New Year 2022: ಒಬ್ಬ ಆಟಗಾರ ಮಾತ್ರ ಮಿಸ್: ಟೀಮ್ ಇಂಡಿಯಾದ ಹೊಸ ವರ್ಷದ ಆಚರಣೆ ಹೇಗಿತ್ತು ನೋಡಿ
Indian Cricketers Celebrate New Year 2022: ಜನವರಿ 3 ರಿಂದ ಜೊಹಾನ್ಸ್ಬರ್ಗ್ನಲ್ಲಿ ದಕ್ಷಿಣ ಆಫ್ರಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಇಲ್ಲಿಗೆ ತೆರಳುವ ಮುನ್ನ ಹೋಟೆಲ್ನಲ್ಲಿ ಭಾರತೀಯ ಆಟಗಾರರು ಡಿನ್ನರ್ ಪಾರ್ಟಿ ಮೂಲಕ ಹೊಸ ವರ್ಷದ ಆಚರಣೆಯನ್ನು ಮಾಡಿಕೊಂಡಿದ್ದಾರೆ.
2021ಕ್ಕೆ ವಿದಾಯ ಹೇಳಿ 2022ನೇ (New Year 2022) ಇಸವಿಯನ್ನು ಹರುಷದಿಂದ ಸ್ವಾಗತಿದ್ದೇವೆ. ಕಳೆದ ವರ್ಷದ ಸುಂದರ ನೆನಪುಗಳನ್ನು ಮೆಲುಕು ಹಾಕುತ್ತಾ, ಜೀವನದ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಹೊಸ ಕನಸುಗಳೊಂದಿಗೆ ಸುಂದರ ಭವಿಷ್ಯದತ್ತ ಹೆಜ್ಜೆ ಇಡಲಿದ್ದೇವೆ. ಹೊಸ ವರ್ಷದ ಸ್ವಾಗತವನ್ನು ಇಡೀ ವಿಶ್ವವೇ ಮಾಡಿದೆ. ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ (India vs South Africa) ಕ್ರಿಕೆಟ್ ತಂಡದ ಆಟಗಾರರು ಕೂಡ ನ್ಯೂ ಇಯನ್ ಅನ್ನು ವಿಶೇಷವಾಗಿ ಸಂಭ್ರಮಿಸಿದ್ದಾರೆ. ಈಗಾಗಲೇ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು (Test Match) ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಖುಷಿಯಲ್ಲಿರುವ ವಿರಾಟ್ ಕೊಹ್ಲಿ (Virat Kohli) ಪಡೆಗೆ ಹೊಸ ವರ್ಷ ಸಂಭ್ರಮ ಮತ್ತಷ್ಟು ಮೆರಗು ನೀಡಿತು. ಆದರೆ, ಇಂಜುರಿ ಸಮಸ್ಯೆಯಿಂದಾಗಿ ಹೊರಗುಳಿದಿರುವ ಪ್ರಮುಖ ಆಟಗಾರ ರೋಹಿತ್ ಶರ್ಮಾ (Rohit Sharma) ಮಾತ್ರ ಅಲಭ್ಯರಾಗಿದ್ದರು. ಇವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ಜನವರಿ 3 ರಿಂದ ಜೊಹಾನ್ಸ್ಬರ್ಗ್ನಲ್ಲಿ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಇಲ್ಲಿಗೆ ತೆರಳುವ ಮುನ್ನ ಹೋಟೆಲ್ನಲ್ಲಿ ಭಾರತೀಯ ಆಟಗಾರರು ಡಿನ್ನರ್ ಪಾರ್ಟಿ ಮೂಲಕ ಹೊಸ ವರ್ಷದ ಆಚರಣೆಯನ್ನು ಮಾಡಿಕೊಂಡಿದ್ದಾರೆ. ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ದೀಪಕ್ ಚಹಾರ್ ಮತ್ತು ಪ್ರಿಯಾಂಕ್ ಪಂಚಲ್ ಫೋಟೋ ಹಂಚಿಕೊಂಡಿದ್ದಾರೆ.
ಇದರ ನಡುವೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಬಿಸಿಸಿಐ ಭಾರತ ತಂಡವನ್ನ ಪ್ರಕಟ ಮಾಡಿದೆ. ಸೀಮಿತ ಓವರ್ ತಂಡದ ನಾಯಕ ರೋಹಿತ್ ಶರ್ಮ ಗಾಯದಿಂದಾಗಿ ಏಕದಿನ ಸರಣಿಗೂ ಅಲಭ್ಯರಾಗಿದ್ದಾರೆ. ಇದರಿಂದ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಏಕದಿನ ಸರಣಿಗೆ ಹಂಗಾಮಿ ನಾಯಕರನ್ನಾಗಿ ನೇಮಿಸಲಾಗಿದೆ. ವೇಗಿ ಜಸ್‌ಪ್ರೀತ್ ಬುಮ್ರಾ ಹಂಗಾಮಿ ಉಪನಾಯಕರಾಗಿ ಬಡ್ತಿ ಪಡೆದಿದ್ದಾರೆ.
— Priyank Panchal (@PKpanchal9) December 31, 2021
View this post on Instagram
18 ಆಟಗಾರರ ತಂಡದಲ್ಲಿ ಸೀಮಿತ ಓವರ್ ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ ಸ್ಥಾನ ಪಡೆದಿದ್ದಾರೆ. ಕೊಹ್ಲಿ ಪುತ್ರಿಯ ಜನ್ಮದಿನ ಹಿನ್ನೆಲೆಯಲ್ಲಿ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದ್ದರೂ, ಪ್ರವಾಸಕ್ಕೆ ತೆರಳುವ ಮೊದಲೇ ಅವರು ಏಕದಿನದಲ್ಲೂ ಆಡುವುದಾಗಿ ಸ್ಪಷ್ಟಪಡಿಸಿದ್ದರು. ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ ಟಿ20 ಬಳಿಕ ಏಕದಿನ ತಂಡಕ್ಕೂ 4 ವರ್ಷಗಳ ಬಳಿಕ ಪುನರಾಗಮನ ಕಂಡಿದ್ದಾರೆ. ಏಕದಿನ ಸರಣಿಯ 3 ಪಂದ್ಯಗಳು ಜನವರಿ 19, 21 (ಪಾರ್ಲ್) ಮತ್ತು 23ರಂದು (ಕೇಪ್‌ಟೌನ್) ನಡೆಯಲಿವೆ.
ಏಕದಿನ ತಂಡ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿ.ಕೀ), ಇಶಾನ್ ಕಿಶನ್ (ವಿ.ಕೀ), ಯುಜ್ವೇಂದ್ರ ಚಹಾಲ್, ಆರ್. ಅಶ್ವಿನ್, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬುಮ್ರಾ (ಉಪನಾಯಕ), ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಪ್ರಸಿದ್ಧಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್.
Monu Goyat: ಎಂಥಾ ರೋಚಕ ಪಂದ್ಯ: ಒಂದೇ ರೇಡ್ನಲ್ಲಿ ಎಲ್ಲರನ್ನೂ ಆಲೌಟ್ ಮಾಡಿದ ಪಟ್ನಾ ಪೈರೇಟ್ಸ್ ರೇಡರ್
(Virat Kohli Team India celebrate new year 2022 with a quite dinner at the team hotel in South Africa)