Monu Goyat: ಎಂಥಾ ರೋಚಕ ಪಂದ್ಯ: ಒಂದೇ ರೇಡ್​ನಲ್ಲಿ ಎಲ್ಲರನ್ನೂ ಆಲೌಟ್ ಮಾಡಿದ ಪಟ್ನಾ ಪೈರೇಟ್ಸ್ ರೇಡರ್

Pro Kabaddi League: ಆರಂಭದಲ್ಲಿ ಉಭಯ ತಂಡಗಳು ಸಮಬಲದ ಪೈಪೋಟಿ ನಡೆಸಿದವು. ಮೋನು ಮತ್ತು ಸಚಿನ್‌ ಪಟ್ನಾ ಪೈರೇಟ್ಸ್‌ಗೆ ಮತ್ತು ಮಣಿಂದರ್ ಸಿಂಗ್ ಬೆಂಗಾಲ್‌ಗೆ ಪಾಯಿಂಟ್‌ಗಳನ್ನು ಗಳಿಸಿಕೊಟ್ಟರು. ಮೋನು ಗೋಯಟ್ 16 ರೇಡ್​​ಗಳಿಂದ 15 ಅಂಕ ಗಳಿಸಿದರು.

Monu Goyat: ಎಂಥಾ ರೋಚಕ ಪಂದ್ಯ: ಒಂದೇ ರೇಡ್​ನಲ್ಲಿ ಎಲ್ಲರನ್ನೂ ಆಲೌಟ್ ಮಾಡಿದ ಪಟ್ನಾ ಪೈರೇಟ್ಸ್ ರೇಡರ್
Monu Goyat Pro Kabaddi League
Follow us
TV9 Web
| Updated By: Vinay Bhat

Updated on: Jan 01, 2022 | 7:22 AM

ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ (Pro Kabaddi League) ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಪ್ರತಿಯೊಂದು ಪಂದ್ಯ ಕೂಡ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸುವಂತೆ ಮಾಡುತ್ತಿದೆ. ಅದರಂತೆ ಶುಕ್ರಾವರ ನಡೆದ ಎರಡು ಪಂದ್ಯ ಕೂಡ ಕುತೂಹಲ ಕೆರಳಿಸಿತ್ತು. ಇದರಲ್ಲಿ ಪಟ್ನಾ ಪೈರೇಟ್ಸ್ (Patna Pirates) ಮತ್ತು ತಮಿಳ್ ತಲೈವಾಸ್ (Tamil Thalaivas) ತಂಡಗಳು ಗೆಲುವು ಸಾಧಿಸಿದವು. ಅದರಲ್ಲೂ ಪಟ್ನಾ ತಂಡದ ರೇಡರ್ ಮೋನು ಗೋಯಟ್ (Monu Goyat) ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ಅನ್ನು ಒಂದೇ ರೇಡ್​ನಲ್ಲಿ ಆಲೌಟ್ ಮಾಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತು. ಒಂದೇ ದಾಳಿಯಲ್ಲಿ ಏಳು ಅಂಕಗಳನ್ನು ಗಳಿಸಿದರು. ಒಟ್ಟು 15 ಪಾಯಿಂಟ್ಸ್ ಕಲೆಹಾಕಿದ ಪಾಟ್ನ ಪೈರೇಟ್ಸ್‌ ಬೆಂಗಾಲ್ ವಾರಿಯರ್ಸ್ (Bengal Warriors) ವಿರುದ್ಧ 43-29 ಅಂತರದಲ್ಲಿ ಗೆಲುವು ಸಾಧಿಸಿತು.

ಆರಂಭದಲ್ಲಿ ಉಭಯ ತಂಡಗಳು ಸಮಬಲದ ಪೈಪೋಟಿ ನಡೆಸಿದವು. ಮೋನು ಮತ್ತು ಸಚಿನ್‌ ಪಟ್ನಾ ಪೈರೇಟ್ಸ್‌ಗೆ ಮತ್ತು ಮಣಿಂದರ್ ಸಿಂಗ್ ಬೆಂಗಾಲ್‌ಗೆ ಪಾಯಿಂಟ್‌ಗಳನ್ನು ಗಳಿಸಿಕೊಟ್ಟರು. ಕೊನೆಯಲ್ಲಿ ಮೋನು, ಸಚಿನ್‌ ಆಟ ಫಲ ಕಂಡಿತು. ಮೋನು ಗೋಯಟ್ 16 ರೇಡ್​​ಗಳಿಂದ 15 ಅಂಕ ಗಳಿಸಿದರು. ಆದರೆ, ಅವರ ರೇಡ್​ಗಳಲ್ಲಿ ಬೆರಗಾಗಿಸಿದ್ದು ಅವರ ಕೊನೆಯ ರೇಡ್. ಪಟ್ನಾ ಗೆಲುವು ಬಹುತೇಕ ಖಚಿತವಾಗಿದ್ದ ಸಮಯದಲ್ಲಿ ರೇಡಿಂಗ್ ಮಾಡಿದ ಮೋನು ಗೋಯಟ್ ಎದುರಾಳಿ ಅಂಗಳದ ಎಲ್ಲಾ ಏಳು ಮಂದಿಯನ್ನ ಔಟ್ ಮಾಡಿ ಬಂದರು.

