ಗುಂಡಿನ ದಾಳಿ ನಡೆಸಿ ರಾಯಚೂರಿನ ವೈದ್ಯನ ಹತ್ಯೆಗೆ ಯತ್ನ: ಫೈರಿಂಗ್ ಮಾಡಿ ಎಸ್ಕೇಪ್​ ಆದ ದುಷ್ಕರ್ಮಿಗಳು

ಗುಂಡಿನ ದಾಳಿ ನಡೆಸಿ ಕಾರಿನಲ್ಲಿ ತೆರಳುತ್ತಿದ್ದ ವೈದ್ಯನ ಹತ್ಯೆಗೆ ಯತ್ನಿಸಿರುವಂತಹ ಘಟನೆ ರಾಯಚೂರು ಹೊರವಲಯದ ಸಾತ್‌ ಮೈಲ್‌ ಬಳಿ ನಡೆದಿದೆ. ರಾಯಚೂರಿನ ಬೆಟ್ಟದೂರು ಆಸ್ಪತ್ರೆಯ ವೈದ್ಯ ಜಯಪ್ರಕಾಶ್​ ಹತ್ಯೆಗೆ ಯತ್ನಿಸಲಾಗಿದ್ದು, ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಯಚೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

ಗುಂಡಿನ ದಾಳಿ ನಡೆಸಿ ರಾಯಚೂರಿನ ವೈದ್ಯನ ಹತ್ಯೆಗೆ ಯತ್ನ: ಫೈರಿಂಗ್ ಮಾಡಿ ಎಸ್ಕೇಪ್​ ಆದ ದುಷ್ಕರ್ಮಿಗಳು
ಕಾರಿಗೆ ಗುಂಡು ತಗುಲಿರುವುದು, ವೈದ್ಯ ಜಯಪ್ರಕಾಶ್
Updated By: ಗಂಗಾಧರ​ ಬ. ಸಾಬೋಜಿ

Updated on: Aug 31, 2023 | 7:36 PM

ರಾಯಚೂರು, ಆಗಸ್ಟ್​ 31: ಗುಂಡಿನ ದಾಳಿ (firing) ನಡೆಸಿ ಕಾರಿನಲ್ಲಿ ತೆರಳುತ್ತಿದ್ದ ವೈದ್ಯನ ಹತ್ಯೆಗೆ ಯತ್ನಿಸಿರುವಂತಹ ಘಟನೆ ರಾಯಚೂರು ಹೊರವಲಯದ ಸಾತ್‌ ಮೈಲ್‌ ಬಳಿ ನಡೆದಿದೆ. ರಾಯಚೂರಿನ ಬೆಟ್ಟದೂರು ಆಸ್ಪತ್ರೆಯ ವೈದ್ಯ ಜಯಪ್ರಕಾಶ್​ ಹತ್ಯೆಗೆ ಯತ್ನಿಸಲಾಗಿದೆ. ಕಾರು ಅಡ್ಡಗಟ್ಟಿ ಬೈಕ್‌ನಲ್ಲಿ ಬಂದಿದ್ದ ಇಬ್ಬರಿಂದ ಗುಂಡಿನ ದಾಳಿ ಮಾಡಿದ್ದು, ಒಂದು ಸುತ್ತು ಫೈರ್ ಮಾಡಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಕಾರಿನ ಬ್ಯಾನಟ್‌ಗೆ ಗುಂಡು ತಗುಲಿದ್ದರಿಂದ ಅದೃಷ್ಟವಶಾತ್‌ ವೈದ್ಯ ಜಯಪ್ರಕಾಶ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಯಚೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವೈದ್ಯ ಜಯಪ್ರಕಾಶ್​ ಚಾಲಕ ನರೇಂದ್ರ ಜೊತೆ ಮಾನ್ವಿಗೆ ಹೊರಟಿದ್ದರು. ಈ ವೇಳೆ ಮಾರ್ಗ ಮಧ್ಯೆ ಘಟನೆ ಸಂಭವಿಸಿದೆ. ಸದ್ಯ ಗುಂಡು ತಗುಲಿರುವ ಹುಂಡೈ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಯಚೂರು ಗ್ರಾಮೀಣ ಹಿಂಭಾಗದ ಮೈದಾನದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ ತಂಡದಿಂದ ಕಾರು ಪರಿಶೀಲನೆ ಮಾಡಲಾಗಿದೆ.

ಕಾಫಿನಾಡಿನಲ್ಲಿ ಬರಗಾಲಕ್ಕೆ ರೈತ ಬಲಿ 

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಬರಗಾಲಕ್ಕೆ ರೈತ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ. ಗರಿಯಾಪುರ‌ ಗ್ರಾಮದ ಸತೀಶ್ (49)ಆತ್ಮಹತ್ಯೆ ಮಾಡಿಕೊಂಡ ರೈತ.

ಇದನ್ನೂ ಓದಿ: ವಿಜಯಪುರ: ಮಹಿಳೆ ಜೊತೆ ಬಂದಿದ್ದ ಯುವಕ ಹೊಂಡಕ್ಕೆ ಹಾರಿ ಸಾವಿಗೆ ಶರಣು, ಮಹಿಳೆ ಎಸ್ಕೇಪ್

ಎರಡು ಎಕರೆ ಸೇರಿದಂತೆ ಮೂರು ಎಕರೆ ಗುತ್ತಿಗೆ ಪಡೆದು 5 ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದ. ಮಳೆಯಿಲ್ಲದೆ ಈರುಳ್ಳಿ ಬೆಳೆ ಸಂಪೂರ್ಣ ನಾಶ‌ವಾಗಿದ್ದು, ಮನನೊಂದು ಸತೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅನಾರೋಗ್ಯ ಹಿನ್ನಲೆ ರೈಲಿಗೆ ಸಿಲುಕಿ ವ್ಯಕ್ತಿ ಸಾವು

ಕೋಲಾರ: ಅನಾರೋಗ್ಯ ಹಿನ್ನಲೆ ರೈಲಿಗೆ ಸಿಲುಕಿ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಹುಣಸನಹಳ್ಳಿ ಬಳಿ ನಡೆದಿದೆ. ಹುಣಸನಹಳ್ಳಿ ನಿವಾಸಿ ಮುನಿರಾಜು (56) ಮೃತ ವ್ಯಕ್ತಿ. ಕಳೆದ ಹಲವು ದಿನಗಳಿಂದ ಕಿಡ್ನಿ ವೈಪಲ್ಯವಾಗಿ ಡಯಾಲಸಿಸ್​ನಲ್ಲಿದ್ದರು.

ಇದನ್ನೂ ಓದಿ: ಬೆಂಗಳೂರಿನ ಟಿಕ್​ ಟಾಕ್ ಸ್ಟಾರ್ ಮೈಸೂರಿನಲ್ಲಿ ಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು

ಇತ್ತೀಚೆಗೆ ಅನಾರೋಗ್ಯ ತೀವ್ರವಾಗಿ ಮನನೊಂದು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಬಂಗಾರಪೇಟೆ ರೈಲ್ವೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.