ರಾಯಚೂರು ಸರ್ಕಾರಿ ಶಾಲೆಯಲ್ಲಿ ಎಣ್ಣೆ ಪಾರ್ಟಿ, ಬಾಡೂಟ; ಮುಖ್ಯೋಪಾಧ್ಯಾಯರಿಂದ ದೂರು ದಾಖಲು

ಶಾಲಾ ಅಡುಗೆ ಕೋಣೆಯಲ್ಲಿದ್ದ ಮೊಟ್ಟೆ, ಹಾಲಿನಪುಡಿ, ಅಕ್ಕಿ, ಸಕ್ಕರೆ ಅಡುಗೆ ಬಳಸುವ ಎಣ್ಣೆ ಇನ್ನಿತರ ವಸ್ತುಗಳು ಕಳ್ಳತನವಾಗಿವೆ. ಮಕ್ಕಳಿಗಾಗಿ ನೀಡಲಾಗುತ್ತಿದ್ದ ಆಹಾರ ಪರಿಕರಗಳು ಕಳ್ಳತನವಾಗಿವೆ.

ರಾಯಚೂರು ಸರ್ಕಾರಿ ಶಾಲೆಯಲ್ಲಿ ಎಣ್ಣೆ ಪಾರ್ಟಿ, ಬಾಡೂಟ; ಮುಖ್ಯೋಪಾಧ್ಯಾಯರಿಂದ ದೂರು ದಾಖಲು
ಶಾಲೆಯ ದಾಖಲಾತಿಗಳ ಮೇಲೆ ಎಣ್ಣೆ ಬಾಟಲಿಗಳನ್ನ ಹಾಕಿದ್ದಾರೆ
Edited By:

Updated on: Jan 01, 2022 | 11:43 AM

ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ರಬ್ಬಣಕಲ್ ಕ್ಯಾಂಪ್​ನ ಸರ್ಕಾರಿ ಶಾಲೆಯ ಬೀಗ ಮುರಿದು ಹೊಸ ವರ್ಷದ ಎಣ್ಣೆ ಪಾರ್ಟಿ ಮಾಡಿದ್ದಾರೆ. ಆರೋಪಿಗಳು ಶಾಲೆಯ ಬಿಸಿಯೂಟ ಸಾಮಾಗ್ರಿಗಳನ್ನ ಬಳಸಿ ಮೊಟ್ಟೆ, ಮಾಂಸ ಬೇಯಿಸಿ ಪಾರ್ಟಿ ಮಾಡಿದ್ದಾರೆ. ಅಲ್ಲದೆ ಬಳಸಿದ ವಸ್ತುಗಳನ್ನ ಎಲ್ಲೆಂದರಲ್ಲಿ ಬಿಸಾಕಿದ್ದಾರೆ. ಶಾಲೆಯ ದಾಖಲಾತಿಗಳ ಮೇಲೆ ಮದ್ಯ ಸುರಿದು ವಿಕೃತಿ ಮೆರೆದಿದ್ದು, ಈ ಬಗ್ಗೆ ಮುಖ್ಯೋಪಾಧ್ಯಾಯರು ಮಾನ್ವಿ ಠಾಣೆಗೆ ದೂರು ನೀಡಿದ್ದಾರೆ.

ಶಾಲಾ ಅಡುಗೆ ಕೋಣೆಯಲ್ಲಿದ್ದ ಮೊಟ್ಟೆ, ಹಾಲಿನಪುಡಿ, ಅಕ್ಕಿ, ಸಕ್ಕರೆ ಅಡುಗೆ ಬಳಸುವ ಎಣ್ಣೆ ಇನ್ನಿತರ ವಸ್ತುಗಳು ಕಳ್ಳತನವಾಗಿವೆ. ಮಕ್ಕಳಿಗಾಗಿ ನೀಡಲಾಗುತ್ತಿದ್ದ ಆಹಾರ ಪರಿಕರಗಳು ಕಳ್ಳತನವಾಗಿವೆ. ಶಾಲೆಯ ಆವರಣದಲ್ಲಿ ಮದ್ಯದ ಬಾಟಲ್​ಗಳು, ಮಾಂಸದ ತುಂಡುಗಳು ಪತ್ತೆಯಾಗಿವೆ. ಇಂದು ಬೆಳಿಗ್ಗೆ ಶಾಲೆಗೆ ಬಂದಾಗ ಕಿಡಿಗೇಡಿಗಳು ಪಾರ್ಟಿ ಮಾಡಿರುವ ಬಗ್ಗೆ ಬೆಳಕಿಗೆ ಬಂದಿದೆ. ಸದ್ಯ ಮಾನ್ವಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇನ್ನು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಳಿಯ ರೆಸಾರ್ಟ್​ನಲ್ಲಿ ಮಸ್ತ್ ಪಾರ್ಟಿ ಮಾಡಿದ್ದಾರೆ. ಅಲ್ಲದೇ ಪಾರ್ಟಿ ಬಗ್ಗೆ ಪ್ರಶ್ನಿಸಿದ ಪೊಲೀಸ್ ಇನ್ಸ್​ಪೆಕ್ಟರ್ ಮೇಲೆಯೇ ಆರೋಪಿಗಳು ಹಲ್ಲೆಗೆ ಯತ್ನಿಸಿದ್ದಾರೆ. ವೈಟ್ ನಿರ್ವಾಣ ಜಡೇ ರೆಸಾರ್ಟ್ ಮಾಲೀಕ ಮತ್ತು ಸಹಚರರು ಚಿಕ್ಕಬಳ್ಳಾಪುರ ಇನ್ಸ್​ಪೆಕ್ಟರ್​ ಪ್ರಶಾಂತ್ ಎಂಬುವವರನ್ನ ಎಳೆದಾಡಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಅಗಲಗುರ್ಕಿ ಬಳಿಯ ರೆಸಾರ್ಟ್ನಲ್ಲಿ ರಾಜಾರೋಷವಾಗಿ ಡಿಜೆ ಹಾಕಿಕೊಂಡು ಪಾರ್ಟಿ ಮಾಡಿದ್ದಾರೆ. ಜೊತೆಗೆ ಕುಡಿದ ಮತ್ತಿನಲ್ಲಿ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ

New Year 2022: ಒಬ್ಬ ಆಟಗಾರ ಮಾತ್ರ ಮಿಸ್: ಟೀಮ್ ಇಂಡಿಯಾದ ಹೊಸ ವರ್ಷದ ಆಚರಣೆ ಹೇಗಿತ್ತು ನೋಡಿ

ಕೊಟ್ಟಿಗೆಹಾರ: ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್‌ನಲ್ಲಿ ಬೆಂಕಿ, ಸುಟ್ಟು ಕರಕಲಾದ ಬಸ್