೇವಲ 560 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾತ್ರ ಆಗುತ್ತಿದೆ.
ವಾರ್ಷಿಕ ನಿರ್ವಹಣೆ ಸಮಯದಲ್ಲಿ ಬಾಯ್ಲರ್ ಟ್ಯೂಬ್ ಸೋರಿಕೆ ಕಂಡು ಬಂದಿದೆ. ಇದರಿಂದ 210 ಮೆಗಾ ವಾಟ್ ಸಾಮರ್ಥ್ಯದ 5ನೇ ವಿದ್ಯುತ್ ಘಟಕ ಮತ್ತು 6ನೇ ಘಟಕದ ವಿದ್ಯುತ್ ಉತ್ಪಾದನೆಯ ಹಾರುಬೂದಿ ಹೊರ ಹಾಕುವ ಪೈಪ್ ಲೈನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಕಾರಣ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಕಳೆದ 6 ತಿಂಗಳಿಂದ 1ನೇ ಘಟಕ ಸ್ಥಗಿತಗೊಳಿಸಲಾಗಿದೆ. ಈ ಘಟಕವನ್ನು ಸಂಪೂರ್ಣವಾಗಿ ಮರು ನಿರ್ಮಾಣಗೊಳಿಸುವ ಸಾಧ್ಯತೆ ಇರುವುದರಿಂದ ವಿದ್ಯುತ್ ಉತ್ಪಾದನೆ ನಿಲ್ಲಿಸಲಾಗಿದೆ.
ಇದನ್ನೂ ಓದಿ: SJVN Limited Recruitment 2023: ಜಲ ವಿದ್ಯುತ್ ನಿಗಮದ ನೇಮಕಾತಿ: ತಿಂಗಳ ಸಂಬಳ 45 ಸಾವಿರ ರೂ.
ಇಲ್ಲಿರುವ 8 ವಿದ್ಯುತ್ ಘಟಕಗಳಲ್ಲಿ 1, 4, 5 ಮತ್ತು 6ನೇ ವಿದ್ಯುತ್ ಘಟಕಗಳ ಉತ್ಪಾದನೆ ಸ್ಥಗಿತಗೊಂಡಿದ್ದರಿಂದ 1.720 ಮೆಗಾ ವಾಟ್ ಸಾಮರ್ಥ್ಯದ ಪೈಕಿ 560 ಮೆಗಾ ವಾಟ್ ಮಾತ್ರ ಉತ್ಪಾದನೆ ಆಗುತ್ತಿದೆ. ಕಲ್ಲಿದ್ದಲು ಗುಣಮಟ್ಟ ಮತ್ತು ಪೂರೈಕೆ ಪ್ರಮಾಣದಲ್ಲಿ ಯಾವುದೇ ತೊಂದರೆಯಿಲ್ಲ. ಸದ್ಯಕ್ಕೆ 3.20 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ದಾಸ್ತಾನಿದೆ. ಅಷ್ಟೇ ಅಲ್ಲದೆ ಮೂರು ಗಣಿಗಳು ಮತ್ತು ಆಮದು ಸೇರಿ ಪ್ರತಿದಿನ ತಲಾ 7-8 ರೈಲ್ವೆ ರೇಕ್ (ಪ್ರತಿ ರೇಕ್ 3,500 ಮೆಟ್ರಿಕ್ ಟನ್)ಗಳು ಆರ್‌ಟಿಪಿಎಸ್‌ಗೆ ತಲುಪುತ್ತಿವೆ ಎಂದು ಮೂಲಗಳು ತಿಳಿಸಿವೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:57 am, Tue, 24 January 23