ತಂಡಕ್ಕಾಗಿ ಸುನಿಲ್ 4 ಮತ್ತು ಪ್ರಶಾಂತ್ 3 ಪಾಯಿಂಟ್ ಗಳಿಸಿದರು. ಬೆಂಗಾಲ್ ಪರ ಮಣಿಂದರ್ ಸೂಪರ್ ಟೆನ್ (12 ಪಾಯಿಂಟ್‌) ಸಾಧನೆ ಮಾಡಿದರೆ ಅಮಿತ್‌ ನರ್ವಾಲ್ 5, ಸುಕೇಶ್ ಹೆಗ್ಡೆ ಮತ್ತು ಅಬೊಜರ್ ತಲಾ 3 ಪಾಯಿಂಟ್ ಗಳಿಸಿದರು. ಅಂತಿಮವಾಗಿ ಪಟ್ನಾ 44-30ರಲ್ಲಿ ಬೆಂಗಾಲ್ ವಾರಿಯರ್ಸ್‌ ತಂಡವನ್ನು ಮಣಿಸಿತು.

ಇತ್ತ ಮತ್ತೊಂದು ಪಂದ್ಯದಲ್ಲಿ ಎಂಟನೇ ಪ್ರೊ ಕಬಡ್ಡಿ ಆವೃತ್ತಿಯಲ್ಲಿ ತಮಿಳ್‌ ತಲೈವಾಸ್‌ ಮೊದಲ ಗೆಲುವು ಸಾಧಿಸಿತು. ಪುನೇರಿ ಪಲ್ಟಾನ್‌ ವಿರುದ್ಧ 36-26 ಅಂಕಗಳಿಂದ ಗೆದ್ದು ಬಂದಿತು. 4 ಪಂದ್ಯಗಳನ್ನಾಡಿರುವ ತಲೈವಾಸ್‌ ಎರಡನ್ನು ಟೈ ಮಾಡಿಕೊಂಡು, ಒಂದರಲ್ಲಿ ಸೋಲನುಭವಿಸಿತ್ತು. ತಲೈವಾಸ್‌ ಮೇಲುಗೈಯಲ್ಲಿ ರೈಡರ್‌ ಮನ್‌ಜೀತ್ ಸಾಹಸ ಮಹತ್ವದ್ದಾಗಿತ್ತು. ಅವರು 17 ರೈಡ್‌ ನಡೆಸಿ ಸರ್ವಾಧಿಕ 8 ಅಂಕ ತಂದಿತ್ತರು. 5 ಟಚ್‌ ಪಾಯಿಂಟ್‌ ಮತ್ತು 3 ಬೋನಸ್‌ ಪಾಯಿಂಟ್‌ ಇದರಲ್ಲಿ ಸೇರಿತ್ತು. 17ರಲ್ಲಿ 5 ರೈಡ್‌ ಯಶಸ್ವಿಯಾಗಿತ್ತು.

ಮನ್‌ಜೀತ್ ಹೊರತುಪಡಿಸಿದರೆ ನಾಯಕನೂ ಆಗಿರುವ ಡಿಫೆಂಡರ್‌ ಸುರ್ಜೀತ್‌ ಸಿಂಗ್‌ 3 ಅಂಕ ಗಳಿಸಿದರು. ಡಿಫೆಂಡರ್‌ಗಳಾದ ಸಾಗರ್‌ ಮತ್ತು ಸಾಹಿಲ್‌ ತಲಾ 2 ಅಂಕ ಕೊಡಿಸಿದರು. ವಿರಾಮದ ವೇಳೆ 18-11 ಮುನ್ನಡೆಯಲ್ಲಿದ್ದ ತಮಿಳ್‌ ತಲೈವಾಸ್‌ ಆಗಲೇ ಗೆಲುವಿನ ಸೂಚನೆ ನೀಡಿತ್ತು.

ಅತ್ತ ಪುಣೇರಿ ಪಲ್ಟಾನ್ಸ್ ತಂಡದ ಸ್ಟಾರ್ ರೇಡರ್ ರಾಹುಲ್ ಚೌಧರಿ ಈ ಪಂದ್ಯದಲ್ಲಿ ಮಂಕಾಗಿ ಹೋಗಿದ್ದರು. ಪಂಕಜ್ ಮೋಹಿತೆ ಮತ್ತು ಅಸ್ಲಮ್ ಒಂದಷ್ಟು ರೇಡಿಂಗ್ ಪಾಯಿಂಟ್ಸ್ ಗಿಟ್ಟಿಸಿದರು. ಪುಣೆ ಡಿಫೆನ್ಸ್​​ನಲ್ಲಿ ಅಬಿನೇಶ್ ನಡರಾಜನ್ ಮತ್ತು ವಿಶಾಲ್ ಭಾರದ್ವಜ್ ಮಿಂಚಿದರು.

IND vs SA: ಗೆಲುವಿನ ಸಂಭ್ರಮದಲ್ಲಿರುವ ಭಾರತಕ್ಕೆ ದಂಡದ ಬರೆ! ಡಬ್ಲ್ಯುಟಿಸಿ ಪಾಯಿಂಟ್​ಗೂ ಕತ್ತರಿ ಹಾಕಿದ ಐಸಿಸಿ

(Monu Goyat unthinkable he scored a mammoth seven points in a single raid and Tamil Thalaivas maiden win in Pro Kabaddi League)

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?